ನಾಯಿ ಮರಿ ಮಾರಾಟದ ನೆಪದಲ್ಲಿ ವಂಚನೆ: ವ್ಯಕ್ತಿಗೆ ಟೋಪಿ ಹಾಕಿದ ಕಳ್ಳರು..!

By Kannadaprabha News  |  First Published Jul 26, 2020, 8:55 AM IST

ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ನೀಲಾದ್ರಿ ರಸ್ತೆ ನಿವಾಸಿ ಅಭಿನವ್‌ ಅಲ್ಲುರು ವಂಚನೆಗೊಳಗಾದ ವ್ಯಕ್ತಿ| ಫೇಸ್‌ಬುಕ್‌ನಲ್ಲಿ ಅಪರಿಚಿತ ವ್ಯಕ್ತಿಯ ‘ಸ್ಟೇಟಸ್‌’ಗೆ ಮರುಳಾಗಿ ಮೋಸದ ಬಲೆಗೆ ಬಿದ್ದ ವ್ಯಕ್ತಿ| ಹಣ ಪಡೆದು ನಾಯಿ ಮರಿ ನೀಡಿದ ವಂಚಕರು|


ಬೆಂಗಳೂರು(ಜು.26): ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ನಾಯಿ ಮಾರಾಟದ ನೆಪದಲ್ಲಿ ಸೈಬರ್‌ ಕಳ್ಳರು ವ್ಯಕ್ತಿಯೊಬ್ಬರಿಗೆ 23 ಸಾವಿರ ಟೋಪಿ ಹಾಕಿದ್ದಾರೆ.

ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ನೀಲಾದ್ರಿ ರಸ್ತೆ ನಿವಾಸಿ ಅಭಿನವ್‌ ಅಲ್ಲುರು ವಂಚನೆಗೊಳಗಾಗಿದ್ದು, ಕೆಲ ದಿನಗಳ ಫೇಸ್‌ಬುಕ್‌ನಲ್ಲಿ ಅಪರಿಚಿತ ವ್ಯಕ್ತಿಯ ‘ಸ್ಟೇಟಸ್‌’ಗೆ ಮರುಳಾಗಿ ಆತ ಮೋಸದ ಬಲೆಗೆ ಬಿದ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Tap to resize

Latest Videos

ಯುವತಿ ಜತೆ ಡೇಟಿಂಗ್‌ ಆಸೆ ತೋರಿಸಿ 1 ಲಕ್ಷ ವಂಚನೆ..!

ಜು.14 ರಂದು ಫೇಸ್‌ಬುಕ್‌ನಲ್ಲಿ ಕ್ವಾಲಿಟಿ ನಾಯಿ ಮರಿಗಳನ್ನು ಮಾರಾಟ ಮಾಡುವುದಾಗಿ ಪೋಸ್ಟ್‌ ಹಾಕಿದ್ದರು. ಕೂಡಲೇ ಆ ವ್ಯಕ್ತಿಯ ಮೊಬೈಲ್‌ಗೆ ಕರೆ ಮಾಡಿದೆ. ನಾಯಿಗಳ ಬಗ್ಗೆ ಮಾಹಿತಿ ವಿನಿಮಿಯ ಬಳಿಕ ಆತ, ನನಗೆ ಗೋಲ್ಡನ್‌ ರಿಟ್ರೈವರ್‌ ನಾಯಿಯನ್ನು 17 ಸಾವಿರಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದ. ಈ ಮಾತು ನಂಬಿ ಆತನ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಿದೆ. ನಂತರ ವಿವಿಧ ಕಾರಣಗಳನ್ನು ನೀಡಿ ಒಟ್ಟಾರೆ 23 ಸಾವಿರ ಪಡೆದರು. ಆದಾಗ್ಯೂ ನಾಯಿ ಮರಿ ನೀಡಲಿಲ್ಲ ಎಂದು ದೂರು ನೀಡಿದ್ದಾರೆ.
 

click me!