ಆತ ನೋಡೊಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ. ಇಲ್ಲಿಯೇ ಎಲ್ಲೋ ಭಿಕ್ಷೆ ಬೇಡಿಕೊಂಡು ತಿನ್ನುತ್ತಿದ್ದ ಎಂದುಕೊಂಡಿದ್ದವರಿಗೆ ನಿಜಕ್ಕೂ ಶಾಕ್ ಆಗಿದೆ.
ಹುಬ್ಬಳ್ಳಿ (ಮಾ.18): ಆತ ನೋಡೊಕೆ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದ. ಇಲ್ಲಿಯೇ ಎಲ್ಲೋ ಭಿಕ್ಷೆ ಬೇಡಿಕೊಂಡು ತಿನ್ನುತ್ತಿದ್ದ ಎಂದುಕೊಂಡಿದ್ದವರಿಗೆ ನಿಜಕ್ಕೂ ಶಾಕ್ ಆಗಿದೆ. ಆ ನರಹಂತಕನ ಬಗ್ಗೆ ಪೊಲೀಸ್ (Police) ಆಯುಕ್ತರೇ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಹಾಗಿದ್ದರೇ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ನರಹಂತಕನ ರೋಚಕ ಕಹಾನಿ.
ವಾಣಿಜ್ಯನಗರಿ ಹುಬ್ಬಳ್ಳಿಯ ಕೃಷ್ಣಭವನದ ಹೊಟೇಲ್ ಮುಂಭಾಗದಲ್ಲಿ ಸುಮಾ ಎಂಬ ಮಹಿಳೆಯ ಹತ್ಯೆ ಪ್ರಕರಣದಲ್ಲಿ ಬಂಧಿತನಾದ ವ್ಯಕ್ತಿ, ಎರಡು ವರ್ಷಗಳ ಹಿಂದೆ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮತ್ತೊಂದು ಕೊಲೆ ಮಾಡಿದ್ದ ಎಂಬ ವಿಚಾರ ಪೊಲೀಸ್ ಕಮೀಷನರ್ ಲಾಬುರಾಮ್ (Labhu Ram) ಅವರ ಹೇಳಿಕೆಯಿಂದ ಬೆಳಕಿಗೆ ಬಂದಿದೆ. ಆರೋಪಿ ರಫೀಕ್ ಧಾರವಾಡ ಮೂಲದವನಾಗಿದ್ದು, ಹಣಕ್ಕಾಗಿ ಸರಣಿ ಕೊಲೆಗಳ ಮಾಡಿದ್ದಾನೆ ಎಂಬ ವಿಚಾರ ಬಯಲಾಗಿದೆ. ರಸ್ತೆ ಬದಿ ಮಲಗುವ ಭಿಕ್ಷುಕರನ್ನು ಟಾರ್ಗೆಟ್ ಮಾಡುತ್ತಿದ್ದ ರಫೀಕ್, ತನಗೆ ಹಣ ಬೇಕಾದಾಗ ರಾತ್ರಿ ವೇಳೆ ರಸ್ತೆಯಲ್ಲಿ ಮಲಗಿದ್ದ ಭಿಕ್ಷುರ ತಲೆ ಮೇಲೆಕಲ್ಲು ಹಾಕಿ ಸಾಯಿಸುತ್ತಿದ್ದ ಅನ್ನೊದು ಸದ್ಯ ಬೆಳಕಿಗೆ ಬಂದಿರುವ ಸತ್ಯ.
ಮದುವೆಯಾಗುವಂತೆ ಕೇಳಿದ ಲವರ್‌ಗೆ ಬೆಂಕಿ ಇಟ್ಟ ಪ್ರಿಯಕರ: ಸುಟ್ಟು ಕರಕಲಾದ ಯುವತಿ
ವಿಚಾರಣೆ ವೇಳೆ ಒಂದಲ್ಲ, ಈ ಹಿಂದೆಯೂ ಆತ ಮಾಡಿದ ಕೊಲೆಯ ವಿಚಾರವನ್ನು ಬಾಯ್ಬಿಟ್ಟಿದ್ದಾನೆ. 2020ರ ಲಾಕ್ ಡೌನ್ ಸಂದರ್ಭದಲ್ಲಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಬಳಿ ಮಲಗಿದ್ದ ಭಿಕ್ಷುಕನನ್ನು ಇದೇ ರೀತಿ ತಲೆ ಮೇಲೆ ಕಲ್ಲು ಹಾಕಿ ಸಾಯಿಸಿದ್ದ ವಿಚಾರವನ್ನು ಬಾಯ್ಬಿಟ್ಟಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಆರೋಪಿ ರಫೀಕ್‌ನನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ತನಿಖೆ ಮುಂದುವರೆದಿದೆ. ಬೀದಿಯಲ್ಲಿ ಕಸ ಆರಿಸುವ ಹಾಗೂ ಬೀದಿಯಲ್ಲಿ ಜೀವನ ಮಾಡುವವರನ್ನು ಟಾರ್ಗೆಟ್ ಮಾಡುತ್ತಿದ್ದ ಈ ಹಂತಕ ಇನ್ನಷ್ಟು ಕೊಲೆ ಮಾಡಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇನ್ನೂ ನರಹಂತಕ ಚಿಂದಿ ಆಯುವ ರೀತಿಯಲ್ಲಿಯೇ ತಿರುಗಾಡಿ, ಭಿಕ್ಷೆ ಬೇಡಿ ಹಣ ಸಂಗ್ರಹ ಮಾಡುತ್ತಿದ್ದವರನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿ, ಅವರ ಬಳಿಯಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದ. ಮೊನ್ನೆಯಷ್ಟೇ ದಾವಣಗೆರೆ ಮೂಲದ ಮಹಿಳೆಯ ಕೊಲೆ ಮಾಡಿದ ಬೆನ್ನಲ್ಲೇ ಸಾಕ್ಷಾಧಾರಗಳನ್ನು ಕಲೆಹಾಕಿದ ಪೊಲೀಸರು, ನರಹಂತಕ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಮತ್ತಷ್ಟು ಕೊಲೆಗಳ ಬಗ್ಗೆ ತನಿಖೆಯನ್ನು ಮುಂದುವರೆಸಿದ್ದಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
Bengaluru Crime: ರೌಡಿ ಭಾವನ ಹತ್ಯೆಗೆ ಜೈಲಲ್ಲೇ ಸುಪಾರಿ..!
ರಸ್ತೆ ಬದಿ ಕೊಲೆಯಾದವರು ನಿರ್ಗತಿಕರು ಎಂಬ ಕಾರಣಕ್ಕೆ ಅದೆಷ್ಟೋ ಪ್ರಕರಣಗಳಲ್ಲಿ ಸಮರ್ಪಕವಾದ ತನಿಖೆ ಸಹ ನಡೆಯುವುದಿಲ್ಲ ಆದರೆ ಹುಬ್ಬಳ್ಳಿ ಪೊಲೀಸರು ಫುಟ್‌ಪಾತ್ ಮೇಲೆ ಕೊಲೆಯಾದ ಮಹಿಳೆ ಹತ್ಯೆಯ ಜಾಡು ಹಿಡಿದು ಈಗ ಎರಡು ಕೊಲೆ ಪ್ರಕರಣಗಳನ್ನು ಭೇದಿಸಿದ್ದು, ಇನ್ನಷ್ಟು ಕೊಲೆ ಪ್ರಕರಣಗಳು ಬಯಲಿಗೆಡವಲು ಸಜ್ಜಾಗಿದ್ದಾರೆ.