ಹೈದರಾಬಾದ್: ರಸ್ತೆ ಅಪಘಾತದ ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೇಶದಲ್ಲಿ ಪ್ರತಿದಿನ ನೂರಾರು ಅಪಘಾತಗಳಾಗುತ್ತಿದೆ ಅವುಗಳ ಹಲವು ಭಯಾನಕ ದೃಶ್ಯಗಳನ್ನು ನೀವು ಈಗಾಗಲೇ ನೋಡಿರಬಹುದು. ಈಗ ತೆಲಂಗಾಣದಲ್ಲಿ ನಡೆದ ಅಪಘಾತವೊಂದರ ದೃಶ್ಯ ವೈರಲ್ ಆಗಿದೆ.
ಸಾಮಾನ್ಯವಾಗಿ ಕೂಲಿ ಕೆಲಸಕ್ಕೆ ಅಥವಾ ಕಟ್ಟಡ ನಿರ್ಮಾಣ ಕೆಲಸಕ್ಕೆ ತೆರಳುವ ಕಾರ್ಮಿಕರನ್ನ ಕೆಲಸದ ಸ್ಥಳಕ್ಕೆ ಕರೆದೊಯ್ಯುವ ಮಾಲೀಕರು ಪಿಕಪ್ ವಾಹನಗಳಲ್ಲಿ ಕುರಿಗಳಂತೆ ತುಂಬಿಸಿಕೊಂಡು ಸಾಗಿಸುವುದನ್ನು ನೀವು ಈಗಾಗಲೇ ನೋಡಿರಬಹುದು. ಅದೇ ರೀತಿ ತೆಲಂಗಾಣದಲ್ಲಿ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನವೊಂದು ರಸ್ತೆ ಮಧ್ಯೆ ಚಲಿಸುತ್ತಿದ್ದಾಗಲೇ ಮಧ್ಯದಿಂದ ಎರಡು ಭಾಗವಾಗಿದೆ. ಪರಿಣಾಮ ಕಾರ್ಮಿಕರಿದ್ದ ಕಂಟೈನರ್ ವಾಹನದಿಂದ ಬೇರ್ಪಟ್ಟು ಮಗುಚಿದ್ದು, ಅದರಲ್ಲಿದ್ದ ಜನರೆಲ್ಲಾ ರಸ್ತೆಗೆ ಬಿದ್ದಿದ್ದಾರೆ. ಪ್ರಾಣ ಹೋಗುವಂತಹ ಅನಾಹುತ ಸಂಭವಿಸದಿದ್ದರೂ ಅನೇಕರಿಗೆ ಗಾಯಗಳಾಗಿದ್ದರೂ ಕೂಡಲೇ ರಸ್ತೆ ಮೇಲಿಂದ ಎದ್ದು ಸುಧಾರಿಸಿಕೊಂಡಿದ್ದಾರೆ.
Goods Vechile's are not Meant for Transporting the People... pic.twitter.com/PRIyymtsZO
— V.C Sajjanar IPS MD TSRTC Office (@tsrtcmdoffice)ಈ ವಿಡಿಯೋವನ್ನು ಟ್ಟಿಟ್ಟರ್‌ನಲ್ಲಿ ತೆಲಂಗಾಣ ರಸ್ತೆ ಸಾರಿಗೆ ಇಲಾಖೆಯ ನಿರ್ವಾಹಕ ನಿರ್ದೇಶಕ ವಿಸಿ ಸಜ್ಜನರ್ ಅವರು ಪೋಸ್ಟ್ ಮಾಡಿದ್ದು, ಗೂಡ್ಸ್ ವಾಹನಗಳು ಎಂದರೆ ಜನರನ್ನು ಸಾಗಿಸುವುದಕ್ಕೆ ಇರುವುದಲ್ಲ ಎಂದು ಬರೆದಿದ್ದಾರೆ. ಇವರ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯಿಸಿದ್ದು, ಶಾರ್ಟ್‌ಕಟ್ ಜೀವನ ಅನೇಕರ ಬದುಕನ್ನು ಧ್ವಂಸಗೊಳಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಅತೀವೇಗದ ಚಾಲನೆಯಿಂದ, ಚಾಲಕನ ನಿರ್ಲಕ್ಷದಿಂದ ಈ ಅಪಘಾತ ಸಂಭವಿಸಿದೆ ಎಂದು ದೂರಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಭೀಕರ ಅಪಘಾತದ ದೃಶ್ಯಗಳಿವು.!
ಸಾಮಾನ್ಯವಾಗಿ ಈ ವಾಹನವನ್ನು ಸರಿಯಾಗಿ ಚಲಾಯಿಸಿದರೆ ಅಂತಹ ಅನಾಹುತವೇನು ಸಂಭವಿಸುವುದಿಲ್ಲ ಎಂದು ಮಗದೊಬ್ಬರು ಪ್ರತಿಕ್ರಿಯಿಸಿದ್ದಾರೆ. ಕೆಲಜನರು ಒತ್ತಾಯಪೂರ್ವಕವಾಗಿ ಇಂತಹ ವಾಹನದಲ್ಲಿ ಚಲಿಸುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೇ ಸಾರ್ವಜನಿಕ ಸಾರಿಗೆ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಿ ಹಾಗೆ ಮಾಡಿದ್ದಲ್ಲಿ ಇಂತಹ ಅನಾಹುತ ಸಂಭವಿಸದು ಎಂದು ಸಾರಿಗೆ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಸಾರ್ವಜನಿಕ ಸಾರಿಗೆ ಶುಲ್ಕ ಹೆಚ್ಚಳವಾಗಿರುವ ಕಾರಣ ಜನ ಈ ರೀತಿ ಅಪಾಯಕಾರಿ ದಾರಿ ಹಿಡಿದಿದ್ದಾರೆ ಹೀಗಾಗಿ ಟಕೆಟ್ ದರ ಕಡಿಮೆ ಮಾಡುವಂತೆ ಮತ್ತೊಬ್ಬರು ಕೇಳಿದ್ದಾರೆ.
ಯುವತಿಯರಿಗೆ ಕಾರು ಡಿಕ್ಕಿ, ಸಿಸಿಟಿವಿಯಲ್ಲಿ ಬಯಲು, ಆರೋಪಿ ಇನ್ಸ್‌ಪೆಕ್ಟರ್ ಅರೆಸ್ಟ್!
ಅಪಘಾತಗಳು ಇತ್ತೀಚೆಗೆ ಸರ್ವೇಸಾಮಾನ್ಯ ಎನಿಸಿದ್ದು, ದಿನಗಳ ಹಿಂದಷ್ಟೇ ಉತ್ತರ ಪ್ರದೇಶ ಪ್ರವಾಸಕ್ಕೆ ತೆರಳಿದ್ದ ಬೀದರ್‌ನ ಒಂದೇ ಕುಟುಂಬದ ಏಳು ಮಂದಿ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದರು. ರಾಜ್ಯದ 7 ಮಂದಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಅದೇ ಕುಟುಂಬದ ಇನ್ನೂ 9 ಜನ ಸಾವಿನ ದವಡೆಯಿಂದ ಪಾರಾಗಿದ್ದರು. ಬೀದರ್ ಮೂಲದ ಒಂದೇ ಕುಟುಂಬದ 16 ಜನ ಉತ್ತರಪ್ರದೇಶ ಪ್ರವಾಸಕ್ಕೆಂದು ಟಿಟಿ ಮಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಲಾರಿ ಮತ್ತು ಟೂರ್ ಟ್ರಾವೆಲ್ಸ್ ಮಧ್ಯೆ ಭೀಕರ ಅಪಘಾತವಾಗಿತ್ತು. ಸ್ಥಳದಲ್ಲೇ ಏಳು ಮಂದಿ ಮೃತಪಟ್ಟಿದ್ದರು.
ಉತ್ತರ ಪ್ರದೇಶದ ಮೋದಿಪುರದಲ್ಲಿ ಈ ಭೀಕರ ಅಪಘಾತ ನಡೆದಿತ್ತು. ಉತ್ತರ ಪ್ರದೇಶದ ರಾಮಭೂಮಿ ಅಯೋಧ್ಯೆ ಭೇಟಿಗೆಂದು ಇಡೀ ಕುಟುಂಬ ಹೋಗುತ್ತಿತ್ತು ಎನ್ನಲಾಗಿದೆ. ಈ ವೇಳೆ ಉತ್ತರಪ್ರದೇಶದ ಖೇರಿ - ನಾಗಪುರ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಲಾರಿ ಮತ್ತು ಟಿಟಿ ನಡುವೆ ಅಪಘಾತ ಸಂಭವಿಸಿತ್ತು.