ನವಲಗುಂದದಲ್ಲಿ ಮನಬಂದಂತೆ ಗುಂಡಿನ ದಾಳಿ: ಬೆಚ್ಚಿಬಿದ್ದ ಜನತೆ

Suvarna News   | Asianet News
Published : Jul 26, 2020, 10:46 AM IST
ನವಲಗುಂದದಲ್ಲಿ ಮನಬಂದಂತೆ ಗುಂಡಿನ ದಾಳಿ: ಬೆಚ್ಚಿಬಿದ್ದ ಜನತೆ

ಸಾರಾಂಶ

ಮನಬಂದಂತೆ ಗುಂಡು ಹಾರಿಸಿದ ವ್ಯಕ್ತಿ| ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಗರಳ್ಳಿ ಗ್ರಾಮದಲ್ಲಿ ನಡೆದ ಘಟನೆ| ಗುಂಡು ಹಾರಿಸಿದ್ದಕ್ಕೆ ನಿಖರ ಕಾರಣವೇನು ತಿಳಿದು ಬಂದಿಲ್ಲ| ಗ್ರಾಮದಲ್ಲಿ ಬೀಡು ಬಿಟ್ಟ ಪೊಲೀಸರು| 

ನವಲಗುಂದ(ಜು.26): ಫೈನಾನ್ಸಿಯರ್‌ನೋರ್ವ ಮನಬಂದಂತೆ ಗುಂಡು ಹಾರಿಸಿದ ಪರಿಣಾಮ ಓರ್ವನ ಸ್ಥಿತಿ ಗಂಭೀರವಾಗಿದ್ದು, ಹಲವರಿಗೆ ತೀವ್ರ ಗಾಯಗಳಾದ ಘಟನೆ ಶನಿವಾರ ತಾಲೂಕಿನ ನಾಗರಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಹೆಚ್ಚುವರಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ.

ಮಲ್ಲಪಗಪ ಕರಿ ಎಂಬಾತನೇ ಗುಂಡಿನ ದಾಳಿ ನಡೆಸಿರುವವನು.  ಶರಣಪ್ಪ ಕಾಳೆ ಎಂಬಾತನಿಗೆ ಗುಂಡು ತಗುಲಿದ್ದು, ನವಲಗುಂದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಕಿಮ್ಸ್‌ನಲ್ಲಿ ದಾಖಲಿಸಲಾಗಿದೆ.

EMI ಸಾಲ ವಸೂಲಿ ಗಲಾಟೆ ವೇಳೆ ಬಿತ್ತು ಗುಂಡೇಟು!

ನಾಗರಳ್ಳಿ ಗ್ರಾಮದ ನಾಗಪ್ಪ ಹರ್ತಿ ಅವರೊಂದಿಗೆ ಬೆಳಿಗ್ಗೆ ಮಲ್ಲಪ್ಪ‌ಕರಿ ಜಗಳ ಮಾಡಿಕೊಂಡಿದ್ದ. ಸಂಜೆ ಗ್ರಾಮದಲ್ಲಿ ಕಂಡ ಕಂಡವರ ಮೇಲೆ ಗುಂಡು ಹಾರಿಸಿದ್ದಾನೆ. ಆದರೆ ಗುಂಡು ಹಾರಿಸಿದ್ದಕ್ಕೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಪೊಲೀಸರು ಗ್ರಾಮದಲ್ಲಿ ಬೀಡು ಬಿಟ್ಟಿದ್ದು ಹೆಚ್ಚುವರಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ನಾಗರಳ್ಳಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!