ಫೈನಾನ್ಶಿಯರ್, ಪುತ್ರನ ಕೊಲೆ ಪ್ರಕರಣ: 13 ವರ್ಷಗಳ ನಂತರ ಆರೋಪಿಗಳ ಬಂಧನ

Published : Jul 19, 2022, 05:25 PM ISTUpdated : Jul 19, 2022, 05:31 PM IST
ಫೈನಾನ್ಶಿಯರ್, ಪುತ್ರನ ಕೊಲೆ ಪ್ರಕರಣ: 13 ವರ್ಷಗಳ ನಂತರ ಆರೋಪಿಗಳ ಬಂಧನ

ಸಾರಾಂಶ

2009ರಲ್ಲಿ ನಡೆದ ಫೈನಾನ್ಶಿಯರ್‌ ಹಾಗೂ ಅವರ ಪುಟ್ಟ ಮಗನನ್ನು ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿದ ಪಂಚಕುಲ ಪೊಲೀಸರು 13 ವರ್ಷಗಳ ನಂತರ ಮೋಸ್ಟ್‌ ವಾಂಟೆಡ್ ದಂಪತಿಯನ್ನು ಬಂಧಿಸಿದ್ದಾರೆ.

2009ರಲ್ಲಿ ನಡೆದ ಫೈನಾನ್ಶಿಯರ್‌ ಹಾಗೂ ಅವರ ಪುಟ್ಟ ಮಗನನ್ನು ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿದ ಪಂಚಕುಲ ಪೊಲೀಸರು 13 ವರ್ಷಗಳ ನಂತರ ಮೋಸ್ಟ್‌ ವಾಂಟೆಡ್ ದಂಪತಿಯನ್ನು ಬಂಧಿಸಿದ್ದಾರೆ. ಮೊದಲಿಗೆ ಫೈನಾನ್ಶಿಯರ್‌ನ್ನು ಕೊಲೆ ಮಾಡಿದ ಈ ಕ್ರಿಮಿನಲ್ ಜೋಡಿ ನಂತರ ಈ ಕೊಲೆಯನ್ನು ನೋಡಿದ ಫೈನಾನ್ಶಿಯರ್‌ನ ನಾಲ್ಕು ವರ್ಷದ ಕಂದನನ್ನು ಜೀವಂತವಾಗಿ ಕಾಲುವೆಗೆ ಎಸೆದು ಹತ್ಯೆ ಮಾಡಿದ್ದರು. ರಾಜು ಹಾಗೂ ಆತನ ಪತ್ನಿ ಶಿಲ್ಪಾ ಕೊಲೆಯಾದ ಆರೋಪಿಗಳು. ಹರಿಯಾಣ ಪೊಲೀಸರ ವಿಶೇಷ ಕಾರ್ಯಪಡೆ (STF) ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಆರೋಪಿಗಳನ್ನು ಬಂಧಿಸಿದ್ದಾರೆ.

2009ರಲ್ಲಿ, ಪಂಚಕುಲದ ಸೆಕ್ಟರ್ 16 ರ ನಿವಾಸಿಯಾದ ಫೈನಾನ್ಶಿಯರ್ ವಿನೋದ್ ಮಿತ್ತಲ್ ಅವರು ಆರೋಪಿಗಳಾದ ರಾಜು ಮತ್ತು ಶಿಲ್ಪಾ ಅವರಿಗೆ ಸಲೂನ್‌ಗಾಗಿ ಹಣವನ್ನು ಸಾಲವಾಗಿ ನೀಡಿದ್ದರು. ಜೊತೆಗೆ ಸಾಲ ಮಾಡಿ ಕಾರನ್ನು ಅವರಿಗೆ ನೀಡಿದ್ದರು. ಮಿತ್ತಲ್ ಆಗಾಗ್ಗೆ ರಾಜು ಅವರಿಂದ ಕ್ಷೌರ ಮಾಡಿಸಿಕೊಳ್ಳುತ್ತಿದ್ದರು. ಇದೇ ರೀತಿ ಅವರ ಸ್ನೇಹದ ಲಾಭವನ್ನು ಪಡೆದ ರಾಜು ದೊಡ್ಡ ಸಲೂನ್ ತೆರೆಯಲು ಮಿತ್ತಲ್‌ನಿಂದ ಹಣವನ್ನು ಕೇಳಿದ್ದ. ಆದರೆ ಮಿತ್ತಲ್, ತಾನು ಈಗಾಗಲೇ ನೀಡಿರುವ ಹಣದ ಕಂತುಗಳನ್ನು ರಾಜು  ಪಾವತಿಸದೆ ಇದ್ದುದರಿಂದ ಹಣವನ್ನು ನೀಡಲಿಲ್ಲ. ಅಲ್ಲದೇ ತಾನು ಈಗಾಗಲೇ ನೀಡಿದ ಹಣವನ್ನು ವಾಪಸ್‌ ಕೇಳಲು ಪ್ರಾರಂಭಿಸಿದರು. ಹೀಗಾಗಿ ಇಬ್ಬರ ಸ್ನೇಹ ಶೀಘ್ರದಲ್ಲೇ ಹದಗೆಟ್ಟಿತು.

ಚಂದ್ರು ಮರ್ಡರ್ ಸೀಕ್ರೆಟ್ 171: ಕೊಲೆಗೆ ಕಾರಣ ರಸ್ತೆಯಲ್ಲಿ ಬೈಕ್‌ ತಾಕಿದ್ದಲ್ಲ, ಮತ್ತೇನು..?
ನಂತರ ಫೆಬ್ರವರಿ 14, 2009 ರಂದು, ಫೈನಾನ್ಶಿಯರ್ ಮಿತ್ತಲ್ ತನ್ನ ನಾಲ್ಕು ವರ್ಷದ ಮಗ ಯಶನ್ ಅವರನ್ನು ಕೆದುಕೊಂಡು ತನ್ನ ಹಣವನ್ನು ವಾಪಸ್‌ ಹಿಂಪಡೆಯಲು ಬಾಲ್ಟಾನಾದಲ್ಲಿರುವ ಈ ದಂಪತಿಗಳ ಸಲೂನ್‌ಗೆ ಹೋದರು. ಈ ವೇಳೆ ರಾಜುವಿನ ಒಬ್ಬ ಸೋದರ ಸಂಬಂಧಿ ಮತ್ತು ಮೂವರು ಗೆಳೆಯರು ಅಲ್ಲಿದ್ದರು. ರಾಜು  ಹಣವನ್ನು ಹಿಂದಿರುಗಿಸುವುದಾಗಿ ಮಿತ್ತಲ್‌ಗೆ ಭರವಸೆ ನೀಡಿ ಎಲ್ಲರೂ ಹೋಗಿ ವಿನೋದ್‌ ಮಿತ್ತಲ್ ಅವರ ಕಾರಿನಲ್ಲಿ ಕುಳಿತರು. ನಂತರ ರಾಜು ಹಾಗೂ ಆತನ ಸಹಚರರು ಸೇರಿ ಕಾರಿನಲ್ಲೇ ಮಿತ್ತಲ್‌ ಅವರ ಪುಟ್ಟ ಮಗನ ಮುಂದೆಯೇ ಆತನನ್ನು ಇರಿದು ಕೊಂದರು. ಇವರೊಂದಿಗೆ ರಾಜು ಪತ್ನಿ ಶಿಲ್ಪಾ ಕೂಡ ಕೈಜೋಡಿಸಿದ್ದಳು. 

ನಂತರ ಮಿತಲ್ ಶವವನ್ನು ರಾಜಪುರದ ಕಾಲುವೆಯಲ್ಲಿ ಎಸೆದಿದ್ದಾರೆ. ಅಲ್ಲದೇ ಇವರ ಕೃತ್ಯವನ್ನು ಕಣ್ಣಾರೆ ಕಂಡಿದ್ದ ಮಿತ್ತಲ್‌ ಅವರ ಪುತ್ರನನ್ನು ಈ ದುಷ್ಕರ್ಮಿಗಳು ಜೀವಂತವಾಗಿ ಕಾಲುವೆಗೆ ಎಸೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜುವಿನ ಸಹಚರರನ್ನು ಪೊಲೀಸರು ಶೀಘ್ರದಲ್ಲೇ ಬಂಧಿಸಿದ್ದರು. ಆದರೆ ಪ್ರಮುಖ ಆರೋಪಿಗಳಾದ ಶಿಲ್ಪಾ ಹಾಗೂ ರಾಜು ಭೂಗತರಾಗಿದ್ದರು. ಇವರ ದಂಪತಿಯ ತಲೆಗೆ ಹರಿಯಾಣ ಪೊಲೀಸರು ತಲಾ 50,000 ರೂ ಘೋಷಿಸಿದ್ದರು. ಜೊತೆಗೆ ಹರ್ಯಾಣ ಪೊಲೀಸ್ ವೆಬ್‌ಸೈಟ್‌ನಲ್ಲಿ ಮೋಸ್ಟ್ ವಾಂಟೆಡ್' ಕ್ರಿಮಿನಲ್‌ಗಳ ಪಟ್ಟಿಯಲ್ಲಿ ಇವರಿಗೆ ಸಂಖ್ಯೆ 1 ಮತ್ತು 2ರ ಸ್ಥಾನ ನೀಡಲಾಗಿತ್ತು. 

Crime News ; ಮಾಜಿ ಪ್ರೇಯಸಿ ಮನೆ ಬಳಿ ಗಲಾಟೆ ಮಾಡಿದ್ದವನ ಕೊಲೆ!
ಇನ್‌ಸ್ಪೆಕ್ಟರ್ ಜನರಲ್ ಎಸ್‌ಟಿಎಫ್ ಬಿ ಸತೀಶ್ ಬಾಲನ್ ಅವರ ಮೇಲ್ವಿಚಾರಣೆಯಲ್ಲಿ ಡಿಎಸ್‌ಪಿ ಅಮನ್ ಕುಮಾರ್, ಎಸ್‌ಟಿಎಫ್ ಪ್ರಭಾರಿ ಘಟಕ ಅಂಬಾಲಾ ಮತ್ತು ಇನ್‌ಸ್ಪೆಕ್ಟರ್ ದೀಪಿಂದರ್ ಪ್ರತಾಪ್ ಸಿಂಗ್ ಅವರ ತಂಡ ಈ ಪ್ರಕರಣವನ್ನು ಭೇದಿಸಿದ್ದಾರೆ. ಘಟನೆ ನಡೆದ ವೇಳೆ ಮಿತ್ತಲ್ ಅವರ ಕಾರನ್ನು ಹನುಮಾನ್‌ಗಢದಿಂದ ವಶಪಡಿಸಿಕೊಳ್ಳಲಾಗಿತ್ತಾದರೂ ತಂದೆ ಮಗ ಇಬ್ಬರ ಶವಗಳು ಪತ್ತೆಯಾಗಿರಲಿಲ್ಲ. 


ಕೊಲೆ ಮಾಡಿದ ನಂತರ ರಾಜು ಹಾಗೂ ಶಿಲ್ಪಾ ತಮ್ಮ ಎರಡು ವರ್ಷದ ಮಗಳೊಂದಿಗೆ ಶಿರಡಿಗೆ ಓಡಿ ಹೋದರು. ಅಲ್ಲಿ ರಾಜು ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಸ್ವಲ್ಪ ಸಮಯದ ನಂತರ, ಅವರು ಕ್ಷೌರಿಕನಾಗಿ ಕೆಲಸ ಮಾಡುತ್ತಿದ್ದ ನಂತರ ಇವರಿಬ್ಬರು ಸೇರಿ ಸಣ್ಣ ಸಲೂನ್ ಅನ್ನು ತೆರೆದಿದ್ದರು.
ಶಿರಡಿಯಲ್ಲಿ ಒಂದು ವರ್ಷ ಕಳೆದ ನಂತರ ಅವರು ಹೈದರಾಬಾದ್‌ಗೆ ಓಡಿಹೋದರು. ಅಲ್ಲಿ ರಾಜು ತನ್ನ ಹೆಸರನ್ನು ವಿಕ್ಕಿ ಪವಾರ್ ಎಂದು ಬದಲಾಯಿಸಿಕೊಂಡಿದ್ದ ಶಿಲ್ಪಾ ತನ್ನ ಹೆಸರನ್ನು ಸುನಿತಾ ಪವಾರ್ ಎಂದು ಬದಲಾಯಿಸಿಕೊಂಡಿದ್ದಳು. ಬೇರೆ ರಾಜ್ಯಕ್ಕೆ ಪಲಾಯನ ಮಾಡುವ ಮೊದಲು ಹೈದರಾಬಾದ್‌ನಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಸಲೂನ್  ನಡೆಸುತ್ತಿದ್ದರು ಎಂದು ಎಸ್‌ಟಿಎಫ್ ತನಿಖೆಯಿಂದ ತಿಳಿದು ಬಂದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು