ಇನ್ನೂ ಅನಂತರಾಜು ನನಗೆ ಕಳೆದ ಆರು ವರ್ಷದಿಂದ ಪರಿಚಯ. ಅನಂತರಾಜು ನಡುವೆ ಕಳೆದ ಆರು ವರ್ಷಗಳಿಂದ ವಿಲಿಂಗ್ ರಿಲೇಶನ್ ಶಿಫ್ ಇತ್ತು ಎಂದು ಗೆಳತಿ ರೇಖಾ ಹೇಳಿಕೊಂಡಿದ್ದಾರೆ
ಬೆಂಗಳೂರು (ಜೂ.1): ಬಿಜೆಪಿ (BJP) ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ (Ananth Raju Suicide Case) ದಿನಕ್ಕೊಂದು ತಿರುವು ಪಡೆದುಕೊಳುತ್ತಿದೆ. ಅನಂತರಾಜು ಪತ್ನಿ ಸುಮಾ ಹಾಗೂ ರೇಖಾ ಆಡಿಯೋ ವೈರಲ್ ಬಳಿಕ ಇದೀಗ ಈ ಕೇಸ್ ಗೆ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಜಾಮೀನು ಪಡೆದುಕೊಂಡಿರುವ ಅನಂತರಾಜು ಸ್ನೇಹಿತೆ ರೇಖಾ ಅವರು ಸುಮಾ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಅನಂತರಾಜು ಆತ್ಮಹತ್ಯೆ ಗೆ ನಾನು ಪ್ರಜೋದನೆ ನೀಡಿಲ್ಲ. ಸುಮಾ ಅವರ ಟಾರ್ಚರ್ ಗೆ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿನಿತ್ಯ ನನಗೆ ಕಾಲ್ ಮಾಡಿ ಅನಂತರಾಜು ಗೆ ಟಾರ್ಚರ್ ನೀಡುತ್ತೇನೆ ಎಂದು ಹೇಳುತ್ತಿದ್ರು. ಎಲ್ಲಾ ಅಡಿಯೋ ರೆಕಾರ್ಡ್ ಗಳನ್ನು ಪೊಲೀಸರಿಗೆ ನೀಡಿದ್ದೇನೆ. ಪೊಲೀಸರು ಪ್ರಕರಣದ ಬಗ್ಗೆ ಸೂಕ್ತ ವಾದ ತನಿಖೆ ನಡೆಸಬೇಕು ನನಗೆ ನ್ಯಾಯವನ್ನು ಒದಗಿಸಬೇಕು. ರಾಜಕಾರಣಿಗಳ ಒತ್ತಡಕ್ಕೆ ಮಣಿಯದೆ ಸೂಕ್ತ ತನಿಖೆ ನಡೆಸಬೇಕು. ನಾನು ಯಾವುದೇ ಹನಿಟ್ಯ್ರಾಪ್ ಮಾಡಿಲ್ಲ ,ಅವರ ಬಳಿ ಯಾವುದೆ ಆಸ್ತಿ ಯನ್ನು ಪಡೆದುಕೊಂಡಿಲ್ಲ ಅಂತಾ ರೇಖಾ ಹೇಳಿದ್ದಾರೆ.
UPSC Shivangi Goyal; ಅತ್ತೆಯ ಕಿರುಕುಳವೇ UPSC ಟಾಪರ್ ಆಗಲು ಸ್ಪೂರ್ತಿ
ಇನ್ನೂ ಅನಂತರಾಜು ನನಗೆ ಕಳೆದ ಆರು ವರ್ಷದಿಂದ ಪರಿಚಯ. ನನಗೆ ಫೇಸ್ ಬುಕ್ ನಲ್ಲಿ ಅನಂತರಾಜು ಪರಿಚಯ. ಅದರೂ, ನಂತರ ಇಬ್ಬರು ನಡುವೆ ಸ್ನೇಹ ಬೆಳದಿತ್ತು. ಅನಂತರಾಜು ನಡುವೆ ಕಳೆದ ಆರು ವರ್ಷಗಳಿಂದ ವಿಲಿಂಗ್ ರಿಲೇಶನ್ ಶಿಫ್ ಇತ್ತು. ಅವರ ಜೊತೆ ಉತ್ತಮ ವಾದ ಸಂಬಂಧ ಇತ್ತು. ಅದರೆ ನಾನು ಹನಿಟ್ಯ್ರಾಪ್ ಮಾಡಿಲ್ಲ. ಅವರಿಂದ ಯಾವುದೇ ಹಣ ಪಡೆದಿಲ್ಲ. ಹನಿಟ್ಯ್ರಾಪ್ ಮಾಡೋ ಇನ್ ಟೆಶನ್ ಆರು ವರ್ಷ ತನಕ ಕಾಯೋ ಅವಶ್ಯಕ ಇಲ್ಲ. ನಾನು ತಪ್ಪು ಮಾಡಿದ್ದು ನಿಜ. ಅದರೆ ಹನಿಟ್ಯ್ರಾಪ್ ಮಾಡಿಲ್ಲ. ನನಗೆ ನ್ಯಾಯಬೇಕು ಎಂದು ರೇಖಾ ಹೇಳಿದ್ದಾರೆ.
ಈ ಹಿಂದೆ ಅನಂತರಾಜು ಗೆಳತಿ ರೇಖಾ ಅಪರಿಚಿತ ವ್ಯಕ್ತಿಯೊಂದಿಗೆ ಚಾಟಿಂಗ್ ಮಾಡಿರುವುದು ವೈರಲ್ ಆಗಿತ್ತು. ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿಗೆ ಜತೆಗೆ ನಡೆಸಿದ್ದಾರೆನ್ನಲಾದ ವಾಟ್ಸಪ್ ಚಾಟಿಂಗ್ ರಿವಿಲ್ ಆಗಿ ಈ ವಾಟ್ಸಾಪ್ ಚಾಟಿಂಗ್ ನಲ್ಲಿ ಸೆಟಲ್ಮೆಂಟ್ ಬಗ್ಗೆ ಪ್ರಸ್ತಾಪ ಆಗಿರೋದು ಸಾಕಷ್ಟು ಕುತುಹಲ ಮೂಡಿಸಿತ್ತು.
Textbooks Row; ಸಚಿವರ ವರದಿ ಆಧರಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಎಂದ ಸಿಎಂ
ಅನಂತರಾಜು ನನಗೆ ಮೋಸ ಮಾಡಿದ್ದಾನೆ. ನನ್ನ ಮಾನ ಮರ್ಯಾದೆಗೆ ಧಕ್ಕೆ ತಂದಿದ್ದಾನೆ. ನನ್ನ ಮಕ್ಕಳಿಗಾಗಿ ಯಾರ ಮಾರ್ಯಾದೆ ಕಳೆಯೋದಕ್ಕು ನಾನು ಸಿದ್ಧ ಅನ್ನೋ ರೀತಿ ರೇಖಾ ಮಾಡಲಾದ ಮೇಸೆಜ್ ಎಂದು ಸ್ಕ್ರೀನ್ ಶಾಟ್ ಓಡಾಡಿತ್ತು. ಈ ಚಾಟ್ ನಲ್ಲಿ ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇದೆ. ಅದನ್ನ ಅವನ ಹೆಂಡ್ತಿಗೆ ಕಳಿಸಿದ್ರೆ ಅವಳೇ ಅನಂತರಾಜುನ ಸಾಯಿಸ್ತಾಳೆ. ಅಷ್ಟೊಂದು ಆಶ್ಲೀಲವಾಗಿದೆ. ಆ ವಿಡಿಯೋಗಳು ಇವೆ ಆ ರೀತಿ ಆಗ್ಬಾರ್ದು ಅನ್ನೋದಾದ್ರೆ ಅನಂತರಾಜುನ ಮೇ 15 ರ ಒಳಗೆ ನನ್ನ ಭೇಟಿ ಮಾಡ್ಬೇಕು ಸೆಟ್ಲಮೆಂಟ್ ಮಾಡಿಕೊಂಡು ನೆಮ್ಮದಿಯಾಗಿರಲಿ ಎಂದು ಚಾಟ್ ಸಾರಂಶ ಹೇಳುತ್ತೆ.
ಇನ್ನೂ ಇನ್ನೊಂದು ಮೂಲಗಳ ಪ್ರಕರ ಅನಂತರಾಜಯ ಬಚಾವ್ ಮಾಡೋಕೆ ರೇಖಾ ಅನಂತರಾಜು ಸೇರಿ ಈ ರೀತಿನೇ ಮಾತನಾಡಿ ಸುಮಾಳನ್ನ ನಂಬಿಸುವ ಕೆಲಸ ಮಾಡಿದ್ರು ಎಂದು ಹೇಳಲಾಗ್ತಿದೆ. ಆದ್ರೆ ಆದೇ ಇಂದು ರೇಖಾಳಿಗೆ ಮುಳುವಾಗಿದ್ಯಾ ಅನ್ನೋ ಪ್ರಶ್ನೆ ಮೂಡಿದ್ದು, ಮೇಲ್ನೋಟಕ್ಕೆ ಎಲ್ಲವೂ ಸತ್ಯದಂತೆ ಕಂಡ್ರು ಹೋರಬರ್ತಿರೋ ಮಾಹಿತಿಯ ಅಸಲಿಯತ್ತು ಏನೂ ಅನ್ನೋದನ್ನ ಪೊಲೀಸ್ರೇ ಪತ್ತೆಮಾಡಬೇಕು.