ಪುತ್ರಿ ಸಾವು: 10 ತಿಂಗ್ಳಿಂದ ಕಾದು ಆಕೆಯ ಪ್ರಿಯಕರನನ್ನು 17 ಬಾರಿ ಚುಚ್ಚಿ ಕೊಂದ ತಂದೆ

By Suvarna News  |  First Published Jul 25, 2020, 6:37 PM IST

 ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪುತ್ರಿಯ ಸಾವಿಗೆ ಆಕೆಯ ಪ್ರಿಯಕರನನ್ನು ಕೊಂದು ತಂದೆ ಸೇಡು ತೀರಿಸಿಕೊಂಡಿರುವ ಘಟನೆ ನಡೆದಿದೆ.


ಚಿಕ್ಕಬಳ್ಳಾಪುರ, (ಜುಲೈ.25): ತನ್ನ ಮಗಳ ಆತ್ಮಹತ್ಯೆ ಗೆ ಪ್ರಿಯಕರನೇ ಕಾರಣ ಅಂತ  10 ತಿಂಗಳಿಂದ ಹೊಂಚು ಹಾಕಿದ್ದ ತಂದೆಯೊರ್ವ ತಡರಾತ್ರಿ ಪ್ರಿಯಕರನ ಎದೆಗೆ 17 ಬಾರಿ ಇರಿದು ಕೊಂದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಯಗವ ಮದ್ದಲಖಾನೆ ಬಳಿ ನಡೆದಿದೆ.

ಯಗವಮದ್ದಲಖಾನೆ ಗ್ರಾಮದ 25 ವರ್ಷದ ಹರೀಶ್ ಕೊಲೆಯಾದ ಯುವಕ. ವೆಂಕಟೇಶ್ ಹಾಗೂ ಆತನ ಸ್ನೇಹಿತ ಗಣೇಶ್  ಕೊಲೆ ಮಾಡಿದವರು. ಅಂದಹಾಗೆ ಈ ಕೊಲೆಯಾದ ಹರೀಶ್ ಕೊಲೆ‌ ಮಾಡಿದ ವೆಂಕಟೇಶ್ ಮಗಳು ಶಿರೀಶಾ ಪರಸ್ಪರ ಪ್ರೀತಿಸುತ್ತಿದ್ದರು. 

Tap to resize

Latest Videos

ಬಾದಾಮಿ: ಅಕ್ರಮ ಸಂಬಂಧ ಶಂಕೆ, ಚಾಕುವಿನಿಂದ ಇರಿದು ಹೆಂಡತಿಯ ಕೊಲೆಗೈದ ಗಂಡ..!

ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿ ಕೊನೆಗೆ ಶಿರೀಷಾಳಿಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿಕೊಡಲಾಗಿತ್ತು. ಆದ್ರೆ 10 ತಿಂಗಳ ಹಿಂದೆ  ತನ್ನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಳು. 

ಅಂದಿನಿಂದ ಈ ಸಾವಿಗೆ ಪ್ರಿಯಕರ ಹರೀಶ್ ಕಾರಣ..ಅವನನ್ನ ಪ್ರೀತಿ ಮಾಡಿದ್ರಿಂದಲೇ ನನ್ನ ಮಗಳ ಸಾವಾಯಿತು ಅಂತ ಕಾದಿದ್ದ ವೆಂಕಟೇಶ್ ತಡರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದ ಹರೀಶ್ ನನ್ನ ಹಿಂಬಾಲಿಸಿ ಕೊಲೆ‌ ಮಾಡಿದ್ದಾರೆ. 

ಪ್ರಕರಣ ಸಂಬಂಧ ಆರೋಪಿಗಳಾದ ವೆಂಕಟೇಶ್ ಹಾಗೂ ಗಣೇಶ್ ನನ್ನ ಬಾಗೇಪಲ್ಲಿ ಸಿಪಿಐ ನಯಾಜ್ ಹಾಗೂ ಪಿಎಸ್ ಐ ಸುನಿಲ್ ಕುಮಾರ್ ಬಂಧಿಸಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

click me!