ಯಾದಗಿರಿ (ಆ.7) : ಕರ್ನಾಟಕ ಲೋಕಸೇವಾ ಆಯೋಗ (KPSC) ಮೂಲಕ ೨೦೧೯ ರಲ್ಲಿ ನಡೆದ ಎಸ್‌ಡಿಸಿ(SDC) ಪರೀಕ್ಷೆಗಳಲ್ಲಿ ಬ್ಲೂಟೂತ್(Bluetooth) ಅಕ್ರಮವೆಸಗಿದ ಮೂವರು ಅಭ್ಯರ್ಥಿಗಳು ಆಯೋಗ ನಡೆಸುವ ಯಾವುದೇ ಪರೀಕ್ಷೆಗೆ ಹಾಜರಾಗದಂತೆ ಶಾಶ್ವತ ಡಿಬಾರ್ ಮಾಡಿ ಆದೇಶ ಹೊರಡಿಸಲಾಗಿದೆ. ಅಲ್ಲದೆ, ಇಂತಹ ಅಕ್ರಮ ಸಾಬೀತಾದ ಇನ್ನೂ ಹಲವರ ವಿರುದ್ಧವೂ ಇಂತಹ ಆದೇಶ ಶೀಘ್ರದಲ್ಲೇ ಹೊರಬೀಳುವ ಸಾಧ್ಯತೆಯಿದೆ.
ಪರೀಕ್ಷೆ ಬರೆದು 17 ತಿಂಗಳಾದರೂ ಫಲಿತಾಂಶ ಇಲ್ಲ, ಕೆಪಿಎಸ್‌ಸಿ ಕಚೇರಿ ಮುಂದೆ ಹೈಡ್ರಾಮಾ
undefined
ಕೆಪಿಎಸ್ಸಿ ಕಾರ್ಯದರ್ಶಿಯಾಗಿ ಇತ್ತೀಚೆಗಷ್ಟೇ ವರ್ಗಾವಣೆಗೊಂಡ ಐಎಎಸ್ ಅಧಿಕಾರಿ ವಿಕಾಸ್ ಕಿಶೋರ್ ಸುರಾಳಕರ್ ಇಂತಹ ಕಠಿಣ ಕ್ರಮಕ್ಕೆ ಮುಂದಾಗಿರುವುದು ಅಕ್ರಮ ಅಭ್ಯರ್ಥಿಗಳ ಬೆವರಿಳಿಸಿದೆ.
ಕರ್ನಾಟಕ ಲೋಕಸೇವಾ ಆಯೋಗದ, ೨೦೧೯ನೇ ಸಾಲಿನ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳ ನೇಮಕಾತಿಗೆ ಸಂಬಂಽಸಿದಂತೆ, ಸೆ.೧೮ ಹಾಗೂ ಸೆ.೧೯ರ ೨೦೨೧ ರಂದು ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಾಗಿತ್ತು.
ಪಿಎಸ್‌ಐ ಪರೀಕ್ಷೆ ಮಾತ್ರವಲ್ಲ! ಕೆಪಿಎಸ್‌ಸಿ ಪರೀಕ್ಷೆಯಲ್ಲೂ ನಡೆದಿದೆಯಾ ಡೀಲ್?
ಬಾಗಲಕೋಟೆಯ ವಿದ್ಯಾಗಿರಿಯ ಬಿವಿವಿ ಸಂಘದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪರೀಕ್ಷಾ ಉಪಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಆನಂದ್ ಅಮಜಿಗೋಳ್, ಬೆಳಗಾವಿಯ ಅಂಜುಮನ್ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದ ಅಭ್ಯರ್ಥಿ ಬಾಬಣ್ಣ ವಡ್ಡರ್ ಹಾಗೂ ಬಾಗಲಕೋಟೆ ಶಂಕ್ರಪ್ಪ ಸಕ್ರಿ ಪಿಯು ಕಾಲೇಜು ಕೇಂದ್ರದ ವಿಠಲ್ ಹುಲಗಬಾಳ್ ಇವರುಗಳು ಎಲೆಕ್ಟ್ರಾನಿಕ್ ಉಪಕರಣಗಳಾದ ಬ್ಲೂಟೂತ್ ಡಿವೈಎಸ್ ಮತ್ತು ಮೈಕ್ರೋಫೋನ್‌ಗಳ ಬಳಕೆ ಮಾಡಿ ಪರೀಕ್ಷಾ ನಿಯಮ ಉಲ್ಲಂಘಿಸಿದ್ದಾರೆಂದು ಜಿಲ್ಲಾಽಕಾರಿಗಳು ವರದಿ ನೀಡಿದ್ದರು. ಅಲ್ಲಿ ಎಫ್‌ಐಆರ್ ಸಹ ದಾಖಲಾಗಿತ್ತು.
ನೇಮಕಾತಿ ಉದ್ದೇಶಕ್ಕೆ ಅನುಚಿತ ಮಾರ್ಗ ಅನುಸರಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ದುರಾಚಾರ ಪ್ರಕರಣ ಎಂದು ಪರಿಗಣಿಸಿ, ಅಭ್ಯರ್ಥಿಗಳಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು. ಅಭ್ಯರ್ಥಿಗಳ ಹೇಳಿಕೆ ಮತ್ತು ಸಂಬಂಽಸಿದ ದಾಖಲೆಗಳನ್ನು ಪರಿಶೀಲಿಸಿದಾಗ ನಡೆದ ಸಭೆಯಲ್ಲಿ, ಆಯೋಗವು ನಡೆಸುವ ಯಾವುದೇ ಪರೀಕ್ಷೆಗಳಿಗೆ ಹಾಜರಾಗದಂತೆ ಶಾಶ್ವತ ಡಿಬಾರ್ ಮಾಡಿ ವಿಕಾಸ್ ಕಿಶೋರ್ ಸುರಾಳಕರ್ ಆದೇಶಿಸಿದ್ದಾರೆ. ಪಿಎಸೈ ನೇಮಕದಲ್ಲಿ ಬ್ಲೂಟೂತ್ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿಗೆ, ಎಫ್‌ಡಿಎ ಹಾಗೂ ಎಸ್‌ಡಿಎ ಪರೀಕ್ಷೆಗಳಲ್ಲೂ ಇಂತಹ ಅಕ್ರಮದ ವಾಸನೆ ಬಡಿದಿದ್ದು, ಈ ಬಗ್ಗೆಯೂ ಮಾಹಿತಿಗಳನ್ನು ಸಿಐಡಿ ಕಲೆ ಹಾಕುತ್ತಿದೆ ಎನ್ನಲಾಗಿದೆ.
ಅಕ್ರಮವೆಸಗಿದ ಅಭ್ಯರ್ಥಿಗಳನ್ನು ಆಯೋಗದ ಪರೀಕ್ಷೆಗಳಲ್ಲಿ ಶಾಶ್ವತ ಡಿಬಾರ್ ಮಾಡಲಾಗಿದೆ. ಇಂತಹ ಇನ್ನೂ ಹಲವರ ಆದೇಶ ಮುಂದಿನ ದಿನಗಳಲ್ಲಿ ಹೊರಬೀಳಲಿದೆ. : ವಿಕಾಸ್ ಕಿಶೋರ್ ಸುರಾಳಕರ್, ಕಾರ್ಯದರ್ಶಿ, ಕೆಪಿಎಸ್ಸಿ.
೬ಯಾದಗಿರ೫ : ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಾಳಕರ್ ಆದೇಶ.