ಚಿತ್ರದುರ್ಗ: ಫೋಟೋ ಸ್ಟುಡಿಯೋ ಮಾಲೀಕನ ಹತ್ಯೆಗೈದು ದುಷ್ಕರ್ಮಿಗಳು ಪರಾರಿ..!

Published : Jan 15, 2023, 08:58 AM IST
ಚಿತ್ರದುರ್ಗ: ಫೋಟೋ ಸ್ಟುಡಿಯೋ ಮಾಲೀಕನ ಹತ್ಯೆಗೈದು ದುಷ್ಕರ್ಮಿಗಳು ಪರಾರಿ..!

ಸಾರಾಂಶ

ಕೊಲೆಯಿಂದಾಗಿ ಇಡೀ ಆ ಗ್ರಾಮವೇ ಬೆಚ್ಚಿ ಬಿದ್ದಿದ್ದು ಕೊಲೆಗೆ ನಿಖರವಾದ ಕಾರಣ ಏನು ಎಂಬುದೇ ಪ್ರಶ್ನೆಯಾಗಿದೆ?

ವರದಿ: ಕಿರಣ್.ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜ.15):  ಆತ ಜೀವನೋಪಾಯಕ್ಕಾಗಿ ಫೋಟೋ ಸ್ಟುಡಿಯೋ ಇಟ್ಟುಕೊಂಡು ಕೆಲಸ ಮಾಡ್ತಿದ್ದ ವ್ಯಕ್ತಿ. ತಡರಾತ್ರಿ ಮನೆಗೆ ನುಗ್ಗಿರೋ‌ ದುಷ್ಕರ್ಮಿಗಳು ಏಕಾಏಕಿ ಮಚ್ಚಿನಿಂದ ಮನಸೋ ಇಚ್ಚೆ ಹಲ್ಲೆ ನಡೆಸಿ ಕೊಚ್ಚಿ ಕೊಲೆಗೈದು ಪರಾರಿ ಆಗಿರುವ ಘಟನೆ ನಡೆದಿದೆ. ಈ ಕೊಲೆಯಿಂದಾಗಿ ಇಡೀ ಆ ಗ್ರಾಮವೇ ಬೆಚ್ಚಿ ಬಿದ್ದಿದ್ದು ಕೊಲೆಗೆ ನಿಖರವಾದ ಕಾರಣ ಏನು ಎಂಬುದೇ ಪ್ರಶ್ನೆಯಾಗಿದೆ? ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.....,

ಮಂಚದ ಮೇಲೆ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿರೋ ಮೃತ ವ್ಯಕ್ತಿ ಬಸವರಾಜನ್ (33). ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಗ್ರಾಮದ ನಿವಾಸಿ. ಹೊಟ್ಟೆ ಪಾಡಿಗಾಗಿ ತನ್ನದೇ ಸ್ವಂತ ಸ್ಟುಡಿಯೋ & ವಿಡಿಯೋ ಶಾಪ್ ಇಟ್ಟುಕೊಂಡು ಕೆಲಸ ಮಾಡ್ತಿದ್ದ. ಸುಮಾರು 10 ವರ್ಷಗಳಿಂದ ತನ್ನ ಸ್ವಂತ ಗ್ರಾಮ ಶಿವಗಂಗಾದಲ್ಲೇ ವಾಸವಾಗಿದ್ದ, ಇತ್ತೀಚೆಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಆಗಿದ್ದು ಯಾವುದೇ ಅನ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿರಲಿಲ್ಲ. ಸ್ಟುಡಿಯೋ ಹಿಂದೆಯೇ ತನ್ನ ‌ಮನೆ ಇದಿದ್ದರಿಂದ ಎಂದಿನಂತೆ ಮನೆಗೆ ತೆರಳಿದ್ದಾನೆ. ಇತ್ತೀಚೆಗಷ್ಟೆ ತನ್ನ ಪತ್ನಿ ಮಗುವಿಗೆ ಜನ್ಮ ನೀಡಿರುವ ಪರಿಣಾಮ ಹೆರಿಗೆಗಾಗಿ ತನ್ನ ತವರು ಮನೆಗೆ ತೆರಳಿದ್ದಾಳೆ. ಕಾಯಕ ಬಿಟ್ಟು ಹೋಗದ ಬಸವರಾಜ್ ಮನೆಯಲ್ಲಿ ಒಬ್ಬನೇ ಇದ್ದದ್ದನ್ನು ಕಂಡಿರೋ ದುಷ್ಕರ್ಮಿಗಳು ತಡರಾತ್ರಿ ಮನೆಗೆ ನುಗ್ಗಿ ಮಚ್ವಿನಿಂದ ಮನಸೋ ಇಚ್ಚೆ ಕೊಲೆಗೈದು ಪರಾರಿ ಆಗಿದ್ದು ಇಡೀ ಶಿವಗಂಗಾ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ. ಇನ್ನೂ ಕೊಲೆಗೆ ಏನು ಕಾರಣ ಎಂಬುದು ತಿಳಿಯದೇ ಸಂಬಂಧಿಕರು ಕೂಡ ದಿಗ್ಭ್ರಮೆಗೊಂಡಿದ್ದು, ಕೊಲೆ ಮಾಡಿರೋ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಅವರಿಗೆ ಕಠಿಣ ಶಿಕ್ಷೆ ನೀಡಿ ಎಂದು ಮೃತನ ಸಹೋದರ ಸಿದ್ದೇಶ್ ಆಗ್ರಹಿಸಿದ್ದಾರೆ.

Shivamogga:ಭದ್ರಾವತಿಯ ಲಾಡ್ಜ್‌ವೊಂದರಲ್ಲಿ ಪ್ರೇಯಸಿಯಿಂದಲೇ ಪ್ರಿಯಕರನ ಭೀಕರ ಹತ್ಯೆ!

ಇನ್ನೂ ಭೀಕರ ಹತ್ಯೆ ಮಾಹಿತಿ‌‌ ತಿಳಿದ ಕೂಡಲೇ ಎಸ್ಪಿ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಗಂಗಾ ಗ್ರಾಮದ ಬಸವರಾಜ್ ರನ್ನು ದುಷ್ಕರ್ಮಿಗಳು ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆಗೈದು ಪರಾರಿ ಆಗಿದ್ದಾರೆ.‌ ಕೊಲೆಗೆ ನಿಖರವಾದ ಕಾರಣ ಏನೆಂದು ತಿಳಿದು ಬಂದಿಲ್ಲ. ಆದ್ರೆ ಕೊಲೆಗೈದಿರೋ ಆಸಾಮಿಗಳು ಕೆಲ ಕುರುಹುಗಳನ್ನು ಬಿಟ್ಟು ಹೋಗಿರುವ ಮಾಹಿತಿ ಸಿಕ್ಕದೆ. ತನಿಖೆ ಹಂತದಲ್ಲಿದೆ ಶೀಘ್ರದಲ್ಲಿಯೇ ಅವರನ್ನು ಬಂಧಿಸಿ ಎಡೆಮುರಿಕಟ್ಟಲಾಗುವುದು ಅಂತ ಚಿತ್ರದುರ್ಗ ಎಸ್ಪಿ ಕೆ.ಪರಶುರಾಮ ತಿಳಿಸಿದ್ದಾರೆ. 

ಒಟ್ನಲ್ಲಿ ತನ್ನ ಪಾಡಿಗೆ ತಾನು ಸ್ಟುಡಿಯೋ ಇಟ್ಕೊಂಡ್ ಕೆಲಸ ಮಾಡ್ತಿದ್ದ ಬಸವರಾಜನ ಭೀಕರ ಕೊಲೆ ಸಾಕಷ್ಟು ಅನುಮಾನ ಗಳಿಗೆ ಕಾರಣವಾಗಿದೆ. ಆದಷ್ಟು ಬೇಗ ಖಾಕಿ ಪಡೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕೊಲೆಗೆ ಕಾರಣ ಏನು ಎಂಬುದು ಬಹಿರಂಗ ಪಡಿಸಿ ಅವರಿಗೆ ಕಠಿಣ ಶಿಕ್ಷೆ ವಿಧಿಸಲಿ ಎಂಬುದು ನಮ್ಮೆಲ್ಲರ ಆಗ್ರಹ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!