ನಟಿ ಪವಿತ್ರಾ ಗೌಡ ಪರ ವಕೀಲ ನಾರಾಯಣಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ಪವಿತ್ರಾ ಗೌಡ ಶಾಕ್ನಲ್ಲಿದ್ದಾರೆ. ನಾನೇನು ತಪ್ಪು ಮಾಡಿಲ್ಲ, ಆದರೂ ಈ ಸ್ಥಿತಿಯಲ್ಲಿದ್ದೇನೆ ಎಂದು ಶಾಕ್ ಆಗಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು (ಜೂ.29): ನಟಿ ಪವಿತ್ರಾ ಗೌಡ ಅವರು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅವರು ಅರೆಸ್ಟ್ ಆಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಆರಂಭದಲ್ಲಿ ಪವಿತ್ರಾ ಅವರನ್ನು ನೋಡಲು ಯಾರೂ ಬಂದಿರಲಿಲ್ಲ. ಇದರಿಂದ ಅವರಿಗೆ ಬೇಸರ ಆಗಿದೆ. ಹೀಗಾಗಿ, ಮನೆಯವರ ಜೊತೆ ಕಿರಿಕ್ ಮಾಡಿದ್ದಾರೆ. ‘ನನ್ನನ್ನು ನೋಡಲು ಯಾರೂ ಬರುವುದಿಲ್ಲ. ನನ್ನನ್ನು ಯಾರೂ ಮಾತನಾಡಿಸುವುದಿಲ್ಲ’ ಎಂದು ಪವಿತ್ರಾ ಬೇಸರ ಮಾಡಿಕೊಂಡಿದ್ದರು. ಕೊನೆಗೂ ಪವಿತ್ರಾ ಮಗಳು ಹಾಗೂ ಪವಿತ್ರಾ ತಾಯಿ ಜೈಲಿಗೆ ಬಂದು ಅವರನ್ನು ನೋಡಿ ಹೋಗಿದ್ದಾರೆ.
ಇದೀಗ ನಟಿ ಪವಿತ್ರಾ ಗೌಡ ಪರ ವಕೀಲ ನಾರಾಯಣಸ್ವಾಮಿ ಹೇಳಿಕೆ ಕೊಟ್ಟಿದ್ದಾರೆ. ಪವಿತ್ರಾ ಗೌಡ ಶಾಕ್ನಲ್ಲಿದ್ದಾರೆ. ನಾನೇನು ತಪ್ಪು ಮಾಡಿಲ್ಲ, ಆದರೂ ಈ ಸ್ಥಿತಿಯಲ್ಲಿದ್ದೇನೆ ಎಂದು ಶಾಕ್ ಆಗಿದ್ದಾರೆ ಎಂದು ಹೇಳಿದ್ದಾರೆ. ಅವರಿಗೆ ಈ ಪ್ರಕರಣ ಏನಾಯ್ತು ಎನ್ನುವ ರೀತಿ ಇನ್ನೂ ಇದ್ದಾರೆ. ಅವರು ಯಾವುದೇ ತಪ್ಪು ಮಾಡಿರದ ಹಾಗಿದ್ದಾರೆ. ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಅವರು ಸ್ವಲ್ಪ ಕಷ್ಟದಲ್ಲಿ ಇದ್ದಾರೆ. ಜೈಲಿನಲ್ಲಿ ಎಲ್ಲರಿಗೆ ನೀಡುವಂತೆ ಸೌಕರ್ಯ ಇವರಿಗೂ ಕೊಟ್ಟಿದ್ದಾರೆ. ಯಾವಾಗ ಬೇಲ್ ಅಪ್ಲೈ ಮಾಡಬೇಕು ಎಂದು ಕಾಯುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಬೇಲ್ ಅಪ್ಲೈ ಮಾಡುತ್ತೇವೆ. ತಪ್ಪು ಮಾಡದೆ ಇದ್ದಾಗ ಅವರಲ್ಲಿ ಒಂದು ರೀತಿಯ ನೋವು ಇರುತ್ತದೆ ಎಂದರು.
ಚಿನ್ನ ಕುದಿವ ಕುಲುಮೆಯಲ್ಲಿದೆ, ಅಪರಂಜಿ ಆಗಿ ಬರಲು ಸಮಯ ಬೇಕು: ದರ್ಶನ್ ಬಗ್ಗೆ ಗಾಯಕಿ ಶಮಿತಾ ಮಲ್ನಾಡ್ ಪೋಸ್ಟ್!
ನಾಲ್ಕನೇ ತಾರೀಖಿನ ನಂತರ ಬೇಲ್‌ಗೆ ಹಾಕಿಕೊಳ್ಳುತ್ತೇವೆ. ನ್ಯಾಯಾಂಗ ಬಂಧನದಲ್ಲಿದ್ದಾಗ ಎಲ್ಲರೂ ಚೆನ್ನಾಗಿಯೇ ಇರುತ್ತಾರೆ. ಯಾರಿಗೂ ಹಿಂಸೆ ಕೋಡೋಕೆ ಇಲ್ಲಿಗೆ ಕರೆದುಕೊಂಡು ಬರೋದಿಲ್ಲ. ಅವರ ಮನಃ ಪರಿವರ್ತನೆಯಾಗಲಿ ಎಂದು ಜೈಲಿಗೆ ಕರೆದುಕೊಂಡು ಬರೋದು ಎಂದು ಹೇಳಿದ್ದಾರೆ. ನ್ಯಾಯಾಂಗ ಬಂಧನದಲ್ಲಿ ಎಲ್ಲರೂ ಹೇಗೆ ಇರುತ್ತಾರೋ ಪವಿತ್ರಾ ಹಾಗೆ ಇದ್ದಾರೆ. ಅವರಿಗೆ ಸ್ಪೇಷಲ್ ಏನು ಇಲ್ಲ, ಸಂವಿಧಾನ ಅಡಿಯಲ್ಲಿ ಎಲ್ಲಾ ಖೈದಿಗಳ ರೀತಿ ಅವರು ಇದ್ದಾರೆ ಎಂದು ವಕೀಲರು ತಿಳಿಸಿದರು. ಇನ್ನು ದರ್ಶನ್ ಅವರನ್ನು ಸಹ ಭೇಟಿಯಾಗಿದ್ದೀರ ಎನ್ನುವ ಮಾಧ್ಯಮದವರ ಪ್ರಶ್ನೆಗೆ ದರ್ಶನ್‌ರನ್ನು ಭೇಟಿಯಾಗಿದ್ದೇನೆ ಎಂದು ನಗುತ್ತಲೇ ಉತ್ತರ ಕೊಟ್ಟು ವಕೀಲರು ಹೊರಟು ಹೋಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡಲು ನಟಿ ರಕ್ಷಿತಾ ಹಾಗೂ ಸ್ಯಾಂಡಲ್ವುಡ್ ಡೈರೆಕ್ಟರ್ ಪ್ರೇಮ್ ಅವರು ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ. ನಟ ದರ್ಶನ್ ಭೇಟಿ ಮುಗಿಸಿ ರಕ್ಷಿತಾ ಪ್ರೇಮ್ ವಾಪಸ್ ಆಗಿದ್ದಾರೆ. ಒಂದು ಗಂಟೆ ದರ್ಶನ್ ಜೊತೆ ಭೇಟಿ ಮುಗಿಸಿ ವಾಪಸ್ ಬಂದಿದ್ದು ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಹದಿನೈದು ಇಪ್ಪತ್ತು ದಿನದಿಂದ ಆಗಿರುವುದು ದುರಾದುಷ್ಟಕರ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ ಎಂದಷ್ಟೇ ಹೇಳಿ ಬೇಜಾರಿನಲ್ಲಿ ಹೊರಟಿದ್ದಾರೆ ನಟಿ ರಕ್ಷಿತಾ.
ದರ್ಶನ್ ಅಭಿಮಾನಿಗಳಿಂದ ಬ್ಯಾಡ್ ಕಮೆಂಟ್ಸ್ ಟಾರ್ಚರ್: ಗುರು ನಾನ್ ಇನ್ನೂ ಚಿಕ್ಕವಳು ಎಂದ ಸೋನು ಗೌಡ!
ಪ್ರಕರಣ ನ್ಯಾಯಾಲಯದಲ್ಲಿದೆಯೆಂದು ಮಾತು ಆರಂಭಿಸಿದ ನಟ ಪ್ರೇಮ್, ನಾವು ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು. ದರ್ಶನ್ ನನಗೂ ಸ್ನೇಹಿತರು, ರಕ್ಷಿತಾಗೇ ಕುಡ ಸ್ನೇಹಿತರು. ಎಲ್ಲದಕ್ಕಿಂತ ಹೆಚ್ಚಾಗಿ ಇಡೀ ಪ್ರಕರಣ ಈಗ ಕಾನೂನಿನ ಅಡಿಯಲ್ಲಿದೆ. ಕೋರ್ಟ್‌ನಲ್ಲಿ ಪ್ರಕರಣವಿದೆ. ಹಾಗಾಗಿ ನಾವೂ ಯಾರೂ ಇದರ ಬಗ್ಗೆ ಮಾತನಾಡೋಕೆ ಹೋಗಬಾರದು. ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುತ್ತೇನೆ. ಕಾನೂನು ಪ್ರಕಾರ ಏನೆಲ್ಲಾ ಆಗಬೇಕೋ ಅದೆಲ್ಲವೂ ಆಗುತ್ತಿದೆ. ಅದರ ಮುಂದೆ ನಾವು ಯಾರೂ ಕೂಡ ದೊಡ್ಡವರಲ್ಲ. ಇದ್ರ ಮೇಲೆ ಯಾರೂ ಕೂಡ ನನ್ನನ್ನು ಏನೂ ಕೇಳೋಕೆ ಹೋಗಬೇಡಿ. ಇದು ನಿಮಗೆ ನನ್ನ ರಿಕ್ವೆಸ್ಟ್ ಅಂತಾದರೂ ಅಂದುಕೊಳ್ಳಿ ಎಂದು ಪ್ರೇಮ್ ಹೇಳಿದ್ದಾರೆ.