ಎಲೆಕ್ಷನ್‌ನಲ್ಲಿ ಸೋತ ಸಹೋದರ- ತಾಯಿ: ಗೆದ್ದವನ ಕೊಲೆಗೆ ಸುಪಾರಿ ಕೊಟ್ಟ ಪೊಲೀಸಪ್ಪ..!

Published : Jun 09, 2022, 02:31 PM IST
ಎಲೆಕ್ಷನ್‌ನಲ್ಲಿ ಸೋತ ಸಹೋದರ- ತಾಯಿ: ಗೆದ್ದವನ ಕೊಲೆಗೆ ಸುಪಾರಿ ಕೊಟ್ಟ ಪೊಲೀಸಪ್ಪ..!

ಸಾರಾಂಶ

*  ವೈಯಕ್ತಿಕ ಧ್ವೇಷದ ಹಿನ್ನೆಲೆ ಸುಪಾರಿ ಕೊಟ್ಟ ಪೊಲೀಸ್ ಪೇದೆ *  ಜನರನ್ನು ಕಾಪಾಡಬೇಕಾದ ಪೇದೆಯಿಂದಲೇ ಸುಪಾರಿ *  ತಾಯಿ ಮತ್ತು ಅಣ್ಣನ ಸೋಲಿನಿಂದ ಹತಾಷೆಗೊಂಡ ಪೇದೆ  

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ವಿಜಯನಗರ 

ವಿಜಯನಗರ(ಜೂ.09): ಸಾಮಾನ್ಯವಾಗಿ ಮಹಾನಗರಗಳಲ್ಲಿ (ಮೆಟ್ರೋಪಾಲಿಟಿನ್ ಸಿಟಿ)  ಹಣ, ಅಧಿಕಾರ ಸೇರಿದಂತೆ ವಯಕ್ತಿಕ ಧ್ವೇಷಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸೋ ಘಟನೆಗಳು ನಡೆಯುತ್ತಿದೆ. ಆದ್ರೇ, ಇದೀಗ ಈ ಸಂಸ್ಕೃತಿ ಹಳ್ಳಿ ಮತ್ತು ತಾಂಡ ಲೇವಲ್‌ಗೂ ಬಂದಿರೋದು ದುರ್ದೈವದ ಸಂಗತಿಯಾಗಿದೆ. ಹೌದು, ಈ ರೀತಿಯ ಕುಕೃತ್ಯ ಮಾಡಿರೋದು ಏನು ಅರಿಯದ ಅಮಾಯಕರಲ್ಲ. ಬದಲಾಗಿ ಎಲ್ಲವನ್ನು ತಿಳಿದಿರೋ ಮತ್ತು ಸಮಾಜದಲ್ಲಿ ಶಾಂತಿ ಕಾಪಾಡೋ ಪೋಲಿಸ್ ಪೇದೆ ಅನ್ನೋದೇ ದುರಾದೃಷ್ಟಕರ ವಿಷಯವಾಗಿದೆ. ತಾಯಿ ಮತ್ತು ಸಹೋದರ ಚುನಾವಣೆಯಲ್ಲಿ ಸೋತಿದ್ದಾರೆನ್ನುವ ಕಾರಣಕ್ಕೆ ಪ್ರತಿಸ್ಪರ್ಧಿಯ ಕೊಲೆಗೆ ಸುಪಾರಿ ಕೊಟ್ಟ ಪೇದೆ ಇದೀಗ ನಾಪತ್ತೆಯಾಗಿದ್ದಾನೆ.

ಗ್ರಾಮ ಪಂಚಾಯಿತಿ ಚುನಾವಣೆಯ ಧ್ವೇಷದ ರಾಜಕೀಯ

ಹೌದು, ಚುನಾವಣೆಯಲ್ಲಿ ಸಹೋದರ- ತಾಯಿಯ ಸೋಲಿಸಿದ ಹಿನ್ನೆಲೆ ಪ್ರತಿಸ್ಪರ್ಧಿಯಾಗಿದ್ದ ಗ್ರಾಮ ಪಂಚಾಯತಿ ಸದಸ್ಯನ ಕೊಲೆಗೆ 10 ಲಕ್ಷ - ಹೊಸ ಮನೆ ಕಟ್ಟಿಸಿಕೊಡುವ ಭರವಸೆ ನೀಡಿರೋ ಆಡಿಯೋ ಸಿಕ್ಕಿರೋ ಹಿನ್ನೆಲೆ ಹೊಸಪೇಟೆ ಟ್ರಾಫಿಕ್ ಪೇದೆ ಪರಶುರಾಮ ನಾಯ್ಕ್ ವಿರುದ್ಧ ಇದೀಗ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಪೇದೆ ಪರುಶುಪಾರಮ ನಾಪತ್ತೆಯಾಗಿದ್ದು, ಪೊಲಿಸರು ಹುಡುಕಾಟ ನಡೆಸುತ್ತಿದ್ದಾರೆ.

ಸೀರೆ ವ್ಯಾಪಾರದ ಸೋಗಲ್ಲಿ ಬೆಂಗ್ಳೂರಲ್ಲಿ ಗಾಂಜಾ ಮಾರಾಟ: ಐವರ ಬಂಧನ

ಘಟನೆ ಹಿನ್ನೆಲೆ

ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪೇದೆ ಪರುಶುರಾಮ ಸಹೋದರ ದೇವೇಂದ್ರ ನಾಯ್ಕ್ ಹಾಗೂ ಸೊಸೈಟಿ ಚುನಾವಣೆಯಲ್ಲಿ ತಾಯಿ ಯಮುನಿಬಾಯಿ ಸೋತಿದ್ರು. ಇದರಿಂದಾಗಿ ತಾಂಡದಲ್ಲಿ ಆಗಾಗ ಜಗಳದ ಜೊತೆ ಕಲುಷಿತ ವಾತಾವರಣ ಸೃಷ್ಟಿಯಾಗಿತ್ತು. ಇದನ್ನೇ ನೆಪ ಮಾಡಿ ಕೊಂಡ ಪೇದೆ ಪರುಶುರಾಮ ತನ್ನ ಸಹೋದರ ದೇವೇಂದ್ರ ನಾಯ್ಕ್ ಸೋಲಿಸಿದ ಆನೇಕಲ್ ತಾಂಡಾದ ಗ್ರಾಮ ಪಂಚಾಯತಿಯ ಸದಸ್ಯ ಪಾಂಡು ನಾಯ್ಕ್‌ನ ಕೊಲೆಗೆ ಸ್ಕಚ್ ಹಾಕಿ ಸುಪಾರಿ ಕೊಟ್ಟಿದ್ದಾನೆ. 

ಆನೇಕಲ್ ತಾಂಡದ ರವಿ ನಾಯ್ಕ್ ಎನ್ನುವವರಿಗೆ ಕರೆ ಮಾಡಿದ ಪರುಶುರಾಮ ಪಾಂಡು ನಾಯ್ಕ ಕೊಲೆ ಮಾಡಿದ್ರೆ, 10 ಲಕ್ಷ ನಗದು ಮತ್ತು ಒಂದು ಮನೆ ಕಟ್ಟಿಸೋ ಬಗ್ಗೆ ಪೋನಿನಲ್ಲಿ ಮಾತನಾಡಿದ್ದಾನೆ. ಆರಂಭದಲ್ಲಿ ಈ ಡೀಲ್ ಒಪ್ಪಿಕೊಂಡ ರವಿನಾಯ್ಕ ನಂತರ ಭಯಗೊಂಡು ಇರೋ ವಿಷಯವನ್ನು ಗ್ರಾಮ ಪಂಚಾಯಿತಿ ಸದಸ್ಯ ಪಾಂಡು ನಾಯ್ಕ ಮತ್ತು ಗ್ರಾಮದ ಮುಖಂಡರಲ್ಲಿ ತಿಳಿಸುತ್ತಾನೆ. ಈ ಕುರಿತು ಆಡಿಯೋ ದಾಖಲೆಯೊಂದಿಗೆ ನೀಡುತ್ತಾನೆ. ಇದನ್ನೇ ಆಧಾರವಾಗಿಟ್ಟುಕೊಂಡು ಪೇದೆ ಪರುಶುರಾಮ್ ನಾಯ್ಕ ವಿರುದ್ಧ ದೂರು ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.

Bengaluru: ಬಾರ್ ಮುಂದೆ ಗಲಾಟೆ: ಅಣ್ಣನಿಂದಲೇ ತಮ್ಮನ ಹತ್ಯೆ!

ದೂರು ದಾಖಲಾಗುತ್ತಿದ್ದಂತೆ ಪೇದೆ ಎಸ್ಕೆಪ್

ಇನ್ನೂ ಹಗರಿಬೊಮ್ಮನಹಳ್ಳಿ ಠಾಣೆಯಲ್ಲಿ ಆಡಿಯೋ ದಾಖಲೆ ಸಮೇತ ದೂರು ದಾಖಲಾಗುತ್ತಿದ್ದಂತೆ ಹೊಸಪೇಟೆಯ ಟ್ರಾಫಿಕ್ ಠಾಣೆಯಲ್ಲಿ ಪೇದೆಯಾಗಿದ್ದ ಪರುಶುರಾಮ್ ನಾಯ್ಕ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಸಹೋದ್ಯೋಗಿ ಪೊಲಿಸರು ಎಷ್ಟೇ ಬಾರಿ ಕರೆ ಮಾಡಿದ್ರೂ ಆರಂಭದಲ್ಲಿ ಪೋನ್ ರಿಸಿವ್ ಮಾಡದ ಪರಶುರಾಮ್ ಇದೀಗ ಪೋನ್ ಸ್ವಿಚ್ಡ್‌ಆಫ್ ಮಾಡಿಕೊಂಡಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರೋ ವಿಜಯನಗರ ಎಸ್ಪಿ ಅರುಣ್ ಕುಮಾರ ಪ್ರಕರಣದ ತನಿಖೆ ಚುರುಕುಗೊಳಿಸಿದ್ದು, ಅಮಾನತು ಮಾಡೋ ಬಗ್ಗೆ ಚಿಂತನೆ ನಡೆಸಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಜಟಾಪಟಿ

ಇನ್ನೂ ಕೊಲೆ ಮಾಡಲು ಸುಪಾರಿ ಕೊಟ್ಟ ಪೇದೆ ಪರುಶುರಾಮ್ ಕುಟುಂಬ ಬಿಜೆಪಿ ಕಡೆಯಿಂದ ಗುರುತಿಸಿಕೊಂಡಿದ್ರೆ, ಕೊಲೆಗೊಳಗಾಗಬೇಕಿದ್ದ ಪಾಂಡುನಾಯ್ಕ ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಎರಡು ಕಡೆ ಪರವಿರೋಧ ಬಗ್ಗೆ ಗ್ರಾಮದಲ್ಲಿ ಚರ್ಚೆಯಾಗುತ್ತಿದೆ. ಹೀಗಾಗಿ ತನಿಖೆ ಪಾರದರ್ಶಕವಾಗಿ ನಡೆದ್ರೇ ಮಾತ್ರ ತಪ್ಪಿತಸ್ಥರು ಶಿಕ್ಷೆಯಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು