ಪಾವಗಡದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಇಸ್ಪೀಟ್, ಮಟ್ಕಾ ದಂಧೆ

Published : Jun 28, 2022, 12:28 PM IST
ಪಾವಗಡದಲ್ಲಿ ರಾಜಾರೋಷವಾಗಿ ನಡೆಯುತ್ತಿದೆ ಇಸ್ಪೀಟ್, ಮಟ್ಕಾ ದಂಧೆ

ಸಾರಾಂಶ

* ಪಾವಗಡ ಪಟ್ಟಣದಲ್ಲಿ ತಲೆ ಎತ್ತಿದ ಮಟ್ಕಾ ದಂಧೆ * ರಾಜಾರೋಷವಾಗಿ ನಡೆಯುತ್ತಿದೆ ಇಸ್ಪೀಟ್, ಮಟ್ಕಾ ದಂಧೆ  * ಹಾಡ ಹಗಲೇ ಮಟ್ಕಾ ಬರೆಯುತ್ತಿರುವ ಬೀಟರ್ * ಕಣ್ಮುಚ್ಚಿ ಕುಳಿತ ಪೊಲೀಸ್ ಇಲಾಖೆ 

ತುಮಕೂರು, (ಜೂನ್.27): ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದ್ದು, ಸೋಮವಾರ  ಪಾವಗಡ ಪಟ್ಟಣದ ಹಳೆಸಂತೆ ಮೈದಾನದ ಹತ್ತಿರ ಹೇರ್ ಕಟಿಂಗ್ ಸೆಲೂನ್‌ನಲ್ಲಿ  ಮಟ್ಕಾ ಬರೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಇಲ್ಲಿನ ಬಡಬಗ್ಗರು , ಕೂಲಿ ಕಾರ್ಮಿಕರು , ಮಧ್ಯಮ ವರ್ಗದ ಜನರು ಹಾಗೂ ರೈತಾಪಿ ವರ್ಗದ ಜನತೆ ಮಟ್ಕಾ ಮತ್ತು ಇಸ್ಪೀಟ್ ದಂಧೆಯಲ್ಲಿ ತೊಡಗಿದ್ದಾರೆ . ಹಾಗಾಗಿ ಇವರುಗಳ ಹೆಂಡತಿ - ಮಕ್ಕಳು ಉಪವಾಸ ಅನುಭವಿಸುವ ದುಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ .

ಆಫ್ ಹೆಲ್ಮೆಟ್, ಶೋಕಿ ಸೈಲೆನ್ಸರ್: ಪುಡಿ-ಪುಡಿ ಮಾಡಿದ ರೋಡ್‌‌ ರೋಲರ್

ಸೋಮವಾರ ಮಟ್ಕಾ ಬರೆಯುತ್ತಿದ್ದ ಬೀಟರ್ ಮಾತನಾಡಿ , ತಾನು ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದು , ತನಗೆ ದುಡಿಯಲು ಸಾಧ್ಯವಾಗುತ್ತಿಲ್ಲ . ಮಟ್ಕಾ ಬರೆದು ಜೀವನ ಮಾಡುತ್ತಿದ್ದೇನೆ . ದಿನ ಒಂದಕ್ಕೆ 3 ರಿಂದ 5 ಸಾವಿರ ಕಲೆಕ್ಷನ್ ಆಗುತ್ತದೆ . ಈ ಮೊತ್ತವನ್ನು ಮಟ್ಕಾ ಅಶ್ವತ್ಥಪ್ಪನಿಗೆ ನೀಡಿ , ತನ್ನ ಕಮಿಷನ್ ( ದಲ್ಲಾಲಿ ) ಹಣ ಪಡೆಯುತ್ತೇನೆ ಎಂದರು .

ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ ಪಟ್ಟಣದ ನಡೆಯುತ್ತಿದ್ದು , ಬಡಾವಣೆ , ನಾಗರಕಟ್ಟೆ , ಭರ್ಜರಿಯಾಗಿ ಕುಮಾರಸ್ವಾಮಿ ನಲಿಗಾನಹಳ್ಳಿ , ಬಾಲಮ್ಮನಹಳ್ಳಿ , ಪಳವಳ್ಳಿ , ಕ್ಯಾತಗಾನಚೆರ್ಲು ,ತಿರುಮಣಿ , ವೆಂಕಟಮ್ಮನಹಳ್ಳಿ , ಪಿ.ರೊಪ್ಪ , ಹೊಸ ಬಸ್ಟ್ಯಾಂಡ್ , ಹಳೆ ಬಸ್ಟ್ಯಾಂಡ್ , ಹಳಸಂತೆ - ಮಾರುಕಟ್ಟೆಯ ಹತ್ತಿರದ ಟೀ ಸ್ಟಾಲ್ ಮಧ್ಯೆ , ಮಂಗಳವಾಡದ ರೈನ್ ಗೇಜ್ ಬಡಾವಣೆ , ಪಳವಳ್ಳಿ ಈ ಎಲ್ಲಾ ಪ್ರದೇಶಗಳಿಂದ ಮಟ್ಟಾ ಬೀಟರ್‌ಗಳು ಲಕ್ಷಾಂತರ ಹಣ ವಸೂಲ ಮಾಡುತ್ತಿದ್ದಾರೆ . 

ಪ್ರತಿದಿನ ರಾತ್ರಿ 8 ಗಂಟೆಗೆ ಕರಾರುವಾಕ್ಕಾಗಿ ಮಟ್ಕಾ ಕೇಂದ್ರಗಳಿಗೆ ಹಣ ಸೇರುತ್ತಿದೆ ಎಂದು ತಾಲ್ಲೂಕಿನಾದ್ಯಂತ ನಿರಂತರವಾಗಿ ಮಟ್ಕಾ ದಂಧೆ ನಡೆಯುತ್ತಿದ್ದು , ಪೋಲೀಸ್ ಇಲಾಖೆಯ ಕೆಲವೊಂದು ಸಿಬ್ಬಂದಿಯೆ ದಂಧೆಕೋರರಿಗೆ ದಾಳಿಯ ವರ್ತಮಾನ ನೀಡಿ , ದಂಧೆಯಲ್ಲಿ ತೊಡಗಿರುವ ಆಟಗಾರರೊಂದಿಗೆ ಶಾಮೀಲಾಗಿದ್ದಾರೆ . ಪೋಲೀಸರೆ ಮೊಬೈಲ್ ಮೂಲಕ ಮಾಹಿತಿ ನೀಡಿ , ದಂಧೆಕೋರರು ಪರಾರಿಯಾಗಲು ಅನುವು ಮಾಡಿಕೊಡುತ್ತಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕರಿಂದ ವ್ಯಕ್ತವಾಗಿದೆ . 

ಇಂತಹ ಅವ್ಯವಸ್ಥೆಯಿಂದ ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ ಮತ್ತು ಇಸ್ಪೀಟ್ ದಂಧೆ ನಿಲ್ಲಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎಂಬುದು ನಾಗರಿಕರ ಮಾತಾಗಿದೆ . ತಾಲ್ಲೂಕು ಆಂಧ್ರದ ಗಡಿ ಭಾಗದಲ್ಲಿ ಇದ್ದು , ಆಂಧ್ರ ಪ್ರದೇಶದಿಂದಲೂ ಮಟ್ಕಾ ಮತ್ತು ಇಸ್ಪೀಟ್ ಆಡಲು ಜನತೆ ಬರುತ್ತಿದ್ದು , ದೊಮ್ಮತಮರಿ ಗಡಿಯಲ್ಲಿ ವೆಂಕಟಮ್ಮನಹಳ್ಳಿ , ಲಿಂಗದಹಳ್ಳಿ , ಅರಸಿಕೆರೆ , ಜಂಜೂರಾಯನ ಭಾಗದಲ್ಲಿ ನಿರಂತರ ಇಸ್ಪೀಟ್ ದಂಧೆ ನಡೆಯುತ್ತಿದೆ .

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ
Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!