ಕೋಲಾರ: ಆರೆಸ್ಸೆಸ್‌ ಮುಖಂಡನ ಮೇಲೆ ಹಲ್ಲೆ, ಕೊಲೆಗೆ ಯತ್ನ

By Girish Goudar  |  First Published Aug 7, 2022, 12:30 AM IST

ಕೋಲಾರ ಜಿಲ್ಲೆಯ ಮಾಲುರು ಪಟ್ಟಣದಲ್ಲಿ ನಡೆದ ಘಟನೆ


ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ(ಆ.07):  ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆ ಪ್ರಕರಣಗಳು ರಾಜ್ಯದ ಹಾಗೂ ದೇಶದ ಜನರನ್ನು ಬೆಚ್ಚಿ ಬೀಳಿಸುತ್ತಿರುವ ಘಟನೆ ಬೆನ್ನಲ್ಲೇ ನಿನೆ(ಶನಿವಾರ) ಕೋಲಾರದಲ್ಲೂ ಕೂಡ ಆರ್‌ಎಸ್‌ಎಸ್‌​ ಮುಖಂಡನ ಮೇಲೆ ಹಲ್ಲೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳದಿಂದ ಮಾಲುರು ಪಟ್ಟಣದಲ್ಲಿ ಕೆಲಕಾಲ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.  ಚಾಕುವಿನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರ್‌ಎಸ್‌ಎಸ್‌​ ಮುಖಂಡ ರವಿ, ಮತ್ತೊಂದೆಡೆ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿರುವ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮತ್ತೊಂದೆಡೆ ಪೊಲೀಸ್​ ಠಾಣೆಯಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ಇಂಥದೊಂದು ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ. 

Tap to resize

Latest Videos

ಹೌದು ಶನಿವಾರ ಮಧ್ಯಾಹ್ನ 2.30 ರ ಸುಮಾರಿಗೆ ಮಾಲೂರು ಪಟ್ಟಣದ ಮಾರಿಕಾಂಭ ದೇವಾಲಯದ ಬಳಿಯಲ್ಲಿ ಆರ್‌ಎಸ್‌ಎಸ್‌​ ಜಿಲ್ಲಾ ಶಾರೀರಿಕ್​ ಪ್ರಮುಖ್​/ ಜಿಲ್ಲಾ ಸಂಚಾಲಕ ರವಿ ಎಂಬುವರ ಸ್ಟೀಲ್​ ಅಂಗಡಿ ಎದುರು ಇಬ್ಬರು ಮುಸ್ಲಿಂ ವ್ಯಕ್ತಿಗಳು ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದಾಗ, ಕೆಲ ಕಾಲ ನೋಡಿದ ರವಿ ಅವರು ಜಗಳ ಬಿಡಿಸಲು ಹೋದ ಸಂದರ್ಭದಲ್ಲಿ ಇಬ್ಬರು ಮುಸ್ಲಿಂ ವ್ಯಕ್ತಿಗಳು ರವಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಲ್ಲದೆ ಅವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ರವಿ ಕಿವಿ ಹಾಗೂ ಕೈಗೆ ಗಂಭೀರವಾದ ಗಾಯಗಳಾಗಿವೆ. ಈ ವೇಳೆ ತಕ್ಷಣ ಸ್ಥಳೀಯರು ನೆರವಿನಿಂದ ರವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ಹಲ್ಲೆ ಮಾಡಿದವರ ಪೈಕಿ ಒಬ್ಬ ಸಯ್ಯದ್​ ವಾಸೀಂ ಎಂಬುವನನ್ನು ಸ್ಥಳೀಯರು ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಅಲ್ಲದೆ ಚಾಕುವಿನಿಂದ ಹಲ್ಲೆಗೊಳಗಾಗಿದ್ದ ರವಿ ಎಂಬುವರನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ತನ್ನ ಕಾಮದ ತೀಟೆಗೆ ಹೆತ್ತ ಮಗನನ್ನೇ ಕೊಂದ ಪಾಪಿ ತಾಯಿ

ಇನ್ನು ಘಟನೆ ವಿಷಯ ತಿಳಿಯುತ್ತಿದ್ದಂತೆ ಮಾಲೂರಿನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಘಟನೆಯನ್ನು ಖಂಡಿಸಿ ಮಾರಿಕಾಂಭ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿದರು. ಜೊತೆಗೆ ಹಲ್ಲೆಗೊಳಗಾದ ಆರ್‌ಎಸ್‌ಎಸ್‌​  ಮುಖಂಡ ರವಿ ಪೊಲೀಸರಿಗೆ ದೂರು ನೀಡಿದ್ದು ದೂರಿನಲ್ಲಿ ನನ್ನ ಮೇಲೆ ಕೊಲೆ ಯತ್ನ ನಡೆದಿದೆ ಎಂದು ದೂರು ನೀಡಿದ್ದಾರೆ. ಅಲ್ಲದೆ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಇನ್ನು ಘಟನೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಾಲೂರು ಪೊಲೀಸರು ಓರ್ವ ಆರೋಪಿ ಸೈಯ್ಯದ್ ವಾಸೀಂ ಎಂಬುವನನ್ನು ಬಂಧಿಸಿದ್ದಾರೆ, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. 

ಕಿಡ್ನಾಪ್‌ ಆದ ಹುಡ್ಗಿ 10 ವರ್ಷ ಬಳಿಕ ಮನೆ ಸೇರಿದ್ಲು, ಮನೆಯಿಂದ 500 ಮೀಟರ್‌ ದೂರದಲ್ಲಿ ವಾಸವಿದ್ಲು!

ಈ ನಡುವೆ ಘಟನೆ ತಿಳಿಯುತ್ತಿದ್ದಂತೆ ನೂರಾರು ಹಿಂದು ಸಂಘಟನೆಗಳ ಕಾರ್ಯಕರ್ತರು ಮಾಲೂರು ಪೊಲೀಸ್​ ಠಾಣೆ ಎದುರು ಜಮಾಯಿಸಿದ್ದರು.ಈ ವೇಳೆ ಸ್ಥಳಕ್ಕೆ ಬಂದ ಎಸ್ಪಿ ದೇವರಾಜ್​ ಹಾಗೂ ಕಾರ್ಯಕರ್ತರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು,ಆರೋಪಿಯನ್ನು ತಕ್ಷಣ ಬಂಧಿಸಲಾಗಿದೆ ಹೀಗಿದ್ರು ಪ್ರತಿಭಟನೆ ಮಾಡುತ್ತಿದ್ದಕ್ಕೆ ಎಸ್ಪಿ ದೇವರಾಜ್​ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಬೇಸರ ವ್ಯಕ್ತಪಡಿಸಿದ್ರು ಕೆಲಕಾಲ ಪೊಲೀಸ್​ ಠಾಣೆ ಎದುರು ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಯಿತಾದರೂ ಕಾರ್ಯಕರ್ತರನ್ನು ಸಮಾದಾನ ಪಡಿಸಲಾಯಿತು.ಇನ್ನು ಘಟನೆ ಸಂಬಂಧ ಪ್ರಾಥಮಿಕ ಮಾಹಿತಿ ಪ್ರಕಾರ ಇಬ್ಬರು ಗಾಂಜಾ ಅಥವಾ ಮದ್ಯದ ಅಮಲಿನಲ್ಲಿದ್ದರು ಎಂದು ಹೇಳಲಾಗುತ್ತಿದ್ದು ಆ ಸಂಬಂಧ ಕೂಡಾ ತಪಾಸಣೆ ನಡೆಸಲಾಗುತ್ತಿದ್ದು, ಘಟನೆ ಅಚಾನಕ್ಕಾಗಿ ನಡೆದ ಘಟನೆಯೋ ಅಥವಾ ಉದ್ದೇಶ ಪೂರ್ವಕವಾಗಿ ನಡೆದ ಘಟನೆಯೋ ಅನ್ನೋದರ ಕುರಿತು ತನಿಖೆ ನಡೆಸಲಾಗುತ್ತಿದೆ.

ಒಟ್ಟಾರೆ ರಾಜ್ಯದಲ್ಲಿ ಮೇಲಿಂದ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರ ಕೊಲೆಗಳು ಹಾಗೂ ಹಲ್ಲೆಗಳು ನಡೆಯುತ್ತಿವೆ. ಮಂಗಳೂರು ಘಟನೆ ಮಾಸುವ ಮೊದಲೇ ಮತ್ತೊಂದು ಹಿಂದೂ ಸಂಘಟನೆ ಮುಖಂಡನ ಮೇಲೆ ಹಲ್ಲೆಯಾಗಿರೋದು ಆತಂಕ ಮೂಡಿಸಿದ್ದು ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಅನ್ನೋದು ಸಂಘಟನೆಗಳ ಕಾರ್ಯಕರ್ತರ ಆಗ್ರಹವಾಗಿದೆ. 
 

click me!