Davanagere: ಜ್ಯೋತಿಷಿ ಬಳಿ ಶಾಸ್ತ್ರ ಕೇಳಿ ಹಣ ದೋಚುತ್ತಿದ್ದ ಇಬ್ಬರು ಕಳ್ಳರ ಬಂಧನ

By Govindaraj S  |  First Published May 4, 2022, 10:24 PM IST

ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂ ದೋಚುತ್ತಿದ್ದ ತಂಡವೊಂದನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 2 ಕೇಸ್ ದಾಖಲಾಗಿತ್ತು. 


ವರದಿ: ವರದರಾಜ್, ದಾವಣಗೆರೆ

ದಾವಣಗೆರೆ (ಮೇ.04): ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಲಕ್ಷಾಂತರ ರೂ ದೋಚುತ್ತಿದ್ದ ತಂಡವೊಂದನ್ನು ದಾವಣಗೆರೆ ಪೊಲೀಸರು (Davanagere Police) ಬಂಧಿಸಿದ್ದಾರೆ (Arrest). ದಾವಣಗೆರೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 2 ಕೇಸ್ ದಾಖಲಾಗಿತ್ತು. ಡಿವೈಎಸ್‌ಪಿ (ಡಿಸಿಆರ್‌ಬಿ) ಬಸವರಾಜ್ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಲಾಗಿತ್ತು. ಚೆನ್ನೈ ಮೂಲದ ನರೇಶದ ಹಾಗು ಲೋಂಡಾ ಮೂಲದ‌ ಮಹಮದ್ ಹುಸೇನ್‌ರನ್ನು ಬಂಧಿಸಲಾಗಿದೆ‌. ಇವರು ಹಾವೇರಿ-ದಾವಣಗೆರೆ ಭಾಗದಲ್ಲಿ ಗಮನ ಬೇರೆಡೆ ಸೆಳೆದು ಇಲ್ಲಿಂದ ಹೋಗಿ‌ ಚೆನ್ನೈನಲ್ಲಿ ಸೆಟ್ಲ್ ಅಗುತ್ತಿದ್ದಾರೆ.

Tap to resize

Latest Videos

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿನ 2 ಪ್ರಕರಣದಲ್ಲಿ 6 ಲಕ್ಷ, ಹರಿಹರದ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣದಲ್ಲಿ 2 ಲಕ್ಷ, ಹಾವೇರಿಯಲ್ಲಿ ದಾಖಲಾದ ಪ್ರಕರಣದಲ್ಲಿ 13 ಲಕ್ಷ ಹಣ ರಿಕವರಿ ಆಗಿದೆ. ಇಬ್ಬರು ಕಳ್ಳರನ್ನು ಬಂಧಿಸಿ ಒಟ್ಟು 21 ಲಕ್ಷ ರೂ.ಗಳನ್ನು ಪೊಲೀಸರು ರಿಕವರಿ ಮಾಡಿದ್ದಾರೆ.

ಅಟೆನ್ಷನ್ ಡೈವರ್ಟ್ ಮಾಡುವುದು ಹೇಗೆ?: ಓಜಿ ಕೊಪ್ಪಂ ರೀತಿ ಇವರು ದರೋಡೆ ಮಾಡುತ್ತಿದ್ದರು.‌ಇವರು ನೋಟು ಬೀಸಾಕುವುದು ನಿಮ್ಮ ನೋಟು ಬಿದ್ದಿದೆ ನೋಡಿ ಎಂದು ಹೇಳಿ ಗಮನ ಸೆಳೆಯುವುದು. ಮೈ ಮೇಲೆ ಉಗಳುವುದು, ನಂತರ ಅವರಿಗೆ ಸಿಂಪತಿ ತೋರಿಸಿ ಸಹಾಯ ಮಾಡುವ ನೆಪದಲ್ಲಿ ಅವರ ಕಡೆ ಇದ್ದ ಕ್ಯಾಶ್ ಬಂಗಾರ ಕಳವು ಮಾಡುವುದು ಇವರ ಕಾಯಕ. ಬ್ಯಾಂಕ್‌ಗಳಲ್ಲಿ ನಗದು ಹಣ ಡ್ರಾ ಮಾಡಿದವರನ್ನು ಗಮನಿಸಿ  ವಯಸ್ಸಾದವರು ,ಮಹಿಳೆಯರು ಇತರ ವ್ಯಕ್ತಿಗಳ ಫಲೋ ಮಾಡಿ ದಾರಿ ಮಧ್ಯೆ ಅವರ ಗಮನ‌ ಬೇರೆಡೆ ಸೆಳೆದು ಹಣ ದೋಚುವ ಟೀಮ್ ಇದು. ಕ್ಯಾಟರ್ ಪಿಲ್ಲರ್‌ನಲ್ಲಿ ಗ್ಲಾಸ್ ಹೊಡೆದು ಅವರ ಕಾರಿನಲ್ಲಿ ಬ್ಯಾಗ್ ಕದಿಯೋರು, 

OMG..! ತಾಯಿ ಜೊತೆ ಅಕ್ರಮ ಸಂಬಂಧ ಬೆಳೆಸಿದ ಗಂಡ, ಮರ್ಮಾಂಗ ಕತ್ತರಿಸಿದ ಮಗಳು

ಶಾಸ್ತ್ರ ಕೇಳಿಯೇ ದರೋಡೆಗೆ ರೆಡಿಯಾಗುತಿದ್ದ ಓಜಿ ಕುಪ್ಪಂ: ಎಲ್ಲಾದರೂ ಕಳ್ಳತನಕ್ಕೆ ಹೋಗಬೇಕೆಂದರೆ ಹೋಗುವ ಮೊದಲು ಓಜಿ ಕುಪ್ಪಂ ಗ್ಯಾಂಗ್ ಜ್ಯೋತಿಷಿ ಬಳಿ ಶಾಸ್ತ್ರ ಕೇಳುತ್ತಿದ್ದರು. ಒಂದು ವೇಳೆ ಶಾಸ್ತ್ರ ಹೇಳೋರು ಬೇಡ ಅಂದ್ರೆ ಹೋಗ್ತಾನೇ ಇರಲಿಲ್ಲ. ಬ್ಯಾಂಕ್‌ಗೆ ಬರುವವರೇ ಇವರ ಮುಖ್ಯ ಟಾರ್ಗೆಟ್. ಇದುವರೆಗೆ ದಾವಣಗೆರೆ ಜಿಲ್ಲೆಯೊಂದರಲ್ಲೇ 13 ಪ್ರಕರಣಗಳಲ್ಲಿ ಬೇಕಾಗಿದ್ದ ದರೋಡೆಕೋರರು. ಅ ಹಾಗೆ ಈಗ 11 ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ. ಬಂಧಿತ ಆರೋಪಿಗಳೆಲ್ಲರೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಓಜಿ ಕುಪ್ಪಂನವರು. ಎಲ್ಲರೂ ಸಂಬಂಧಿಕರೇ‌. ಆ ಊರಿಗೆ ಇವರನ್ನು ಬಂಧಿಸುವುದು ಅಷ್ಟು ಸುಲಭ ಆಗಿರಲಿಲ್ಲ. 

ಯಾಕೆಂದರೆ ಅಲ್ಲಿ ಈ ಕಳ್ಳರು ಯಾರೂ ಇರುತ್ತಿರಲಿಲ್ಲ. ಮನೆಯಲ್ಲಿ ಮಹಿಳೆಯರು ಮಾತ್ರ ಇರುತ್ತಿದ್ದರು. ತಮಿಳುನಾಡು ಹಾಗೂ ಬೆಂಗಳೂರು ಪೊಲೀಸರು ಮೂವರಿಂದ ನಾಲ್ವರು ಆರೋಪಿಗಳನ್ನು ಮಾತ್ರ ಬಂಧಿಸಿದ್ದರು. ಆದರೆ ಇದೇ ಮೊದಲ ಬಾರಿಗೆ 11 ಮಂದಿ ಬಂಧಿಸಲಾಗಿದೆ. ಜನರ ಗಮನ ಬೇರೆಡೆ ಸೆಳೆದು ಥೇಟ್ ದಂಡುಪಾಳ್ಯ ಗ್ಯಾಂಗ್‌ನಂತೆ ಸಂಚು ರೂಪಿಸಿ ಹಣ ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಇದು. ಆದರೆ ಯಾರಿಗೂ ಹಿಂಸೆ ಮಾಡದೇ ಹಣ ದೋಚುತ್ತಿದ್ದ ಖದೀಮರು ಇವರು. ಇದೀಗ 11 ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಆಂಧ್ರಪ್ರದೇಶದ  ಓಜಿ ಕುಪ್ಪಂನ ನಾಗರಾಜ್, ಚಿನ್ನು, ಗೋಗುಲ, ಕೆ. ವೆಂಕಟೇಶ್, ಜಿ. ಸ್ಯಾಮ್ ಸನ್, ವಿನೋದ್, ಸತೀಶ್, ಪಿ. ಮೋಹನ್ ರಾವ್, ಕೆ. ಸುಬ್ರಮಣಿ, ಪಿ. ಸುಬ್ರಹ್ಮಣ್ಯ, ಪಿ. ವೆಂಕಟೇಶಲು ಆರೋಪಿಗಳಾಗಿದ್ದು, ಒಟ್ಟು 22 ಲಕ್ಷ ರೂಪಾಯಿ ನಗದು, ನಾಲ್ಕು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಆರೋಪಿಗಳ ಬಗ್ಗೆ ಮಾಹಿತಿ ಪಡೆದು ದಾವಣಗೆರೆ ಜಿಲ್ಲೆಯ ಬಾತಿ ಗುಡ್ಡದಲ್ಲಿ ಮತ್ತೆ ಕೃತ್ಯ ಎಸಗುವ ಯೋಜನೆ ರೂಪಿಸಿದ್ದ ಬಗ್ಗೆ ಮಾಹಿತಿ ಪಡೆದ ಡಿವೈಎಸ್ಪಿ ಬಿ‌. ಎಸ್. ಬಸವರಾಜ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಇವರೆಲ್ಲರೂ ಸಂಬಂಧಿಕರು ಹಾಗೂ ಒಂದೇ ಊರಿನವರು ಎಂದು ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ. 

Chitradurga Crime: ಜಮೀನು ವಿವಾದ: ವ್ಯಕ್ತಿಯ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನಕ್ಕೆ ಯತ್ನ

ದಾವಣಗೆರೆ ಜಿಲ್ಲೆಯಲ್ಲಿ ಜನರ ಗಮನ ಬೇರೆಡೆ ಸೆಳೆದು ಹಣ ದೋಚಿದ 13 ಪ್ರಕರಣಗಳಲ್ಲಿ ಬೇಕಾಗಿದ್ದ ಈ ಆರೋಪಿಗಳು ತಿಂಗಳಿಗೆ ಒಬ್ಬೊಬ್ಬರು 2 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ಬಟ್ಟೆ ಮೇಲೆ ಬಣ್ಣ ಹಾಕುವುದು, ದುಡ್ಡು ಬೀಳಿಸಿ ಹಣ ದೋಚುವುದು, ಮೈ ಮೇಲೆ ಉಗಿಯುವುದು, ಕೆಸರು ಎರಚುವುದು ಸೇರಿದಂತೆ ಆರು ಬಗೆಯ ರೀತಿಯಲ್ಲಿ ಜನರ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದರು. ಮಾತ್ರವಲ್ಲ, ಶಾಸ್ತ್ರ ತುಂಬಾ ನಂಬುತ್ತಿದ್ದ ಇವರೆಲ್ಲರೂ ಜೂಜಾಡುವ ಚಟ ಹೊಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬಂಧಿತರಿಂದ ನಾಲ್ಕು ಬೈಕ್‌ಗಳು, 20 ಬೇರಿಂಗ್ ಬಾಲ್ಸ್, 2 ಬೇರಿಂಗ್ ಬಾಲ್ಸ್ ಪಂಪ್ ಮಾಡುವ ಮೆಷಿನ್, 2 ತುರಕೆ ಪುಡಿ ಪೇಪರ್ ಪ್ಯಾಕೇಟ್, ಕ್ಯಾಟರ್ ಬಿಲ್ಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳು ಒಟ್ಟು 26 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು. ಜನರ ಗಮನ ಬೇರೆಡೆ ಸೆಳೆದು ಇನ್ನು ಹಲವು ಕಡೆಗಳಲ್ಲಿ ಕೃತ್ಯ ಎಸಗಿರುವ ಬಗ್ಗೆ ಅನುಮಾನ ಇದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ.

click me!