* ಕಿರುಚಾಡಿದ್ದರಿಂದ ಕಾರು ನಿಲ್ಲಿಸಿದ ಚಾಲಕ
* ಮತ್ತೊಂದು ಕ್ಯಾಬ್‌ನಲ್ಲಿ ಮನೆ ಸೇರಿದ ಸಂತ್ರಸ್ತೆ
* ಕ್ಯಾಬ್‌ನಲ್ಲಿ ಚಾಲಕನ ಕೆಟ್ಟ ವರ್ತನೆ
ಬೆಂಗಳೂರು(ಡಿ.04): ರಾಜಧಾನಿಯಲ್ಲಿ ಮೊಬೈಲ್ ಆ್ಯಪ್ ಆಧಾರಿತ ಓಲಾ ಕ್ಯಾಬ್(Ola Cab) ಚಾಲಕನೊಬ್ಬ ಮಹಿಳಾ ಪ್ರಯಾಣಿಕರೊಬ್ಬರ ಎದುರು ಹಸ್ತಮೈಥುನ(Masturbation) ಮಾಡಿಕೊಂಡು ಕೆಟ್ಟದಾಗಿ ವರ್ತಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಈ ಸಂಬಂಧ ಸಂತ್ರಸ್ತೆ ಟ್ವೀಟ್‌ನಲ್ಲಿ(Tweet) ಘಟನೆಯನ್ನು ವಿವರಿಸಿದ್ದಾರೆ. ಕೆಲಸ ಮುಗಿಸಿ ರಾತ್ರಿ ಮನೆಗೆ ತೆರಳು ಓಲಾ ಕ್ಯಾಬ್ ಬುಕ್ ಮಾಡಿದ್ದೆ. ಕ್ಯಾಬ್‌ನಲ್ಲಿ ಹೋಗುವಾಗ ಚಾಲಕ(Driver) ಹಸ್ತಮೈಥುನ ಮಾಡಿಕೊಳ್ಳಲು ಶುರು ಮಾಡಿದ. ನಾನು ಇದನ್ನು ಗಮನಿಸಿದೆ. ತಕ್ಷಣ ಆತ ದೋಚಿ ಮುಚ್ಚಿಕೊಂಡು ಏನು ನಡೆದೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದ. ಈ ವೇಳೆ ನಾನು ಕೊಂಚ ಧೈರ್ಯ ಮಾಡಿ ಕಿರುಚಾಡಿದ್ದರಿಂದ ಕ್ಯಾಬ್ ನಿಲ್ಲಿಸಿದ. ಬಳಿಕ ನಾನು ಕೆಳಗೆ ಇಳಿದುಕೊಂಡು ಮತ್ತೊಂದು ಕ್ಯಾಬ್‌ನಲ್ಲಿ ಮನೆಗೆ ತೆರಳಿದೆ ಎಂದು ಟ್ಟಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಘಟನೆಯಿಂದ ನಮ್ಮ ಮನೆ ಎಂದು ಭಾವಿಸುವ ಬೆಂಗಳೂರು(Bengaluru) ನಗರ ಅಸುರಕ್ಷಿತ ಎನ್ನುವ ಭಾವನೆ ಮೂಡಿದೆ. ನನ್ನಲ್ಲಿ ಭಯ ಹುಟ್ಟಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಸುರಕ್ಷತೆಯ(Safety of Women) ದೃಷ್ಟಿಯಿಂದ ಒಂಟಿಯಾಗಿ ಕ್ಯಾಬ್‌ಗಳಲ್ಲಿ(Cab) ತೆರಳುವಾಗ ಪರಿಚಿತರ ಸಂಪರ್ಕದಲ್ಲಿರಬೇಕು. ಪ್ರಯಾಣವನ್ನು ಟ್ರ್ಯಾಕ್ ಮಾಡಲು ಲೈವ್ ಲೊಕೇಶನ್(Live Location)ಹಂಚಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಘಟನೆ ಸಂಬಂಧ ಓಲಾ ಕಂಪನಿಗೆ ದೂರು ನೀಡಿದ ನಂತರ ಚಾಲಕನನ್ನು ಕೆಲಸದಿಂದ ತೆಗೆದಿದೆ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಅಂದುಕೊಂಡಂತೆ ಆಗಲಿಲ್ಲ.. ಲಾಕ್ ಡೌನ್‌ನಲ್ಲಿ ಸೆಕ್ಸ್ ಬಿಟ್ಟು ಹಸ್ತಮೈಥುನಕ್ಕಿಳಿದರು!
ಆರೋಪಿ ಬಂಧನಕ್ಕೆ ಕ್ರಮ:
ಘಟನೆ ಸಂಬಂಧ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್(Kamal Pant), ಈ ಘಟನೆ ಬಗ್ಗೆ ಕ್ಷಮೆ ಇರಲಿ. ನಿಮ್ಮ ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ದುರ್ವತನೆಯ ವ್ಯಕ್ತಿಯ ಬಂಧನಕ್ಕೆ ಪೊಲೀಸರು(Police) ಮುಂದಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತಮ್ಮನ್ನು ಸಂಪರ್ಕಿಸಲಿದ್ದಾರೆ. ಓಲಾ ಕಂಪನಿ(Ola Company) ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಆಟೋದಲ್ಲಿ ಮಹಿಳೆ ಪಕ್ಕ ಕೂತು ಹಸ್ತಮೈಥುನ ಮಾಡ್ಕೊಂಡ!
ಮಹಿಳೆಯ ಜತೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಸಹ ಪ್ರಯಾಣಿಕ(Passenger) ಅಲ್ಲಿಯೇ ಹಸ್ತಮೈಥುನ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಪುಣೆಯಿಂದ ಘಟನೆ ವರದಿಯಾಗಿತ್ತು.
ಪುಣೆಯ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದಲ್ಲಿ ಮಹಿಳೆಯೊಬ್ಬಳು ತನ್ನ ಮಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಮಹಿಳೆಯೊಬ್ಬರು ಆಟೋರಿಕ್ಷಾ(Auto) ಏರಿದ್ದರು. ಈ ಮೊದಲೆ ಆಟೋದಲ್ಲಿ ವ್ಯಕ್ತಿಯೊಬ್ಬ ಇದ್ದ. ಇದ್ದಕ್ಕಿದ್ದಂತೆ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಹಸ್ತಮೈಥುನ ಮಾಡಿಕೊಳ್ಳಲು ಆರಂಭಿಸಿದ್ದನು. ಯಶ್ವಂತಾವೊ ಚವಾಣ್ ಸ್ಮಾರಕ ಆಸ್ಪತ್ರೆಗೆ ಬಂದ ನಂತರ ಮಹಿಳೆ ಅಲ್ಲಿದ್ದ ಪೊಲೀಸರಿಗೆ ಘಟನೆ ವಿವರಿಸಿದ್ದರು.
ತಕ್ಷಣ ಕಾರ್ಯನಿರತರಾದ ಪೊಲೀಸರು ದೌರ್ಜನ್ಯ ನೀಡಿದ ಆರೋಪಿ 30 ವರ್ಷದ ಸೊಹೆಬ್ ಖುರೇಷಿಯನ್ನು ಬಂಧಿಸಿದ್ದಾರೆ. ಸ್ಥಳೀಯರ ಸಹಕಾರದಲ್ಲಿ ಆರೋಪಿಯನ್ನು ಬಂಧಿಸಿದ್ದರು.
ATM Robbery: ದರೋಡೆಗೆ ಲವರ್ ಸ್ಕೆಚ್, ಎಟಿಎಂ ಪಾಸ್‌ವರ್ಡ್ ನೀಡಿದ ಪ್ರೇಯಸಿ..!
ದೆಹಲಿ ಸಮೀಪದ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಆಸ್ಪತ್ರೆಯಲ್ಲಿ 35 ವರ್ಷದ ವ್ಯಕ್ತಿಯೊಬ್ಬ 40 ವರ್ಷದ ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡ ಘಟನೆಯೂ ವರದಿಯಾಗಿತ್ತು. ಎಂಜಿಎಂ ಆಸ್ಪತ್ರೆಯ ಸರತಿ ಸಾಲಿನಲ್ಲಿ ನಿಂತಾಗ ಚೇಷ್ಟೆ ಮೆರೆದಿದ್ದು ಅರ್ಷದ್ ಎಂಬಾತನನ್ನು ಬಂಧಿಸಲಾಗಿತ್ತು.
ನಟಿ ಬಾತ್ ರೂಂಗೆ ನುಗ್ಗಿ ಆಕೆ ಎದುರೆ ಹಸ್ತಮೈಥುನ ಮಾಡಿಕೊಂಡ!
ವೆಬ್ ಸೀರಿಸ್ ನ(Web Series) ಚಿತ್ರೀಕರಣದಲ್ಲಿ(Shooting) ನಟಿ ಭಾಗವಹಿಸಿದ್ಸದರು. ಈ ವೇಳೆ ಹೋಟೆಲ್ ನ ಹೌಸ್ ಕೀಪಿಂಗ್ ಸಿಬ್ಬಂದಿಯೊಬ್ಬ ನೀಚ ಕೆಲಸ ಮಾಡಿದ್ದಾನೆ. ನಟಿ ಮೇಲೆ ದೌರ್ಜನ್ಯ ಎಸಗಲು ಯತ್ನ ಮಾಡಿದ್ದು ಅಲ್ಲದೇ ತನ್ನ ಶಿಶ್ನವನ್ನು ಆಕೆ ಎದುರು ಪ್ರದರ್ಶನ ಮಾಡಿದ್ದನು ಶೂಟಿಂಗ್ ಮುಗಿಸಿದ ನಟಿ ಬಟ್ಟೆ ಬದಲಾಯಿಸಲು ರೆಸ್ಟ್ ರೂಂ ಗೆ ಹೋಗಿದ್ದಳು. ಈ ವೇಳೆ ಹಿಂದಿನಿಂದ ಬಂದು ಆಕೆಯನ್ನು ಹಿಡಿದುಕೊಂಡು ದೌರ್ಜನ್ಯ ಎಸಗಿದ್ದನು.