ಹಣ ದ್ವಿಗುಣಗೊಳಿ ಕೊಡ್ತೇವೆ ಎಂದ ಪರ್ಲ್ಸ್, ನಂಬಿ ಪರದೇಶಿಗಳಾದ ಏಜೆಂಟರು

By Suvarna NewsFirst Published Jun 28, 2022, 1:49 PM IST
Highlights

* ಪರ್ಲ್ಸ್ ನಂಬಿ ಪರದೇಶಿಗಳಾದ ಏಜೆಂಟರು
* ಹಣ ದ್ವಿಗುಣಗೊಳಿ ಕೊಡ್ತೇವೆ ಎಂದು ಮೋಸ ಮಾಡಿದ ಪರ್ಲ್ಸ್ 
* ಫೋನ್ ನಾಟ್ ರಿಚೇಬಲ್ ಮಾಡಿ ಎಸ್ಕೇಪ್ ಆದ ಕಂಪನಿ ಅಧಿಕಾರಿಗಳು

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ
 
ಧಾರವಾಡ, (ಜೂನ್.28) :
ಅದು ಬಹುಕೋಟಿ ಮೊತ್ತದ ಹಗರಣ ಆ ಒಂದೇ ಒಂದು ಕಂಪನಿ ನಂಬಿ ಜನರಿಂದ ಪಾಲಸಿಗೋಸ್ಕರ ಹಣ ಪಡೆದವರು ಇಂದಿಗೂ ಒದ್ದಾಡುತ್ತಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.  ಆ ಕಂಪನಿ ಮಾಡಿದ ಮೋಸದಿಂದಾಗಿ ಅದರ ಏಜೆಂಟರು ಇದೀಗ ಸಾಯಲು ಆಗದೇ ಬದುಕಲೂ ಆಗದೇ ನರಳಾಡುತ್ತಿದ್ದಾರೆ. ಘಟನೆ ಧಾರವಾಡದಲ್ಲಿ ನಡೆದಿದೆ..

ಪರ್ಲ್ಸ್ ಎಂಬ ಚಿಟ್ಸ್‌ಫಂಡ್ ಕಂಪನಿ ಜನರಿಂದ ಹಣ ಪಡೆದು ಆ ಹಣವನ್ನು ದ್ವಿಗುಣಗೊಳಿಸಿ ಕೊಡುತ್ತೇವೆ ಎಂದು 2012 ರಲ್ಲಿ ಕೋಟಿ ಕೋಟಿಯಷ್ಟು ಹಣವನ್ನ ಜನರಿಂದ ಇನ್ಸುರೆನ್ದ್ ರೂಪದಲ್ಲಿ  ತುಂಬಿಸಿಕೊಂಡಿತ್ತು. ಸದ್ಯ ಇನ್ಸುರನ್ಸ್ ತುಂಬಿಕೊಂಡ ಕಂಪನಿಯ ಮೇಲಾಧಿಕಾರಿಗಳು ಫೋನ್ ನಾಟ್ ರಿಚೇಬಲ್ ಮಾಡಿ ಎಸ್ಕೇಪ್ ಆಗಿದ್ದಾರೆ... ಜನರ ಹಣವನ್ನು ಕೊಳ್ಳೆ ಹೊಡೆದಿದ್ದು, ಎಲ್ಲರಿಗೂ ಗೊತ್ತೇ ಇದೆ. ಆದರೆ, ಈ ಕಂಪೆನಿ ನಂಬಿ ಪರ್ಲ್ಸ್ ಕಂಪನಿಯ ಏಜೆಂಟ್‌ರಾಗಿ ಜನರಿಂದ ಹಣ ಪಾವತಿ ಮಾಡಿಸಿಕೊಂಡವರ ಪಾಡು ಇದೀಗ ಹೇಳತೀರದಾಗಿದೆ.

Crime News: ಪತಿ, ಅತ್ತೆಗೆ ಮತ್ತು ಬರುವ ಔಷಧಿ ಕುಡಿಸಿ, ಚಿನ್ನಾಭರಣ ಕದ್ದು ಪ್ರೇಮಿಯೊಂದಿಗೆ ಮಹಿಳೆ ಪರಾರಿ

ಇಂತಹ ಚಿಟ್ಸ್‌ ಫಂಡ್ ಕಂಪನಿಗಳು ಮಾಡಿದ ಮೋಸದಿಂದಾಗಿ ಇದೀಗ ಹಣ ಪಡೆದ ಏಜೆಂಟರು ಮತ್ತು ಹಣ ತುಂಬಿದವರು ಹಣ ವಾಪಸ್ ಬರದೇ ಒದ್ದಾಡುತ್ತಿದ್ದಾರೆ. ಹಣ ಕೊಟ್ಟವರು ಏಜೆಂಟರ್‌ ಮನೆಗಳಿಗೆ ಬಂದು ನಮ್ಮ ಹಣ ಕೊಡಿಸಿ ಎಂದು ಅಂಗಲಾಚುತ್ತಿದ್ದಾರೆ. ಏಜೆಂಟರು ಜನ ಕೊಟ್ಟ ಹಣವನ್ನು ಕಂಪೆನಿಗೆ ತುಂಬಿ, ಕಂಪನಿ ಒಳ್ಳೆಯದಿರಬಹುದು ಎಂದು ನಂಬಿದ್ದರು. ಆದರೆ, ಕೆಲವೇ ವರ್ಷಗಳಲ್ಲಿ ಈ ಪರ್ಲ್ಸ್ ಕಂಪೆನಿ ಬಾಗಿಲು ಮುಚ್ಚಿಕೊಂಡು ಹೋಗಿದ್ದರಿಂದ ಇದೀಗ ಏಜೆಂಟರು ಹಣ ಕೊಟ್ಟವರಿಗೆ ಉತ್ತರ ಕೊಡಬೇಕಾಗಿದೆ.

ಧಾರವಾಡ ಅಷ್ಟೇ ಅಲ್ಲದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಈ ಪರ್ಲ್ಸ್ ಕಂಪನಿ ನಂಬಿ ಜನರಿಂದ ದುಡ್ಡು ತಂದು ಹಾಕಿದವರು ಸಾಕಷ್ಟಿದ್ದಾರೆ. ಇದೀಗ ಸಿಬಿಐ ತನಿಖೆಯಿಂದಾಗಿ ಆ ಪರ್ಲ್ಸ್ ಕಂಪೆನಿ ಮುಚ್ಚಿ ಹೋಗಿದ್ದು, ಈಗ  ಏಜೆಂಟ್‌ರಿಗೆ ದಿಕ್ಕು ತೋಚದಂತಾಗಿದೆ. ಗ್ರಾಮಿಣ ಭಾಗದಲ್ಲಿ 50,000 ದಿಂದ ,1 ಲಕ್ಷದವರೆಗೆ ತುಂಬಿದ ಬಡ ಕುಟುಂಬಗಳು ಸದ್ಯ ಏಜಂಟರಿಗೆ ನಮ್ಮ‌ಹಣವನ್ನ ನಮಗೆ ನೀಡಿ ಎಂದು ಏಜಂಟರ್ ಮನೆಗಳಿಗೆ ಲಗ್ಗೆ ಇಡ್ತಾ ಇದಾರೆ..ಆದರೆ ಏಜಂಟರಿಗೆ ಇತ್ತ ಹಣವೂ ಇಲ್ಲ, ಕಂಪನಿಯವರು ಫೋನ್ ಸ್ವಿಚ್ಚ್ ಆಪ್ ಆಗಿದೆ...ಅವರು ಕಾಲ್ ತಗೀತಾ ಇಲ್ಲ...ಸದ್ಯ ನಿಮ್ಮ ಜಮಿನನ್ನಾದರೂ ಮಾರಿ ನಮ್ಮ ಹಣ ಕೊಡಿ ಎಂದು ಏಜಂಟರಿಗೆ ಕೇಳಿಕೊಂಡಿದ್ದಾರೆ..ಸದ್ಯ ಏಜಂಟರು ನಾವು ನೇಣಿಗೆ ಶರನಾಗೋ ಪರಿಸ್ಥಿತಿ ಎದುರಾಗಿದೆ ಎಂದು ಮಾದ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ...

ಜನರಿಂದ ಹಣ ಪಡೆದು ಪಾಲಸಿಗೋಸ್ಕರ್ ಕಂಪೆನಿಗೆ ಹಣ ತುಂಬಿದ ಏಜೆಂಟರಿಗೆ ಇದುವರೆಗೂ ತುಂಬಿದ ಹಣ ವಾಪಸ್ ಬಂದಿಲ್ಲ. ಹೀಗಾಗಿ ಹಣ ತುಂಬಿದ ಜನ ಏಜೆಂಟ್‌ರ ಮನೆಗಳಿಗೆ ಹೋಗಿ ಹಣ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಅಡಕೊತ್ತಿನಲ್ಲಿ ಅಡಿಕೆ ಸಿಕ್ಕಂತಾಗಿದೆ ಈ ಏಜೆಂಟರ್‌ ಪರಿಸ್ಥಿತಿ. ಇವರ ನೋವನ್ನು ಯಾರೂ ಕೇಳಲಾರದಂತಾಗಿದ್ದು, ನಮಗೇನಾದರೂ ದಾರಿ ಮಾಡಿಕೊಡಿ ಎಂದು ಏಜೆಂಟರು ಮನವಿ ಮಾಡುತ್ತಿದ್ದಾರೆ.

click me!