ಬೆಂಗಳೂರಿನಿಂದ ಕೂರ್ಗ್ ಸೌಂದರ್ಯವನ್ನು ನೋಡಲು ತೆರಳಿದ್ದ ಐಟಿ ಉದ್ಯೋಗಿಯೊಬ್ಬರು ಲಾಡ್ಜ್‌ನಲ್ಲಿ ತಂಗಿದ್ದಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊಡಗು (ಜ.16): ಬೆಂಗಳೂರಿನಿಂದ ಕೂರ್ಗ್ ಸೌಂದರ್ಯವನ್ನು ನೋಡಲು ತೆರಳಿದ್ದ ಐಟಿ ಉದ್ಯೋಗಿಯೊಬ್ಬರು ಲಾಡ್ಜ್‌ನಲ್ಲಿ ತಂಗಿದ್ದಾಗಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತ ಐಟಿ ಉದ್ಯೋಗಿಯನ್ನು ಬೆಂಗಳೂರು ಮೂಲದ ಸಂದೇಶ್(35) ಎಂದು ಹೇಳಲಾಗುತ್ತಿದೆ. ಈತ ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಮೂರು ದಿನಗಳ ಹಿಂದೆ ಕೊಡಗಿಗೆ ಬಂದು ಮಡಿಕೇರಿ ಪಟ್ಟಣದ ಕೊಹಿನೂರ್ ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ಕೊಠಡಿ ಮಾಡಿಕೊಂಡಿದ್ದನು. ಆದರೆ, ಮೂರು ದಿನಗಳಿಂದ ಕೊಡಗಿನ ವಿವಿಧ ಸ್ಥಳಗಳಿಗೆ ಒಬ್ಬಂಟಿಯಾಗಿ ಸುತ್ತಾಡಿದ ಈಗ ನಿನ್ನೆ ರಾತ್ರಿ ರೂಮಿಗೆ ಸೇರಿಕೊಂಡಾತ ಕೋಣೆಯಿಂದ ಹೊರಗೆ ಬಂದಿಲ್ಲ.
ಹಿಂದೂಗಳು ಬಾಬ್ರಿ ಮಸೀದಿ ಕೆಡವಿದ್ದು ಸೂಕ್ತ ಅಲ್ಲ: ನಿಡುಮಾಮಿಡಿ ಸ್ವಾಮೀಜಿ
ಇನ್ನು ಮಧ್ಯಾಹ್ನವಾದರೂ ಲಾಡ್ಜ್‌ನಲ್ಲಿರುವ ವ್ಯಕ್ತಿ ಯಾಕೆ ಹೊರಗೆ ಬಂದಿಲ್ಲ ಎಂದು ಅನುಮಾನಗೊಂಡ ಸಿಬ್ಬಂದಿ ಕೋಣೆಯ ಬಾಗಿಲನ್ನು ತಟ್ಟಿದ್ದಾರೆ. ಆಗ ಕೋಣೆಯ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪಕ್ಕದ ಕೋಣೆಯಿಂದ ಕಿಟಕಿಯ ಬಳಿ ಬಂದು ವೀಕ್ಷಣೆ ಮಾಡಿದಾಗ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ಕೂಡಲೇ ಲಾಡ್ಜ್‌ನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಬಂದು ಬಾಗಿಲು ಒಡೆದು ಕೋಣೆಯೊಳಗೆ ಹೋದಾಗ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.
ಬಾಯ್‌ಫ್ರೆಂಡ್ ಜೊತೆ ಸರಸಕ್ಕಾಗಿ ಪತಿ ಕೊಂದು ಹೃದಯಾಘಾತ ನಾಟಕವಾಡಿದ ಪತ್ನಿ!
ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದು, ಕೋಣೆಯೊಳಗೆ ಯಾರೋ ಹೋಗದಂತೆ ನಿರ್ಬಂಧ ವಿಧಿಸಿದ್ದಾರೆ. ಇನ್ನು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಲಾಡ್ಜ್ ಸಿಬ್ಬಂದಿಯಿಂದ ಹೆಚ್ಚಿನ ಮಾಹಿತಿ ಸಂಗ್ರಹ ಮಾಡುತ್ತಿದ್ದು, ಸಿಸಿಟಿವಿ ಫೂಟೇಜ್ ವೀಕ್ಷಣೆ ಮಾಡುತ್ತಿದ್ದಾರೆ. ಈ ಘಟನೆ ಕುರಿತು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.