* 2015ರ ಆಗಸ್ಟ್ 30ರಂದು ಕಲಬುರ್ಗಿ ಹತ್ಯೆ
* ಕಲಬುರ್ಗಿ ವಿಚಾರವಾದಿ ಎನ್ನುವ ಕಾರಣಕ್ಕಾಗಿಯೇ ಕೊಲೆ
* ಏ. 5ಕ್ಕೆ ಪ್ರಕರಣ ಮುಂದೂಡಿಕೆ
ಪರಮೇಶ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
ಧಾರವಾಡ(ಮಾ.18): ಡಾ. ಎಂ.ಎಂ. ಕಲಬುರ್ಗಿ(Dr. MM Kalburgi) ಹತ್ಯೆ(Murder) ಮಾಡಿದ ಆರೋಪದಲ್ಲಿ ಬಂಧಿತರಾದ ಐವರು ಆರೋಪಿಗಳ ವಿಚಾರಣೆ ಸುದೀರ್ಘ ಸಮಯದ ಆನಂತರ ಇಲ್ಲಿಯ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ನಡೆಯಿತು.
ಕಲಬುರ್ಗಿ ಅವರನ್ನು ಗುಂಡಿಟ್ಟು ಕೊಂದು ಈಗ ಏಳು ವರ್ಷಗಳು ಕಳೆದಿವೆ. ಕಲಬುರ್ಗಿ ಹತ್ಯೆಯ ಬಳಿಕ ನಾಡಿನ ಮತ್ತೋರ್ವ ವಿಚಾರವಾದಿ ಗೌರಿ ಲಂಕೇಶ(Gouri Lankesh) ಅವರನ್ನು ಸಹ ಇದೇ ರೀತಿ ಗುಂಡಿಟ್ಟು ಕೊಲ್ಲಲಾಗಿದೆ. ಆ ಬಳಿಕ ನಡೆದ ಎಸ್‌ಐಟಿ ತನಿಖೆಯಲ್ಲಿ(SIT Investigation) ಗೌರಿ ಲಂಕೇಶ ಹತ್ಯೆಯ ಜತೆಗೆ ಕಲಬುರ್ಗಿ ಹಂತಕರಾದ ಗಣೇಶ ಮಿಸ್ಕಿನ್, ಅಮೂಲ್ ಕಾಳೆ, ಅಮಿತ್ ಬದ್ದಿ, ವಾಸುದೇವ ಸೂರ್ಯವಂಶಿ, ಪ್ರವೀಣ ಚತುರ್ ಎಂಬುವರನ್ನು ಬಂಧಿಸಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಇಷ್ಟುದಿನಗಳ ಕಾಲ ಆನ್‌ಲೈನ್ ಮೂಲಕ ನ್ಯಾಯಾಲಯಕ್ಕೆ(Court) ಹಾಜರಾಗಿದ್ದು ಆರೋಪಿಗಳನ್ನು(Accused) ಗುರುವಾರ ಪೊಲೀಸರು(Police) ಭೌತಿಕವಾಗಿ ಇಲ್ಲಿಯ 4ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.
ಕಲಬುರ್ಗಿ ಹತ್ಯೆ ತನಿಖೆ ಪೂರ್ಣ: ಗೌರಿ ಹತ್ಯೆ ಮಾಡಿದವನೇ A1 ಆರೋಪಿ
ಈ ಮಧ್ಯೆ ಆರೋಪಿಗಳು ಪೊಲೀಸ್ ವಾಹನದಿಂದ ಇಳಿಯುತ್ತಲೇ ನಾವು ಅಮಾಯಕರು, ನಿರಪರಾಧಿ ಹಿಂದೂಗಳಿಗೆ ನ್ಯಾಯ ಸಿಗಬೇಕಿದೆ. ಗೌರಿ ಲಂಕೇಶ ವಿಚಾರಣೆ ಬೇಗ ಮುಗಿಸಿ, ಆಗ ಮಾತ್ರ ನಮ್ಮ ಈ ವಿಚಾರಣೆಯೂ ಬೇಗ ಆಗುತ್ತದೆ ಎನ್ನುತ್ತಲೇ ಒಳ ಹೋದರು. ಇಡೀ ಪ್ರಕರಣದ ವಿಚಾರಣೆ ಸಾಕಷ್ಟು ವಿಚಾರಗಳನ್ನು ಒಳಗೊಂಡಿರುವ ಕಾರಣಕ್ಕೆ ಸುದೀರ್ಘವಾದ ವಿಚಾರಣೆ ಮಾಡಬೇಕಿದ್ದ ಕಾರಣ ಪ್ರಕರಣವನ್ನು ಏ. 5ಕ್ಕೆ ಮುಂದೂಡಲಾಯಿತು.
ಘಟನೆ ಕುರಿತು:
2015ರ ಆಗಸ್ಟ್ 30ರಂದು ಬೆಳಗಿನ ಜಾವ ಕಲಬುರ್ಗಿ ಅವರನ್ನು ಕಲ್ಯಾಣ ನಗರದಲ್ಲಿನ ಅವರ ಮನೆಯಲ್ಲಿ ಗುಂಡಿಟ್ಟು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಗುಂಡು ಹೊಡೆದವರು ಹುಬ್ಬಳ್ಳಿ(Hubballi) ಮೂಲದ ಗಣೇಶ ಮಿಸ್ಕಿನ್ ಎಂಬುದು ತನಿಖೆಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಂದು ಮನೆಯಲ್ಲಿದ್ದ ಕಲಬುರ್ಗಿ ಅವರ ಪುತ್ರಿ ರೂಪದರ್ಶಿ ಅವರಿಗೆ ಆರೋಪಿಗಳನ್ನು ಗುರುತಿಸುವಂತೆ ಸೂಚಿಸಲಾಯಿತು. ಇದಕ್ಕೂ ಮೊದಲು ಅಂದು ನಡೆದ ಘಟನೆಯನ್ನು ನ್ಯಾಯಾಧೀಶರ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟ ಪುತ್ರಿ ರೂಪದರ್ಶಿ, ತಂದೆಯನ್ನು ನೆನೆದು ನ್ಯಾಯಾಧೀಶರ ಎದುರು ಕಣ್ಣೀರು ಹಾಕಿದರು. ಇನ್ನು ಗಣೇಶ ಮಿಸ್ಕಿನ್ ಗುಂಡು ಹೊಡೆದಿದ್ದರೆ, ಹೊರಗಡೆ ರಸ್ತೆಯಲ್ಲಿ ಬೈಕ್ ಮೇಲೆ ಮತ್ತೊರ್ವ ಆರೋಪಿ ಪ್ರವೀಣ ಚತುರ ಇದ್ದರು. ಅದನ್ನೂ ಸಹ ರೂಪದರ್ಶಿ ಗುರುತಿಸಿದ್ದರು. ಈ ವಿಚಾರದ ಕುರಿತು ಸಮಗ್ರವಾದ ವಾದ-ವಿವಾದ ನಡೆದ ಬಳಿಕ ಕಲಬುರ್ಗಿ ಅವರ ಪತ್ನಿ ಉಮಾದೇವಿ ಅವರ ಸಾಕ್ಷ್ಯದ ವಿಚಾರಣೆಯನ್ನೂ ಸಹ ನಡೆಸಲಾಗಿತ್ತು.
ಸಂಶೋಧಕ ಕಲ್ಬುರ್ಗಿ ಹಂತಕನ ಗುರುತು ಪತ್ತೆ, ಗೌರಿ ಹತ್ಯೆಗೂ ಲಿಂಕ್
ಒಟ್ಟಾರೆಯಾಗಿ ಕಲಬುರ್ಗಿ ಅವರನ್ನು ವಿಚಾರವಾದಿ(Rationalist) ಎನ್ನುವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂಬ ಮಾತುಗಳು ಮೊದಲು ಕೇಳಿ ಬಂದಿದ್ದವು. ಮೇಲಾಗಿ ಮಹಾರಾಷ್ಟ್ರದ ವಿಚಾರವಾದಿ ದಾಬೋಲ್ಕರ್, ಕಲಬುರ್ಗಿ ಹಾಗೂ ಗೌರಿ ಲಂಕೇಶ ಮೂವರು ಹತ್ಯೆಗಳಲ್ಲಿ ಸಾಮ್ಯತೆಯೂ ಇತ್ತು. ಆದರೆ ಕಲಬುರ್ಗಿ ಹತ್ಯೆ ನಡೆದ ಬಳಿಕ ಕೆಲವು ದಿನಗಳ ವರೆಗೆ ಆರೋಪಿಗಳೇ ಪತ್ತೆಯಾಗಿರಲಿಲ್ಲ. ಸಿಒಡಿ ತನಿಖೆ ಮಾಡುತ್ತಲೇ ಇತ್ತು. ಆದರೆ, ಗೌರಿ ಲಂಕೇಶ ಹತ್ಯೆಯ ತನಿಖೆ ಕೈಗೊಂಡ ಎಸ್‌ಐಟಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು.
ಆರೋಪಿಗಳು ಕೋರ್ಟ್‌ಗೆ ಹಾಜರು, ಓರ್ವ ಗೈರು
ಧಾರವಾಡ: ಸಂಶೋಧಕ ಡಾ. ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಗಳನ್ನು 2019ರ ಅ.17 ರಂದು: ಪೊಲೀಸರು ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳಾದ ಗಣೇಶ ಮಿಸ್ಕಿನ್, ಅಮಿತ್ ಬದ್ದಿ, ಪ್ರವೀಣ ಚತುರ, ವಾಸುದೇವ ಸೂರ್ಯವಂಶಿ, ಶರದ ಕಳಾಸ್ಕರ್ ಎನ್ನುವರನ್ನು ಪೊಲೀಸರು ನ್ಯಾಯಾಲಕ್ಕೆ ಹಾಜರುಪಡಿಸಲಾಗಿತ್ತು.