ಸಾಲ ವಾಪಸ್‌ ಕೇಳಿದ ಸ್ನೇಹಿತನ ಬರ್ಬರ ಕೊಲೆ

By Kannadaprabha News  |  First Published Dec 21, 2020, 1:26 PM IST

ಸ್ನೇಹಿತನನ್ನು ಮಚ್ಚಿನಿಂದ ಹೊಡೆದು ಕೊಂದು ಪೊಲೀಸರಿಗೆ ಶರಣಾದ ವ್ಯಕ್ತಿ| ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಡೆದ ಘಟನೆ| ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು| 


ಮಾಲೂರು(ಡಿ.21): ಕುಡಿದ ಮತ್ತಿನಲ್ಲಿ ಹಣಕಾಸು ವಿಚಾರವಾಗಿ ಸ್ನೇಹಿತರ ನಡುವೆ ನಡೆದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಪಟ್ಟಣದ ಸಂತೇ ಮೈದಾನ ಸಮೀಪ ಶನಿವಾರ ತಡ ರಾತ್ರಿ ನಡೆದಿದೆ.

ಮೃತನನ್ನು ಬಾಬು(38)ಎಂದು ಗುರುತಿಸಲಾಗಿದೆ. ಸ್ನೇಹಿತನನ್ನು ಮಚ್ಚಿನಿಂದ ಹೊಡೆದು ಕೊಂದು ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ಶರಣಾದ ವ್ಯಕ್ತಿಯನ್ನು ಜಿಮ್‌ ಶಶಿ ಎಂದು ಗುರುತಿಸಲಾಗಿದೆ. ಈ ಸಂಬಂಧ ಮೃತನ ತಂದೆ ಸರ್ದಾರ್‌ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Latest Videos

undefined

ತನ್ನ ಹೆತ್ತಮ್ಮನ ಸಾವಿನ ರಹಸ್ಯವನ್ನು ಬಿಚ್ಚಿಟ್ಟ 8 ವರ್ಷದ ಮಗ..!

ವ್ಯಾಪಾರಕ್ಕಾಗಿ ಬಾಬು ವಿನಿಂದ 50 ಸಾವಿರ ಹಣ ಪಡೆದಿದ್ದ ಶಶಿ ಹಣ ವಾಪಾಸ್ಸು ನೀಡದ ಹಿನ್ನೆಲೆಯಲ್ಲಿ ಹಣ ವಾಪಾಸ್‌ ನೀಡುವಂತೆ ಬಾಬು ಒತ್ತಾಯಿಸುತ್ತಿದ್ದ. ಇದರಿಂದ ಬೇಸತ್ತಿದ್ದ ಶಶಿ ಶನಿವಾರ ರಾತ್ರಿ ಹಣ ಕೊಡುವುದಾಗಿ ತಿಳಿಸಿ ಕೋಲಾರ ರಸ್ತೆಯ ಬಜಾಜ್‌ ಶೋರಂ ಹಿಂಭಾಗದ ಖಾಲಿ ಜಾಗಕ್ಕೆ ಬರುವಂತೆ ತಿಳಿಸಿದ್ದಾನೆ.

ಅಲ್ಲಿಗೆ ಬಂದ ಬಾಬು ಜತೆ ಮದ್ಯ ಸೇವಿಸಿದ ಬಳಿಕ ಶಶಿ ಮಚ್ಚಿನ ನಿಂದ ಬಾಬುವಿನ ತಲೆಗೆ ಹೊಡೆದಿದ್ದಾನೆ. ನಂತರ ಮಚ್ಚಿನ ಸಮೇತ ನೇರವಾಗಿ ಪೊಲೀಸ್‌ ಠಾಣೆಗೆ ಹೋಗಿ ವಿಷಯ ತಿಳಿಸಿ ಶರಣಾಗಿದ್ದಾನೆ. ತಕ್ಷಣ ಘಟನಾ ಸ್ಥಳಕ್ಕೆ ಹೋದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶಶಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನಾ ಸ್ಥಳಕ್ಕೆ ಎಸ್‌.ಪಿ.ಕಾರ್ತಿಕ್‌ ರೆಡ್ಡಿ ಭೇಟಿ ನೀಡಿದ್ದರು.
 

click me!