ಮಂಡ್ಯದಲ್ಲಿ ಬೆಳ್ಳಂಬೆಳ್ಳಿಗ್ಗೆ ಗುಂಡಿನ ಸದ್ದು: ರೌಡಿಶೀಟರ್‌ ಮೇಲೆ ಪೊಲೀಸರ ಫೈರಿಂಗ್‌..!

By Girish GoudarFirst Published Aug 11, 2024, 8:41 AM IST
Highlights

ಡಕ್ಕ ಚಿಕ್ಕಮಲಗೂಡು ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಡಕ್ಕ ಬೈಕ್ ನಲ್ಲಿ ಹೋಗುತ್ತಿರುವಾಗ ಆರೋಪಿಯನ್ನ ಹಿಡಿಯಲು ಸಿಪಿಐ ಶ್ರೀಧರ್ ಅಂಡ್ ಟೀಂ ಮುಂದಾಗಿತ್ತು. ಈ ವೇಳೆ ಬೈಕ್ ಬೀಳಿಸಿ ಡಕ್ಕ ಓಡಲು ಮುಂದಾಗಿದ್ದ, ಈ ವೇಳೆ ಹಿಡಿಯಲು ಮುಂದಾದ ಪೇದೆ ಮೇಲೆ ಡ್ರ್ಯಾಗನ್ ನಿಂದ ಹಲ್ಲೆ ನಡೆಸಿದ್ದ. ಆರೋಪಿ ಡಕ್ಕ‌ ಏರ್ ಫೈರ್ ವಾರ್ನಿಂಗ್ ಬಗ್ಗಲಿಲ್ಲ ಕೊನೆಗೆ ತಮ್ಮ ಆತ್ಮರಕ್ಷಣೆಗಾಗಿ ಸಿಪಿವೈ ಶ್ರೀಧರ್ ರಿಂದ ಫೈರಿಂಗ್ ಮಾಡಿದ್ದಾರೆ. 
 
ಮಂಡ್ಯ(ಆ.11):  ಮಂಡ್ಯದಲ್ಲಿ ಇಂದು(ಭಾನುವಾರ) ಬೆಳ್ಳಂಬೆಳ್ಳಿಗ್ಗೆ ಗುಂಡಿನ ಸದ್ದು ಕೇಳಿದೆ. ಹೌದು, ರೌಡಿಶೀಟರ್ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ. ಡಕ್ಕ ಅಲಿಯಾಸ್‌ ಮುತ್ತುರಾಜ್‌ನ ಮೇಲೆ ಹಲಗೂರು ಠಾಣಾ ಸಿಪಿವೈ ಶ್ರೀಧರ್ ಫೈರಿಂಗ್ ಮಾಡಿದ್ದಾರೆ ಎಂದು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. 

ಜುಲೈ 30 ರಂದು ಕಾಂತರಾಜು ಎಂಬಾತನ ಕೊಲೆ ನಡೆದಿತ್ತು.  ಆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಸಿಪಿವೈ ಶ್ರೀಧರ್ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಆರಂಭಿಸಿದ್ದರು. ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿತ್ತು.

Latest Videos

Gadag: ಪೊಲೀಸರ ಮೇಲೆ ಕಲ್ಲೆಸೆದು ಎಸ್ಕೇಪ್ ಆಗಲು ಯತ್ನಿಸಿದ್ದ 'ನಕಲಿ ಪೊಲೀಸ್' ಮೇಲೆ ಫೈರಿಂಗ್!

ತನಿಖೆ ವೇಳೆ ಕಾಂತರಾಜು ಕೊಲೆಗೆ ಮುತ್ತುರಾಜ ಅಲಿಯಾಸ್ ಡಕ್ಕ ಎಂಬಾತನಿಂದ ಸುಫಾರಿ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದರು. ಡಕ್ಕ ಅಲಿಯಾಸ್ ಮುತ್ತುರಾಜ್ ಸೂಚನೆ ಮೇಲೆ ಕೊಲೆ ನಡೆಸಿರುವುದಾಗಿ ಆರೋಪಿಗಳ ತಪ್ಪೊಪ್ಪಿಕೊಂಡಿದ್ದರು.

ಡಕ್ಕ ಚಿಕ್ಕಮಲಗೂಡು ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಡಕ್ಕ ಬೈಕ್ ನಲ್ಲಿ ಹೋಗುತ್ತಿರುವಾಗ ಆರೋಪಿಯನ್ನ ಹಿಡಿಯಲು ಸಿಪಿಐ ಶ್ರೀಧರ್ ಅಂಡ್ ಟೀಂ ಮುಂದಾಗಿತ್ತು. ಈ ವೇಳೆ ಬೈಕ್ ಬೀಳಿಸಿ ಡಕ್ಕ ಓಡಲು ಮುಂದಾಗಿದ್ದ, ಈ ವೇಳೆ ಹಿಡಿಯಲು ಮುಂದಾದ ಪೇದೆ ಮೇಲೆ ಡ್ರ್ಯಾಗನ್ ನಿಂದ ಹಲ್ಲೆ ನಡೆಸಿದ್ದ. ಆರೋಪಿ ಡಕ್ಕ‌ ಏರ್ ಫೈರ್ ವಾರ್ನಿಂಗ್ ಬಗ್ಗಲಿಲ್ಲ ಕೊನೆಗೆ ತಮ್ಮ ಆತ್ಮರಕ್ಷಣೆಗಾಗಿ ಸಿಪಿವೈ ಶ್ರೀಧರ್ ರಿಂದ ಫೈರಿಂಗ್ ಮಾಡಿದ್ದಾರೆ. 

ತುಮಕೂರು: ಸ್ಥಳ ಮಹಜರು ಮಾಡುವ ವೇಳೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನ, ರೌಡಿ ಶೀಟರ್‌ ಮೇಲೆ ಪೊಲೀಸ್‌ ಫೈರಿಂಗ್‌.

ಡಕ್ಕನ ಬಲಗಾಲಿಗೆ ಗುಂಡೇಟು ತಗುಲಿದೆ. ಮುತ್ತುರಾಜ್‌ ಅಲಿಯಾಸ್ ಡಕ್ಕ 11 ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. 3 ಕೊಲೆ, 3 ಕೊಲೆಗೆ ಯತ್ನ, 2 ರಾಬರಿ ಪ್ರಕರಣ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನಷ್ಟು ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. 

ಆರೋಪಿ ಡಕ್ಕ ಹಲವು ಹುಡುಗರ ಗುಂಪು ಕಟ್ಟಿಕೊಂಡು ರೌಡಿ ಆಕ್ಟಿವಿಟಿಯಲ್ಲಿದ್ದ. 2019 ರಿಂದ ರೌಡಿ ಆಕ್ಟಿವಿಟಿ ಮೂಲಕ ಹವಾ ಸೃಷ್ಟಿಸಿದ್ದ, ಇಸ್ವೀಟ್ ಆಡಿಸುವ ದಂಧೆಗೂ ಇಳಿದಿದ್ದ. ಡಕ್ಕನ ಹುಡುಗರಿಗೂ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. 

click me!