ಬಸ್‌ಗೆ ಕಾಯುತ್ತಿದ್ದ 90 ವರ್ಷದ ವೃದ್ಧೆಗೆ ಬೈಕ್‌ನಲ್ಲಿ ಲಿಫ್ಟ್, ಅತ್ಯಾಚಾರ ಎಸಗಿ ಪರಾರಿ!

By Suvarna News  |  First Published Jan 14, 2023, 8:35 PM IST

 ಬಸ್‌ಗಾಗಿ ಕಾಯುತ್ತಿದ್ದ 90 ವರ್ಷದ ವೃದ್ಧೆಗೆ ಬೈಕ್ ಸವಾರ ಲಿಫ್ಟ್ ನೀಡುವ ನೆಪದಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಇದೀಗ ವೃದ್ಧೆ ಆಸ್ಪತ್ರೆ ದಾಖಲಿಸಲಾಗಿದ್ದು, ಬೈಕ್ ಸವಾರನಿಗೆ ಹುಡುಕಾಟ ಆರಂಭಗೊಂಡಿದೆ.


ಶೆಹಡೋಲ್(ಜ.14): ಸಂಬಂಧಿಕರ ಮನೆಗೆ ತೆರಳಲು ರೈಲಿನ ಮೂಲಕ ಆಗಮಿಸಿದ 90 ವರ್ಷದ ವೃದ್ಧೆ ರಾತ್ರಿಯಿಡಿ ರೈಲು ನಿಲ್ದಾಣದಲ್ಲೇ ಮಲಗಿದ್ದಾರೆ. ಬೆಳಗ್ಗೆ ಆಟೋ ಚಾಲಕನ ನೆರವಿನಿಂದ ಕೆಲ ದೂರ ತಲುಪಿದ್ದಾರೆ. ಬಳಿಕ ಬಸ್ ಮೂಲಕ ಪ್ರಯಾಣಿಸಲು ನಿಲ್ದಾಣದಲ್ಲಿ ಕಾಯುತ್ತಿದ್ದ ವೃದ್ಧೆಗೆ ಅಪರಿಚಿತ ಬೈಕ್ ಸವಾರ ಬೈಕ್‌ನಲ್ಲಿ ಲಿಫ್ಟ್ ನೀಡಿದ್ದಾನೆ. ಆದರೆ ಲಿಫ್ಟ್ ನೆಪದಲ್ಲಿ ಈ ಕಾಮುಕ ಸವಾರ 90 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ. ಇದೀಗ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಹುಡುಕಾಟ ಆರಂಭಗೊಂಡಿದೆ. ಈ ಘಟನೆ ಮಧ್ಯಪ್ರದೇಶ ಶೆಹಡೋಲ್ ಜಿಲ್ಲೆಯಲ್ಲಿ ನಡೆದಿದೆ.

ಜಬಲಪುರ ರೈಲು ನಿಲ್ದಾಣದಿಂದ ಶೆಹಡೋಲ್ ರೈಲು ನಿಲ್ದಾಣಕ್ಕೆ ಆಗಮಿಸಿದ ವೃದ್ಧೆ ರಾತ್ರಿಯಾದ ಕಾರಣ ಯಾವುದೇ ವಾಹನ ಸಿಕ್ಕಿಲ್ಲ. ಇಷ್ಟೇ ಅಲ್ಲ ವೃದ್ಧೆ ಬಳಿ ಹೆಚ್ಚಿನ ಹಣವೂ ಇರಲಿಲ್ಲ. ಸಂಬಂಧಿಕರ ಮನೆ ರೈಲು ನಿಲ್ದಾಣದಿಂದ 15 ಕಿಲೋಮೀಟರ್ ದೂರದಲ್ಲಿತ್ತು. ಹೀಗಾಗಿ ರೈಲು ನಿಲ್ದಾಣದಲ್ಲೇ ಮಲಗಿದ ವೃದ್ದೆ ಬೆಳಗ್ಗೆ ಆಟೋ ರಿಕ್ಷಾ ಸಹಾಯದಿಂದ ಅಂತರ ಗ್ರಾಮಕ್ಕೆ ತೆರಳಿದ್ದಾರೆ. ಆದರೆ ಅಂತರ ಗ್ರಾಮದಿಂದ ಸಂಬಂಧಿಕರ ಗ್ರಾಮಕ್ಕೆ ಕೆಲ ದೂರವಿತ್ತು. ಹೀಗಾಗಿ ಬೆಳಗಿನ ಜಾವ ಬಸ್‌ಗಾಗಿ ಕಾಯುತ್ತಾ ನಿಂತಿದ್ದಾರೆ.

Tap to resize

Latest Videos

 

ಬಾಯ್‌ಫ್ರೆಂಡ್ ಎದುರೇ ಕಾಲೇಜು ವಿದ್ಯಾರ್ಥಿನಿ ಮೇಲೆ ಐವರಿಂದ ಗ್ಯಾಂಗ್ ರೇಪ್!

ಇದೇ ವೇಳೆ ಅಪರಿಚಿತ ಬೈಕ್ ಸವಾರ ಇದೇ ದಾರಿಯಲ್ಲಿ ಆಗಮಿಸಿದ್ದಾನೆ. ಬಳಿಕ ತಾನು ಬೈಕ್‌ನಲ್ಲಿ ಲಿಫ್ಟ್ ನೀಡುವುದಾಗಿ ಹೇಳಿದ್ದಾನೆ. ಸವಾರ ಮಾತಿನಿಂದ ಹರಸಾಹಸ ಮಾಡಿ ಬೈಕ್ ಏರಿದ ವೃದ್ಧೆಯನ್ನು ಕೆಲ ದೂರ ಕರೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ವೃದ್ಧೆಯನ್ನು ಅಲ್ಲೆ ಬಿಟ್ಟು ಎಸ್ಕೇಪ್ ಆಗಿದ್ದಾನೆ.

ಘಟನೆಯಿಂದ ಸುಧಾರಿಸಿಕೊಂಡ ವೃದ್ಧೆ ಅಳುತ್ತಲೇ ಸಂಬಂಧಿಕರ ಮನೆ ತಲುಪಿದ್ದಾರೆ. ಬಳಿಕ ನಡೆದ ಘಟನೆ ವಿವರಿಸಿದ್ದಾರೆ. ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿರುವ ಪೊಲೀಸರು ಇದೀಗ ಅಪರಿಚತ ಬೈಕ್ ಸವಾರನ ಪತ್ತೆಗೆ ಬಲೆ ಬೀಸಿದ್ದಾರೆ.

ಅತ್ಯಾಚಾರ ಮಾಡಿದ ಅಪ್ರಾಪ್ತನ ತಾಯಿಗೆ ಶೂಟ್‌ ಮಾಡಿದ 16 ವರ್ಷದ ಬಾಲಕಿ..! 

ಬಾಲಕಿ ಮೇಲೆ ಅತ್ಯಾಚಾರ ದೂರು ದಾಖಲು
ಯುವಕನೊಬ್ಬ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಕರ್ನಾಟಕದ ಡಿ.ಹಲಸಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ. ಕಳೆದ 2022ರ ಡಿ.1ರಂದು ಮುತ್ತತ್ತಿಗೆ ಹೋಗಿ ಬರೋಣ ಎಂದು ಗ್ರಾಮದಿಂದ ಕರೆದುಕೊಂಡು ಹೋದ ಆರೋಪಿ ನನಗೆ ಮತ್ತು ಬರುವ ಜ್ಯೂಸ್‌ ಕುಡಿಸಿದಾಗ ನನ್ನ ತಲೆ ಮಂಜಾಯಿತು. ನಂತರ ನಿರ್ಜನ ಪ್ರದೇಶದಲ್ಲಿ ನನ್ನ ಮೇಲೆ ದೈಹಿಕವಾಗಿ ದೌರ್ಜನ್ಯ ಎಸಗಿದ್ದಾನೆ. ಈ ವಿಷಯಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದನು. ಕುಟುಂಬದವರಿಗೆ ಈ ಬಗ್ಗೆ ಹೇಳಿಕೊಳ್ಳಲಿಲ್ಲ. ನಂತರ ನನ್ನ ವರ್ತನೆಯನ್ನು ಗಮನಿಸಿದ ಕುಟುಂಬದವರು ಒತ್ತಡ ಹಾಕಿದಾಗ ಪರಿಣಾಮ ನಿಜ ಸ್ಥಿತಿ ತಿಳಿಸಿ, ಪೊಲೀಸ್‌ ಠಾಣೆಗೆ ದೂರು ನೀಡಿದ್ದೇನೆ ಎಂದು ಬಾಲಕಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಹಲಗೂರು ಪೊಲೀಸ್‌ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

click me!