ಜೈಲಲ್ಲೇ ಪೋಕ್ಸೊ ಆರೋಪಿ ನೇಣಿಗೆ ಶರಣು!

By Ravi Janekal  |  First Published Oct 2, 2022, 12:08 PM IST

ಬೆಳಗಾವಿಯ ಹಿಡಲಗಾ ಜೈಲಿನಲ್ಲಿ ವಿಚಾರಣಾಧೀನ ಪೋಕ್ಸೊ ಆರೋಪಿ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಳೆದ ಮೂರು ತಿಂಗಳ ಹಿಂದೆ ಪೋಕ್ಸೊ ಪ್ರಕರಣದಲ್ಲಿ ಬಂಧಿಸಲಾಗಿತ್ತು.


ಬೆಳಗಾವಿ (ಅ.2): ಬೆಳಗಾವಿಯ ಹಿಡಲಗಾ ಜೈಲಿನಲ್ಲಿ ವಿಚಾರಣಾಧೀನ ಪೋಕ್ಸೊ ಆರೋಪಿ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕಳೆದ ಮೂರು ತಿಂಗಳ ಹಿಂದೆ ಪೋಕ್ಸೊ ಪ್ರಕರಣದಲ್ಲಿ ಬಂಧಿಸಲಾಗಿತ್ತು.

ಗೋಕಾಕ: ಬೇರೊಬ್ಬರ ಮನೆ ಮುಂದೆ ಮುಸ್ಲಿಂ ಮಹಿಳೆ ಆತ್ಮಹತ್ಯೆ

Tap to resize

Latest Videos

ಆರೋಪಿ ಕಳೆದ ಮೂರು ತಿಂಗಳಿನಿಂದ ಹಿಡಲಗಾ ಜೈಲಿನಲ್ಲಿದ್ದ.  ಕಿತ್ತೂರು ತಾಲೂಕಿನ ಬಚ್ಚನಕೇರಿ ಗ್ರಾಮದ ಯುವಕ ಮಂಜುನಾಥ ಮಹಾಂತೇಶ ನಾಯ್ಕರ (20) ಎಂಬ ಯುವಕನೇ ಇಂದು ಜೈಲಿನಲ್ಲಿ ನೇಣಿಗೆ ಶರಣಾಗಿದ್ದಾನೆ.

ಆರೋಪಿ ಮಹಾಂತೇಶ ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಕುರಿತು ಕಳೆದ 3 ತಿಂಗಳ ಹಿಂದೆ ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಇದೀಗ ಆರೋಪಿಯು ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಸಾಲಬಾಧೆ, ರೈತ ಆತ್ಮಹತ್ಯೆ :

ರಟ್ಟಿಹಳ್ಳಿ: ಸಾಲಬಾಧೆ ಹಾಗೂ ಬೆಳೆ ಹಾನಿಯಿಂದ ಬೇಸತ್ತು ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಗುಂಡಗಟ್ಟಿಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗದಿಗೆಪ್ಪ ಪಾಲಾಕ್ಷಪ್ಪ ಪೂಜಾರ (52) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಕೃಷಿ ಕಾರ್ಯಕ್ಕಾಗಿ ಇಂಗಳಗೊಂದಿ ಸಹಕಾರಿ ಸಂಘದಲ್ಲಿ . 40 ಸಾವಿರ, ಸ್ವಸಹಾಯ ಸಂಘದಲ್ಲಿ . 50 ಸಾವಿರ ಹಾಗೂ ಕೈಗಡವಾಗಿ . 5 ಲಕ್ಷ ಸಾಲ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಮನೆ ಗೋಡೆ ಕುಸಿದಿತ್ತು. ಫಸಲು ಕೂಡ ಹಾಳಾದ್ದರಿಂದ ಮನನೊಂದು ಮನೆಯ ಹಿಂಭಾಗದ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ.

ಕುಟುಂಬ ಕಲಹ: ವ್ಯಕ್ತಿ ಆತ್ಮಹತ್ಯೆ

ದಾಬಸ್‌ಪೇಟೆ: ಕೌಟುಂಬಿಕ ಕಲಹದಿಂದ ಮನನೊಂದಿದ್ದ ವ್ಯಕ್ತಿ ನೇಣಿಗೆ ಶರಣಾಗಿರುವ ಘಟನೆ ದಾಬಸ್‌ಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಂಪುರ ಹೋಬಳಿಯ ಶಿವಗಂಗೆ ಗ್ರಾಪಂ ವ್ಯಾಪ್ತಿಯ ಘಂಟೆಹೊಸಹಳ್ಳಿ ಚೌಡಯ್ಯ(39) ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿ. ಆಗಾಗ ಪತಿ - ಪತ್ನಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಇದರಿಂದ ಬೇಸತ್ತು ಕಳೆದ ವಾರ ಆತನ ಪತ್ನಿ ತವರು ಮನೆಗೆ ತೆರಳಿದ್ದರು ಎನ್ನಲಾಗಿದೆ. ಸೆ.30ರಂದು ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಬಾಗಿಲು ತೆರೆಯದ ಕಾರಣ ಅಕ್ಕಪಕ್ಕದ ಮನೆಯವರು ಬಾಗಿಲು ತೆಗೆದು ನೋಡಿದಾಗ ಸಾವನ್ನಪ್ಪಿರುವುದು ಕಂಡು ಬಂದಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ದಾಬಸ್‌ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾಲಬಾಧೆ: ಬೀಗ ಹಾಕಿದ ಬೇರೆಯವರ ಮನೆ ಗ್ಯಾಲರಿಯಲ್ಲಿ ಮಹಿಳೆ ನೇಣಿಗೆ ಶರಣು

click me!