ಸದ್ಯ ಪೊಲೀಸರ ವಶದಲ್ಲಿರುವ ಇಬ್ಬರು ನಕ್ಸಲ್ ನಾಯಕರನ್ನು ಬಿಗಿಬಂದೋಬಸ್ತ್‌ನಲ್ಲಿ ಕಾರ್ಕಳಕ್ಕೆ ತರಲಾಗಿದೆ. ಶೃಂಗೇರಿ ಮೂಲದ ಬಿಜಿ ಕೃಷ್ಣಮೂರ್ತಿ ಹಾಗೂ ಚಿಕ್ಕಮಗಳೂರು ಮೂಲದ ಸಾವಿತ್ರಿ ಇವರಿಬ್ಬರು 20 ದಿನಗಳ ಕಾಲ ಪಶ್ಚಿಮ ಘಟ್ಟದ ತಪ್ಪಲಲ್ಲಿ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿಚಾರಣೆಗೆ ಒಳಪಡಲಿದ್ದಾರೆ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಮೇ.04): ಸದ್ಯ ಪೊಲೀಸರ (Police) ವಶದಲ್ಲಿರುವ ಇಬ್ಬರು ನಕ್ಸಲ್ ನಾಯಕರನ್ನು (Naxal Leaders) ಬಿಗಿಬಂದೋಬಸ್ತ್‌ನಲ್ಲಿ ಕಾರ್ಕಳಕ್ಕೆ ತರಲಾಗಿದೆ. ಶೃಂಗೇರಿ ಮೂಲದ ಬಿಜಿ ಕೃಷ್ಣಮೂರ್ತಿ ಹಾಗೂ ಚಿಕ್ಕಮಗಳೂರು ಮೂಲದ ಸಾವಿತ್ರಿ ಇವರಿಬ್ಬರು 20 ದಿನಗಳ ಕಾಲ ಪಶ್ಚಿಮ ಘಟ್ಟದ ತಪ್ಪಲಲ್ಲಿ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿಚಾರಣೆಗೆ (Inquiry) ಒಳಪಡಲಿದ್ದಾರೆ.
undefined
ಈ ನಕ್ಸಲ್ ನಾಯಕರನ್ನು 2021 ನ. 9ರಂದು ರಾಜ್ಯದ (Karnataka) ಗಡಿಭಾಗವಾದ ವಯನಾಡಿನಲ್ಲಿ ವಶಕ್ಕೆ ಪಡೆಯಲಾಗಿತ್ತು. ಸದ್ಯ ಇವರು ನ್ಯಾಯಾಂಗ ಬಂಧನದಲ್ಲಿದ್ದು ಪೊಲೀಸರು ತಮ್ಮ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ,ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಇವರ ತನಿಖೆ ನಡೆಸುವುದು ಬಾಕಿ ಇದೆ. 20 ದಿನಗಳ ಅವಧಿಯ ಪೊಲೀಸ್ ಕಸ್ಟಡಿಯಲ್ಲಿ ಇವರಿಬ್ಬರನ್ನು ಸುಮಾರು 12 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಬೇಕಾಗಿದೆ. ನಕ್ಸಲರನ್ನು ಇರಿಸುವ ಠಾಣೆಗೆ ಸುಮಾರು 120ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದ್ದು ವಿಶೇಷ ಬಂದೋಬಸ್ತ್ ಏರ್ಪಾಟು ಮಾಡಲಾಗಿದೆ.
ಕೃಷ್ಣ ಮಠದ ಕನಕನ ಕಿಂಡಿ- ನಿರಂತರ ಭಜನೆಗೆ ನೂರು ದಿನ
ಯಾರು ಈ ನಕ್ಸಲ್ ನಾಯಕರು?: ಶೃಂಗೇರಿ ಮೂಲದ ಬಿ.ಜಿ. ಕೃಷ್ಣಮೂರ್ತಿ ಶಿವಮೊಗ್ಗದ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ ಬಳಿಕ LLB ಶಿಕ್ಷಣ ಪಡೆದು ವಿದ್ಯಾರ್ಥಿದೆಸೆಯಿಂದಲೇ ಎಡಪಂಥೀಯ ಚಿಂತನೆಗಳಿಂದ ಪ್ರೇರಿತರಾಗಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಚಳುವಳಿಯಲ್ಲಿ ಭಾಗವಹಿಸಿದ್ದ. 2003ರಿಂದ ನಕ್ಸಲ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದು 2005ರಲ್ಲಿ ಸಾಕೇತ್ ರಾಜನ್ ಹತ್ಯೆಯಾದ ಬಳಿಕ ನಕ್ಸಲ್ ತಂಡದ ನಾಯಕತ್ವ ಬಿಜಿ ಕೃಷ್ಣಮೂರ್ತಿ ವಹಿಸಿದ್ದ. ಈತನ ಮೇಲೆ ಸುಮಾರು 53 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದೆ. ಬಂಧಿತ ಇನ್ನೂಬ್ಬ ನಕ್ಸಲ್ ನಾಯಕಿ ಸಾವಿತ್ರಿ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಕೇರಳದ ವಯನಾಡ್ ಕೋಯಿಕೋಡ್ ನಲ್ಲಿ ಕಬಿನಿ ದಳದ ಮುಖ್ಯಸ್ಥೆ ಯಾಗಿದ್ದು ನಕ್ಸಲ್ ನಾಯಕ ವಿಕ್ರಮ ಗೌಡನ ಪತ್ನಿ. ಈಕೆಯ ವಿರುದ್ಧ ಸುಮಾರು 22 ಪ್ರಕರಣಗಳಿವೆ.
ಬಂಧನವಾಗಿದ್ದು ಹೇಗೆ ಗೊತ್ತಾ?: 2021ರ ನಂಬರ್ 9ರಂದು ಇವರು ಸಾಗುತ್ತಿದ್ದ ಕಾರು ರಾಜ್ಯದ ಗಡಿಭಾಗದಲ್ಲಿ ಕೆಟ್ಟು ನಿಂತಿತ್ತು. ಇವರ ಚಲನವಲನ ಬಗ್ಗೆ ಸಂಪೂರ್ಣ ಮಾಹಿತಿ ಇದ್ದ ಪೊಲೀಸರು ಸಂಚಾರದ ಮಾಹಿತಿಯನ್ನು ಅರಿತು ಹಿಂಬಾಲಿಸುತ್ತಿದ್ದರು. ಕೇರಳ ಎಟಿಎಸ್ ಪೊಲೀಸರು ಡ್ರಾಪ್ ಕೊಡುವ ನೆಪದಲ್ಲಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿ ಇಬ್ಬರನ್ನು ತಮ್ಮ ವಾಹನಕ್ಕೆ ಹತ್ತಿಸಿಕೊಂಡು ಬಳಿಕ ವಶಕ್ಕೆ ಪಡೆದಿದ್ದರು.
Udupi ಕೆಳ ಪರ್ಕಳದಲ್ಲಿ ಸುರಂಗ ಪತ್ತೆ! ಏನಿದರ ರಹಸ್ಯ?
ತನಿಖೆಯಾಗಬೇಕಾದ ವಿಚಾರಗಳು: 2008 ಮೇ 15ರಂದು ಚುನಾವಣೆಯ ಮುನ್ನಾದಿನ ಸೀತಾನದಿ ಬಳಿಯ ನಾಡ್ಪಾಲು ಎಂಬಲ್ಲಿ ಶಿಕ್ಷಕ ಭೋಜ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಅವರನ್ನು ಹತ್ಯೆ ಮಾಡಿದ್ದರು. 2008ರ ಡಿಸೆಂಬರ್ ಏಳರಂದು ಹಳ್ಳಿ ಹೊಳೆಯ ಕೃಷಿಕ ಕೇಶವ ನಕ್ಸಲರಿಗೆ ಬಲಿಯಾಗಿದ್ದರು. 2011 ಡಿಸೆಂಬರ್ 19ರಂದು ಮಲೆಕುಡಿಯ ಸದಾಶಿವ ಗೌಡ ಅವರ ಹತ್ಯೆ ನಡೆದಿತ್ತು. ಕಾರ್ಕಳ ತಾಲೂಕು ಇದು ವಿನಲ್ಲಿ ಕುಟ್ಟಿ ಶೆಟ್ಟಿ ಅವರಿಗೆ ಬೆದರಿಕೆ, ಮತ್ತಾವುನಲ್ಲಿ ಪೊಲೀಸ್ ಜೀಪ್ ಸ್ಪೋಟ, ಈದು ಎನ್ಕೌಂಟರ್, ಕುತ್ಲೂರಿನ ವಸಂತ ಎನ್ಕೌಂಟರ್, ರಾಯಚೂರಿನ ಎಲ್ಲಪ್ಪ ಎನ್ಕೌಂಟರ್ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಯುವ ಸಾಧ್ಯತೆ ಇದೆ.