ಕಳ್ಳತನ ಮಾಡಿ ದಾನ, ಧರ್ಮ ಮಾಡುತ್ತಿದ್ದ ವಿಚಿತ್ರ ಕಳ್ಳ ಅರೆಸ್ಟ್!

By Ravi Janekal  |  First Published Oct 20, 2022, 10:53 AM IST

ಐಷಾರಾಮಿ ಜೀವನಕ್ಕಾಗಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಬೈಕ್, ಕಾರು, ಮೊಬೈಲ್ ಕಳ್ಳತನಕ್ಕೆ ಇಳಿಯುತ್ತಿರುವ ಪ್ರಕರಣಗಳು ದಿನನಿತ್ಯ ಒಂದಲ್ಲ ಒಂದು ಕಡೆ ವರದಿಯಾಗುತ್ತಲೇ ಇವೆ. ಅಂಥದೇ ಪ್ರಕರಣದಲ್ಲಿ ಬೆಂಗಳೂರಿನಲ್ಲೊಬ್ಬ ವಿಚಿತ್ರ ಕಳ್ಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇವನು ಅಂತಿಂಥ ಕಳ್ಳ ಅಲ್ಲ; ದಾನಶೂರ ಕಳ್ಳ!  


ಬೆಂಗಳೂರು (ಅ.20) : ಐಷಾರಾಮಿ ಜೀವನಕ್ಕಾಗಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಬೈಕ್, ಕಾರು, ಮೊಬೈಲ್ ಕಳ್ಳತನಕ್ಕೆ ಇಳಿಯುತ್ತಿರುವ ಪ್ರಕರಣಗಳು ದಿನನಿತ್ಯ ಒಂದಲ್ಲ ಒಂದು ಕಡೆ ವರದಿಯಾಗುತ್ತಲೇ ಇವೆ. ಇಲ್ಲೊಬ್ಬ ವಿಚಿತ್ರ ಕಳ್ಳ ಅಂಥದೇ ಪ್ರಕರಣದಲ್ಲಿ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಇವನು ಅಂತಿಂಥ ಕಳ್ಳ ಅಲ್ಲ; ದಾನಶೂರ ಕಳ್ಳ!  

ಡ್ರಗ್ಸ್, ಐಷಾರಾಮಿ ಜೀವನಕ್ಕೆ ಕಳ್ಳತನ: ಸೆಕೆಂಡ್ ಫ್ಲೋರ್ ಬಾಲ್ಕನಿ ಮನೆಗಳೇ ಟಾರ್ಗೆಟ್‌

Tap to resize

Latest Videos

  ಐಷಾರಾಮಿ ಜೀವನಕ್ಕಾಗಿ ಕಂಡವರ ಮನೆಗೆ ಕನ್ನ ಹಾಕುತ್ತಿದ್ದ. ಕದ್ದ ಹಣದಲ್ಲಿ ಬ್ರಾಂಡೆಂಡ್ ಬಟ್ಟೆ, ವಸ್ತುಗಳನ್ನು ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ ಇವನು, ಬಳಿಕ ಉಳಿದ ಹಣವನ್ನು ಧಾರ್ಮಿಕ ಕೇಂದ್ರಗಳಿಗೆ ದಾನ ಮಾಡಿಬಿಡುತ್ತಿದ್ದ! ಮತ್ತೆ ಹಣದ ಅಗತ್ಯ ಇದ್ದಾಗ ಕಳ್ಳತನಕ್ಕೆ ಇಳಿಯುತ್ತಿದ್ದ ಆಸಾಮಿ. ಇಂಥ ವಿಚಿತ್ರ ಕಳ್ಳನನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ. ಸಾಮಾನ್ಯವಾಗಿ ಕಳ್ಳತನಕ್ಕೆ ಇಳಿಯುವವರು ಎಷ್ಟೇ ಹಣ ದೋಚಿದರೂ ದೇವಸ್ಥಾನಗಳಿಗೆ ದಾನ ಕೊಡುವುದು ಒತ್ತಟ್ಟಿಗಿರಲಿ, ಇತರರಿಗೆ ಒಂದು ರೂಪಾಯಿ ಸಹ ಕೊಡಲು ಇಚ್ಛಿಸುವುದಿಲ್ಲ. ಆದರೆ ಇವನು ಮಾತ್ರ ಕದ್ದ ಹಣದಿಂದ ತನ್ನೆಲ್ಲ ಆಸೆ ತೀರಿದಮೇಲೆ ಉಳಿದ ಹಣ ಇಟ್ಟುಕೊಳ್ಳದೇ ಚರ್ಚ್ ದೇವಾಲಯಗಳ ಉಂಡಿಗೆ ಹಾಕಿಬಿಡುತ್ತಿದ್ದ!

ಜಾನ್ ಮೆಲ್ವಿನ್ ಎಂಬುವವನೇ ಆ ವಿಚಿತ್ರ ಕಳ್ಳ. ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಬರೋಬ್ಬರಿ 50ಕ್ಕೂ ಹೆಚ್ಚು ಪ್ರಕರಣಗಳು ಇವನು ಬೇಕಾಗಿದ್ದಾನೆ. ಪ್ರತಿಸಲ ಕಳ್ಳತನ ಮಾಡಿದಾಗಲೂ, ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಪರಾರಿಯಾಗಿಬಿಡುತ್ತಿದ್ದವನು. ಕೊನೆಗೂ ಮಡಿವಾಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. 

ಉಂಡ ಮನೆಗೆ ಕನ್ನ: ಅಮೇಜಾನ್ ಸೆಲ್ಲರ್ ಸರ್ವೀಸ್‌ನಲ್ಲಿ ಕಳ್ಳತನ

ಪೀಣ್ಯಾ, ವಿಜಯನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ ಸೇರಿದಂತೆ ವಿವಿಧೆಡೆ ಪ್ರಕರಣಗಳಿದ್ದವು. ಕದ್ದ ಸ್ವಲ್ಪ ಹಣದಲ್ಲಿ ಐಷಾರಾಮಿ ಜೀವನ, ಮೋಜು ಮಸ್ತಿ ಮಾಡುತ್ತಿದ್ದ. ಇನ್ನುಳಿದ ಹಣವನ್ನ ದಾನ ಮಾಡಿ ಕಳೆಯುತ್ತಿದ್ದ ಆರೋಪಿ. ನಗರದ ಅತೀ ಹಳೆಯ ಮನೆಗಳ್ಳರಲ್ಲಿ ಮೆಲ್ವಿನ್ ಕೂಡಾ ಒಬ್ಬ. ಪ್ರತೀ ಬಾರಿ‌ ಬಂಧನವಾಗಲೂ 10-15 ದಿನಗಳಲ್ಲೇ ಜಾಮೀನು ಪಡೆಯುತ್ತಿದ್ದ ಮೆಲ್ವಿನ್.  ಸದ್ಯ ಮಡಿವಾಳ ಠಾಣಾ ಪೊಲೀಸರು ಬಂಧಿಗೆ ಜೈಲಿಗಟ್ಟಿದ್ದಾರೆ.

click me!