ಒಂದೇ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಹಳಿಯಾಳ ಮೂಲದ ಇಬ್ಬರು ಓದುವುದನ್ನು ಬಿಟ್ಟು ಪ್ರೀತಿ, ಪ್ರೇಮ ಅಂತ ಹೋಗಿ ದುರಂತ ಅಂತ್ಯಕಂಡಿದ್ದಾರೆ.
ಉತ್ತರಕನ್ನಡ, (ಜುಲೈ.19): ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪ್ರೇಮಿಗಳು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಉತ್ತರಕನ್ನಡ ಜಿಲ್ಲೆ ಹಳಿಯಾಳ ಮೂಲದ ಜ್ಯೋತಿ ಸುರೇಶ ಅಂತ್ರೋಳಕರ(19) ಮತ್ತು ರಿಕೇಶ್ ಸುರೇಶ ಮಿರಾಶಿ(20) ಮೃತ ದುರ್ದೈವಿಗಳು. ಇವರಿಬ್ಬರೂ ಹಳಿಯಾಳದ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು.
ಪ್ರೇಮಿಗಳಿಬ್ಬರ ಖಾಸಗಿ ವಿಡಿಯೋ ಸೆರೆ ಹಿಡಿದು ಬೆದರಿಸಿದ್ದ ಅರೋಪಿಗಳು ಅರೆಸ್ಟ್
ಆದ್ರೆ, ತಿಂಗಳ ಹಿಂದೆ ಯುವತಿಯ ಪಾಲಕರು ಈಕೆಗೆ ಬೇರೊಬ್ಬ ಯುವಕನ ಜತೆ ಮದುವೆ ಮಾಡಿದ್ದರು. ಪ್ರಿಯಕರನನ್ನು ಬಿಟ್ಟು ಬದುಕಲಾಗದೆ ಜ್ಯೋತಿ, ಜುಲೈ 15ರಂದು ಮುಂಡಗೋಡು ರಸ್ತೆಯಲ್ಲಿ ಪ್ರಿಯಕರ ರಿಕೇಶ್ ಜತೆ ವಿಷ ಸೇವಿಸಿದ್ದಳು.
ಬಳಿಕ ತೀವ್ರ ಅಸ್ವಸ್ಥಗೊಂಡ ಪ್ರೇಮಿಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಾಲ್ಕು ದಿನ ಸಾವು-ಬದುಕಿನ ನಡುವೆ ಹೋರಾಡಿದ ಪ್ರೇಮಿಗಳು ಚಿಕಿತ್ಸೆ ಫಲಿಸದೇ ದುರಂತ ಅಂತ್ಯಕಂಡಿದ್ದಾರೆ. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.