
ಶಿವಮೊಗ್ಗ(ಮೇ.05): ಪೆಟ್ರೋಲ್ ಪಂಪ್ ಕೆಲಸಗಾರನೊಬ್ಬ ಗ್ರಾಹಕರು(Customers) ಗೂಗಲ್ ಪೇ, ಫೋನ್ ಪೇ ಮುಖಾಂತರ ಜಮೆ ಮಾಡುತ್ತಿದ್ದ ಹಣವನ್ನು ತನ್ನ ಸ್ವಂತ ಖಾತೆಗೆ ಜಮೆ ಮಾಡಿ 24.88 ಲಕ್ಷ ವಂಚಿಸಿರುವ ಘಟನೆ ಶಿವಮೊಗ್ಗ(Shivamogga) ಜಿಲ್ಲೆಯ ಹೊಸನಗರದಲ್ಲಿ ನಡೆದಿದೆ.
ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು(Accused) ಪೊಲೀಸರು(Police) ಬಂಧಿಸಿದ್ದು(Arrest) ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಹೊಸನಗರ ಫ್ಯುಯಲ್ಸ್ ಪೆಟ್ರೋಲ್ ಬಂಕ್‌ನಲ್ಲಿ 4 ವರ್ಷದಿಂದ ಕೆಲಸ ಮಾಡುತ್ತಿದ್ದ ಲೋಕೇಶ್ ಎಂಬಾತ ಪೆಟ್ರೋಲ್ ಹಾಕಿಸಿಕೊಂಡ ಗ್ರಾಹಕರಿಗೆ ಬಂಕ್ ಮಾಲೀಕರ ಸಂಖ್ಯೆ ಬದಲು ತನ್ನ ಗೂಗಲ್‌ಪೇ ನಂಬರ್ ನೀಡಿ ತನ್ನ ಖಾತೆಗೆ ಹಣ ಹಾಕಿಸಿಕೊಳ್ಳುತ್ತಿದ್ದ. ವ್ಯಾಪಾರದ(Business) ಮೊತ್ತಕ್ಕೂ, ರಿಜಿಸ್ಟರ್ ಪುಸ್ತಕದ ಮಾಹಿತಿಗೂ ವ್ಯತ್ಯಾಸ ಕಂಡುಬಂದು ಪರಿಶೀಲಿಸಿದಾಗ ವಂಚನೆ ಬಯಲಾಗಿದೆ.
ಚಿಕ್ಕಮಗಳೂರು: ಆನೆ ದಂತದಲ್ಲಿ ಚೆಸ್ ಪಾನ್ ಕೆತ್ತನೆ, ಮಾರಾಟ ಮಾಡುವಾಗ ಸಿಕ್ಕಿಬಿದ್ದ
ಕಳೆದ ಹಲವು ದಿನಗಳಿಂದ ಲಕ್ಷಾಂತರ ರು. ವಂಚನೆ ನಡೆಸಿದ್ದಾನೆ. ಪ್ರತಿದಿನ ಕೆಲಸ ಮುಗಿಸಿ ಹೋಗುವಾಗ ಆದ ವ್ಯಾಪಾರಕ್ಕೂ ಹಾಗೂ ರಿಜಿಸ್ಟರ್ ಪುಸ್ತಕದಲ್ಲಿ ನಮೂದಿಸುತ್ತಿದ್ದ ವ್ಯವಹಾರಕ್ಕೂ ವ್ಯತ್ಯಾಸ ಕಂಡುಬಂದಿದೆ. ಪೆಟ್ರೋಲ್ ಪಂಪ್ ವ್ಯವಸ್ಥಾಪಕ ಮಂಜುನಾಥ ಗೌಡರು ಈ ಬಗ್ಗೆ ವಿಚಾರಣೆ ನಡೆಸಿದಾಗ ಲೋಕೇಶ್ ವಂಚನೆ(Fraud) ತಿಳಿದುಬಂದಿದೆ. ಆತನೊಂದಿಗೆ ಆತನ ದೊಡ್ಡಪ್ಪನ ಮಕ್ಕಳಾದ ಅರುಣ್ ಮತ್ತು ಅನಿಲ್ ಕೂಡ ಶಾಮೀಲಾಗಿದ್ದರು. ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೀನಾ ಆ್ಯಪ್ ಕಂಪನಿಗಳ ವ್ಯಾಲೆಟ್‌ನಲ್ಲಿದ್ದ 6 ಕೋಟಿ ಜಪ್ತಿ
ಬೆಂಗಳೂರು: ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವುದಾಗಿ ಹೇಳಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದ ಮತ್ತು ಹೆಚ್ಚಿನ ಲಾಭಾಂಶ ನೀಡುವುದಾಗಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ ಚೀನಾ ಆ್ಯಪ್ ಕಂಪನಿಗಳ(China App Companies) ಹಾಗೂ ವಂಚಕರ ಬ್ಯಾಂಕ್ ಖಾತೆ ಮತ್ತು ವ್ಯಾಲೇಟ್‌ನಲ್ಲಿದ್ದ 6.17 ಕೋಟಿ ರು. ಅನ್ನು ಜಾರಿ ನಿರ್ದೇಶನಾಲಯ(ED) ಜಪ್ತಿ ಮಾಡಿದೆ.
ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹೂಡಿಕೆ(Investment) ಮಾಡಿಸಿಕೊಳ್ಳುತ್ತಿದ್ದ ಮತ್ತು ಕಡಿಮೆ ಬಡ್ಡಿ ದರಕ್ಕೆ ಸಾಲ(Loan) ನೀಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿರುವ ಆ್ಯಪ್ ಕಂಪನಿಗಳು ಮತ್ತು ವಂಚಕರ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಮತ್ತು ಮಾರತ್‌ಹಳ್ಳಿ ಪೊಲೀಸ್(Police) ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು(FIR) ದಾಖಲಾಗಿದ್ದವು. ಅಕ್ರಮ ಹಣ ವರ್ಗಾವಣೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಇ.ಡಿ. ತನಿಖೆ ಕೈಗೊಂಡು ಚೀನಾ ಆ್ಯಪ್ ಕಂಪನಿಗಳ ಮತ್ತು ವಂಚಕರ ಬ್ಯಾಂಕ್ ಖಾತೆ ಮತ್ತು ವ್ಯಾಲೇಟ್‌ನಲ್ಲಿನ 6.17 ಕೋಟಿ ರು. ಜಪ್ತಿ ಮಾಡಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ