ಬೆಚ್ಚಿಬೀಳಿಸಿತು 6 ಕೊಲೆ: ಕೋರ್ಟ್​ ಜಾಮೀನು ಕೊಟ್ಟ ಖುಷಿಯಲ್ಲಿ ಸಂತ್ರಸ್ತೆಯ ಕುಟುಂಬ ನಾಶ ಮಾಡಿದ ಪಾಪಿ

Published : Jul 11, 2026, 06:21 PM IST
Bail

ಸಾರಾಂಶ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ, ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಯು ಸೇಡು ತೀರಿಸಿಕೊಳ್ಳಲು ತನ್ನ ಕುಟುಂಬದ ಮೂವರು ಮತ್ತು ಸಂತ್ರಸ್ತ ಬಾಲಕಿಯ ಕುಟುಂಬದ ಮೂವರು ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆಯು ಕಾನೂನು ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಒಂದು ಕೊಲೆ ಮಾಡಿದ್ರೂ ಅಷ್ಟೇ ಶಿಕ್ಷೆ, 10 ಕೊಲೆ ಮಾಡಿದ್ರೂ ಅಷ್ಟೇ ಶಿಕ್ಷೆ, ಇನ್ಯಾಕೆ ಸುಮ್ಮನೇ ಒಬ್ಬರನ್ನೇ ಕೊಲೆ ಮಾಡಿ ವೇಸ್ಟ್​ ಮಾಡೋದು ಎನ್ನುತ್ತಾರಂತೆ ಕ್ರಿಮಿನಲ್ಸ್​. ಒಂದೆಡೆ ಕೋರ್ಟ್​ಗಳಿಂದ ಸುಲಭದಲ್ಲಿ ಸಿಗುವ ಜಾಮೀನು, ಮತ್ತೊಂದೆಡೆ ದೂರು ಕೊಟ್ಟ ತಪ್ಪಿಗೆ ಸಂತ್ರಸ್ತ ಕುಟುಂಬಗಳ ನರಳಾಟ... ಇದು ಅಂದಿನಿಂದ ಇಂದಿನವರೆಗೂ ನಮ್ಮ ಕಾನೂನು ವ್ಯವಸ್ಥೆಯಲ್ಲಿ ನಡೆದುಕೊಂಡೇ ಬಂದಿದೆ. ಇದಕ್ಕಾಗಿಯೇ ದೂರು ಕೊಡುವ ಬದಲು, ಎಲ್ಲವನ್ನೂ ಸಹಿಸಿಕೊಂಡು ಹೋಗೋಣ ಎನ್ನುವ ಮನಸ್ಥಿತಿ ಎಷ್ಟೋ ಸಂತ್ರಸ್ತರ ಮನೆಗಳಲ್ಲಿ ಕೇಳಿಬರುತ್ತದೆ. ತನಿಖೆ ಸಮಯದಲ್ಲಿ ಪೊಲೀಸರು ಮಾಡುವ ಎಡವಟ್ಟುಗಳು, ಕ್ರಿಮಿನಲ್ಸ್​ಗಳಿಗಾಗಿ ಇರುವ ವಕೀಲರು... ಯಾವುದೋ ಒಂದು ಚಿಕ್ಕ ಕಾನೂನು ಲೋಪ... ಇವೆಲ್ಲವುಗಳಿಂದ ಇದು ಕೊಲೆ ಪಾತಕಿಗಳಿಗೆ ಸುಲಭದಲ್ಲಿ ಜಾಮೀನು ಸಿಗುತ್ತಿವೆ. ಅವರಿಗೆ ಜಾಮೀನು ಸಿಕ್ಕಾಗ ಸಂತ್ರಸ್ತ ಕುಟುಂಬಗಳ ಮನಸ್ಥಿತಿಯ ಬಗ್ಗೆ ಕಾನೂನಿನಲ್ಲಿ ಏನೂ ಇಲ್ಲವಲ್ಲ, ಅದಕ್ಕಾಗಿಯೇ ಕೋರ್ಟ್​ಗಳಿಂದ ಸುಲಭದಲ್ಲಿ ಜಾಮೀನು ಪಡೆದು ಬರುವ ಕ್ರಿಮಿನಲ್ಸ್​ ಮಾಡುವ ಅಟ್ಟಹಾಸ ಮಿತಿಮೀರುತ್ತಿವೆ.

ಈಗ ಅಂಥದ್ದೇ ಒಂದು ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಇದು ಮತ್ತೆ ಮತ್ತೆ ನಮ್ಮ ಕಾನೂನು ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡುತ್ತಿದೆ. ಈ ಘಟನೆ ನಡೆದಿರುವುದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ. ಆರು ಜನರ ಕೊಲೆ ದೇಶದಲ್ಲಿಯೇ ಸಂಚಲನ ಮೂಡಿಸುತ್ತಿದೆ. ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಪಾಪಿಯನ್ನು ಪೋಕ್ಸೋ ಕಾಯ್ದೆಯಡಿ ಅರೆಸ್ಟ್​ ಮಾಡಲಾಗಿತ್ತು. ನಮ್ಮ ಕಾನೂನಿನ ಹೃದಯ ವಿಶಾಲ ಆಗಿರುವ ಕಾರಣದಿಂದ ಈತನಿಗೆ ಜಾಮೀನು ಕೊಟ್ಟಿತು ಕೋರ್ಟ್​. ಅದೇ ಖುಷಿಯಲ್ಲಿ ಬಂದ ಕಿರಾತಕ, ಸಂತ್ರಸ್ತ ಬಾಲಕಿ, ಆಕೆಯ ತಾಯಿ ಮತ್ತು ಅಜ್ಜಿಯನ್ನು ಕೊಂದಿದ್ದಾನೆ ಮಾತ್ರವಲ್ಲದೇ ತನ್ನ ಪಾಪಕಾರ್ಯಕ್ಕೆ ಛೀಮಾರಿ ಹಾಕಿದ್ದ ಸ್ವಂತ ಪತ್ನಿ ಮಾತ್ರವಲ್ಲದೇ ಇಬ್ಬರು ಮಕ್ಕಳನ್ನೂ ಕೊಲೆ ಮಾಡಿದ್ದಾನೆ! ಅಲ್ಲಿಗೆ ಅವನ ಕಾರ್ಯ ಮುಗಿದಿದೆ, ಮತ್ತೆ ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಏನಿದು ಘಟನೆ?

ರಂಗಾರೆಡ್ಡಿ ಜಿಲ್ಲೆಯ ಶಹಾಬಾದ್ ಪ್ರದೇಶದ ದೈವಲಗುಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ರಾಜಶೇಖರ್ ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ, ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾದ ನಂತರ, ಆರೋಪಿ ಕೊಲೆ ಮಾಡಿದ್ದಾನೆ. ರಾಜಶೇಖರ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ ಎಂದು ತಿಳಿದುಬಂದಿದೆ, ಇದು ಕುಟುಂಬದೊಳಗೆ ಭಯಾನಕ ಘಟನೆಗೆ ಕಾರಣವಾಗಿದೆ.

ಆರು ಜನರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ

ತನ್ನ ಕುಟುಂಬವನ್ನು ಕೊಂದ ನಂತರ, ಆರೋಪಿ ಬೇರೆ ಸ್ಥಳಕ್ಕೆ ಹೋಗಿ ಅಪ್ರಾಪ್ತ ಬಾಲಕಿ, ಆಕೆಯ ತಾಯಿ ಮತ್ತು ಅಜ್ಜಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಕ್ಸೊ ಪ್ರಕರಣ ದಾಖಲಾಗುತ್ತಿದ್ದಂತೆ ಸೇಡು ತೀರಿಸಿಕೊಳ್ಳಲು ಆರೋಪಿ ಈ ಕೊಲೆಗಳನ್ನು ಮಾಡಿದ್ದಾನೆ. ಕೊಲೆಗಳ ಸುದ್ದಿ ತಿಳಿದ ನಂತರ, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ರಾಜಶೇಖರ್‌ನನ್ನು ವಶಕ್ಕೆ ಪಡೆದರು. ನಂತರ ಆತನನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು, ಅಲ್ಲಿ ಅಧಿಕಾರಿಗಳು ಔಪಚಾರಿಕ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಸ್ತುತ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ತಂಡಗಳನ್ನು ಸಹ ಸ್ಥಳಕ್ಕೆ ಕರೆಸಲಾಗಿದೆ. ತನಿಖಾ ಅಧಿಕಾರಿಗಳು ಘಟನೆಗಳ ಅನುಕ್ರಮವನ್ನು ಅರ್ಥಮಾಡಿಕೊಳ್ಳಲು ಮತ್ತು ಹತ್ಯಾಕಾಂಡದ ಹಿಂದಿನ ನಿಜವಾದ ಉದ್ದೇಶವನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

10 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
ಪತ್ನಿಗೆ ದೆವ್ವ ಬಿಡಿಸಲು ವಿಫಲನಾದ ಮಾಂತ್ರಿಕನಿಗೆ ಶಾಕ್ ಕೊಟ್ಟ ಪತಿ; ನಾಲ್ವರ ಬಂಧನ