ಪತಿಯನ್ನ ಬರ್ಬರ ಹತ್ಯೆ ಮಾಡಿ ರೋಡ್ ಆಕ್ಸಿಡೆಂಟ್ ರೀತಿ ಬಿಂಬಿಸಲು ಹೊರಟ ಐನಾತಿ ಪತ್ನಿ!

By Ravi Janekal  |  First Published Aug 31, 2024, 2:33 PM IST

ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿ ಬಳಿಕ ರೋಡ್ ಆಕ್ಸಿಡೆಂಟ್ ರೀತಿ ಬಿಂಬಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಗದಗ ಜಿಲ್ಲೆಯ ಕೋಟುಮಚಗಿ ಗ್ರಾಮದ ಬಳಿ ನಡೆದಿದೆ.


ಗದಗ (ಆ.31) ಪ್ರಿಯಕರನ ಜೊತೆ ಸೇರಿ ಪತಿಯನ್ನು ಹತ್ಯೆ ಮಾಡಿ ಬಳಿಕ ರೋಡ್ ಆಕ್ಸಿಡೆಂಟ್ ರೀತಿ ಬಿಂಬಿಸಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಗದಗ ಜಿಲ್ಲೆಯ ಕೋಟುಮಚಗಿ ಗ್ರಾಮದ ಬಳಿ ನಡೆದಿದೆ.

ಮಂಜುನಾಥ್ ಮೀಸಿ (30) ಪತ್ನಿಯಿಂದಲೇಹತ್ಯೆಯಾದ ದುರ್ದೈವಿ. ಪತ್ನಿ ಶಿವಮ್ಮ, ಪ್ರಿಯಕರ ಮಂಜುನಾಥ್ ಯಲಬುರ್ಗಾ ಬಂಧಿತ ಆರೋಪಿಗಳು. ಆಗಷ್ಟ್ 30 ರಂದು ಕೋಟುಮಚಗಿ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಮಂಜುನಾಥ್ ಮೀಸಿ ಮೃತದೇಹ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಯಾವುದೋ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದೆ ಎಂಬಂತೆ ಕಾಣುವಂತಿತ್ತು. ಸ್ಥಳಕ್ಕೆ ಬಂದು ಪೊಲೀಸರು ಮೃತದೇಹ ಪರೀಕ್ಷಿಸಿದಾಗ ಇದು ಅಪಘಾತ ಅಲ್ಲ, ಕೊಲೆ ನಡೆದ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿದೆ. 

Tap to resize

Latest Videos

undefined

 

ಜೆಡಿಎಸ್ ಕಾರ್ಯಾಧ್ಯಕ್ಷೆ ಎಂದು ಹೇಳಿ 8 ಜನರೊಂದಿಗೆ ಮದುವೆ, 38 ಕೋಟಿ ವಂಚನೆ!

ಹತ್ಯೆಯಾದ ಮಂಜುನಾಥ್ ಮೀಸಿ ಸಹೋದರ ಸುರೇಶ್ ಮೀಸಿ ಮಂಜುನಾಥ್ ನ ಪತ್ನಿ ಶಿವಮ್ಮ, ಪ್ರಿಯಕರ ಮಂಜುನಾಥ್ ಯಲಬುರ್ಗಾ ಇಬ್ಬರು ಸೇರಿ ಸಹೋದರನ ಹತ್ಯೆ ಮಾಡಿರುವ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣದ ಬೆನ್ನುಹತ್ತಿದ ಪೊಲೀಸರಿಗೆ ಕೊಲೆ ನಡೆದ ಬಗ್ಗೆ ಒಂದೊಂದೇ ಸಾಕ್ಷಿಗಳು ಸಿಗುತ್ತಾ ಹೋಗಿವೆ.  ಪ್ರಾಥಮಿಕ ತನಿಖೆ ವೇಳೆ ಇದು ಅಪಘಾತ ಅಲ್ಲ, ಕೊಲೆ ಅನ್ನೋದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. 

ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್ ನೇಮಗೌಡ ಹೇಳುವ ಪ್ರಕಾರ, ಆಗಸ್ಟ್ 30ರಂದು ಮಂಜುನಾಥ ಮೀಸಿ ಕೊಲೆಯಾಗಿದೆ. ಕೊಲೆಗೂ ಮುನ್ನ ಶಿವಮ್ಮಳ ಪ್ರಿಯಕರ ಆರೋಪಿ ಮಂಜುನಾಥ್ ಯಲಬುರ್ಗಾ ಆಗಷ್ಟ್ 29 ನೇ ತಾರೀಕು ಮಧ್ಯಾಹ್ನವೇ ಮನೆಗೆ ಬಂದಿದ್ದ.. ರಾತ್ರಿ ಅವಳೊಂದಿಗೆ ಇದ್ದು ಎಲ್ಲರೂ ಸೇರಿ ಊಟ ಮಾಡಿದ್ದರು. ಊಟ ಆದ್ಮೇಲೆ ಮಂಜುನಾಥ ಮೀಸಿಯನ್ನು ಹರಿತವಾದ ವಸ್ತುವಿನಿಂದ ಚುಚ್ಚಿ ಸಾಯಿಸಿದ್ದಾರೆ.  

ಜಗತ್ತಿನ ಮೋಸ್ಟ್ ವಾಂಟೆಡ್ ಮಹಿಳೆ ಈ ಸುಂದರಿ! ಬರೋಬ್ಬರಿ 36,000 ಕೋಟಿಯ ವಂಚಕಿ..

ಯಾವ ಆಯುಧ ಅನ್ನೋದನ್ನ ಪತ್ತೆ ಹಚ್ಚಲಾಗುತ್ತದೆ. ತಲೆಗೆ ಬಲವಾದ ಪೆಟ್ಟು ಬಿದ್ದಿರುವುದರಿಂದ ಮಂಜುನಾಥನ ಪ್ರಾಣ ಹೋಗಿದೆ. ಯಾವುದಾದರೂ ವಾಹನ ಡಿಕ್ಕಿಯಾಗಿ ಸತ್ತಿದ್ದಾರೆ ಎನ್ನುವಂತೆ ಅಪಘಾತ ರೀತಿಯಾಗಿ ಕಾಣಲಿ ಎಂದು ಪ್ರಿಯಕರನ ಜೊತೆ ಸೇರಿ ಗಂಡನ ಮೃತದೇಹ ರಸ್ತೆ ಮೇಲೆ ಬಿಸಾಕಿದ್ದ ಐನಾತಿ ಪತ್ನಿ.ಆದರೆ ಇಲ್ಲೇ ಮಾಡಿಕೊಂಡಿದ್ದ ಎಡವಟ್ಟು. ಮನೆಯಿಂದ ದೇಹ ಸಾಗಿಸಿದ ರಸ್ತೆ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ಸಾಕ್ಷಿನಾಶಕ್ಕೆ ಪ್ರಯತ್ನ ಪಟ್ಟರೂ ಕೆಲ ವೈಜ್ಞಾನಿಕ ಮಾಹಿತಿ ಸಿಕ್ಕಿವೆ. ಕೊಲೆ ನಂತರ ಏನೂ ಗೊತ್ತಿಲ್ಲದವಳಂತೆ ಮನೆಯಲ್ಲೇ ಇದ್ದಳು. ಆದರೆ ಒಂದನೇ ಆರೋಪಿ ಮಂಜುನಾಥ ಯಲಬುರ್ಗಾ ಭಯದಿಂದ ಅದಾಗಲೇ ಎಸ್ಕೇಪ್ ಆಗಿದ್ದಾನೆ. 

ಪೊಲೀಸರು ಆರೋಪಿಗಳಿಬ್ಬರನ್ನೂ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ವಿಚಾರಣೆ ಮುಂದುವರಿಸಿರುವ ಪೊಲೀಸರು. 

click me!