ಕಲಬುರಗಿ: ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿ, ದರೋಡೆಕೋರನ ಮೇಲೆ ಫೈರಿಂಗ್‌..!

By Girish Goudar  |  First Published Aug 31, 2024, 11:09 PM IST

ಅವತಾರ ಸಿಂಗ್ ಢಾಬಾವೊಂದರ ರಾಬರಿ ಕೇಸ್ ನಲ್ಲಿ ಪೊಲೀಸರಿಗೆ ಬೇಕಾಗಿದ್ದ, ಕಳೆದ ಮೂರು ದಿನಗಳಿಂದ ಅವತಾರ ಸಿಂಗ್ ಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಇಂದು ಉಪಳಾಂವ ಕ್ರಾಸ್ ಬಳಿ ಇರುವ ಮಾಹಿತಿ ಮೇರೆಗೆ ಅರೆಸ್ಟ್ ಮಾಡಲು ಪೊಲೀಸರು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಚಾಕುಯಿಂದ ದಾಳಿಗೆ ಮುಂದಾದಾಗ ಅವತಾರ ಸಿಂಗ್ ಮೇಲೆ ಫೈರಿಂಗ್ ಮಾಡಿದ್ದಾರೆ. 


ಕಲಬುರಗಿ(ಆ.31):  ಕುಖ್ಯಾತ ದರೋಡೆಕೋರ ಪೊಲೀಸರು ಗುಂಡಿನ ದಾಳಿ ನಡೆಸಿದ ಘಟನೆ ಇಂದು(ಶನಿವಾರ) ನಗರದಲ್ಲಿ ನಡೆದಿದೆ. ಕುಖ್ಯಾತ ದರೋಡೆಕೋರ ಅವತಾರ್ ಸಿಂಗ್ ಮೇಲೆ ಕಲಬುರಗಿ ಸಿಟಿ ಪೊಲೀಸರು ಫೈರಿಂಗ್ ಮಾಡಿದ್ದಾರೆ.  

ಪೊಲೀಸರು ನಡೆಸಿದ ಫೈರಿಂಗ್‌ನಲ್ಲಿ ಆರೋಪಿ ಕಾಲಿಗೆ ಗುಂಡೇಟು ತಗುಲಿದೆ. ಆರೋಪಿ ಅವತಾರ್ ಸಿಂಗ್ ಕಲಬುರಗಿ ವಿವಿಧ ಠಾಣೆ ಪೊಲೀಸರಿಗೆ ಬೇಕಾಗಿದ್ದನು. ಅವತಾರ ಸಿಂಗ್ ಢಾಬಾವೊಂದರ ರಾಬರಿ ಕೇಸ್ ನಲ್ಲಿ ಪೊಲೀಸರಿಗೆ ಬೇಕಾಗಿದ್ದ, ಕಳೆದ ಮೂರು ದಿನಗಳಿಂದ ಅವತಾರ ಸಿಂಗ್ ಗಾಗಿ ಪೊಲೀಸರು ಹುಡುಕಾಡುತ್ತಿದ್ದರು. ಇಂದು ಉಪಳಾಂವ ಕ್ರಾಸ್ ಬಳಿ ಇರುವ ಮಾಹಿತಿ ಮೇರೆಗೆ ಅರೆಸ್ಟ್ ಮಾಡಲು ಪೊಲೀಸರು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಚಾಕುಯಿಂದ ದಾಳಿಗೆ ಮುಂದಾದಾಗ ಅವತಾರ ಸಿಂಗ್ ಮೇಲೆ ಫೈರಿಂಗ್ ಮಾಡಿದ್ದಾರೆ. 

Tap to resize

Latest Videos

undefined

ಮಂಡ್ಯದಲ್ಲಿ ಬೆಳ್ಳಂಬೆಳ್ಳಿಗ್ಗೆ ಗುಂಡಿನ ಸದ್ದು: ರೌಡಿಶೀಟರ್‌ ಮೇಲೆ ಪೊಲೀಸರ ಫೈರಿಂಗ್‌..!

ಗುಂಡೇಟಿನಿಂದ ಗಾಯಗೊಂಡ ದರೋಡೆಕೋರನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಸಾಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪೊಲೀಸರ ಮೇಲೆಯೇ ಚಾಕುವಿನಿಂದ ದಾಳಿ ಮಾಡಿ ಅವತಾರ್ ಸಿಂಗ್ ಎಸ್ಕೇಪ್ ಆಗಲು ಯತ್ನಿಸಿದ್ದ. ಈ ವೇಳೆ ಅವತಾರ್ ಸಿಂಗ್ ಬಲಗಾಲಿಗೆ ಸಬ್ ಅರ್ಬನ್ ಠಾಣೆ ಇನ್ಸ್‌ಪೆಕ್ಟರ್ ಸಂತೋಷ ತಟ್ಟೆಂಪಲ್ಲಿ ಗುಂಡು ಹೊಡೆದಿದ್ದರು. ಒಂದು ಸುತ್ತು ಗಾಳಿಯಲ್ಲಿ ಗುಂಡಿ ಹಾರಿಸಿ ಬಳಿಕ ಕಾಲಿಗೆ ಫೈರಿಂಗ್ ಮಾಡಿದ್ದಾರೆ. ದರೋಡೆ, ರಾಬರಿ ಸೇರಿ ಅವತಾರ್ ಸಿಂಗ್ ಮೇಲೆ 13 ಕೇಸ್‌ಗಳು ದಾಖಲಾಗಿವೆ. 

ಆತ್ಮರಕ್ಷಣೆಗಾಗಿ ಪಿಐ ಸಂತೋಷ ತಟ್ಟೆಂಪಲ್ಲಿ ಅರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗೆ ಗಾಯವಾಗಿದ್ದು ನಗರದ ಟ್ರಾಮಾ ಕೇರ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆಸ್ಪತ್ರೆಗೆ ಕಲಬುರಗಿ ನಗರ ಪೊಲೀಸ್ ಕಮೀಷನರ್ ಡಾ.ಶರಣಪ್ಪ ಅವರು ಭೇಟಿ ನೀಡಿದ್ದಾರೆ. 

click me!