85ರ ಅಜ್ಜಿಯ ಮೃತದೇಹವನ್ನೂ ಬಿಡದ ಕಾಮಪಿಶಾಚಿ: ಹಾಸನದಲ್ಲಿ ಪೈಶಾಚಿಕ ಘಟನೆ

By Sathish Kumar KH  |  First Published Apr 6, 2023, 5:21 PM IST

ಇಲ್ಲೊಬ್ಬ ಕಾಮ ಪಿಶಾಚಿ ತನ್ನ ಕಾಮದಾಹವನ್ನು ತೀರಿಸಿಕೊಳ್ಳಲಿಕ್ಕಾಗಿ 85 ವರ್ಷದ ಅಜ್ಜಿಯನ್ನೇ ಕೊಂದು ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಅಮಾನವೀಯ ಪೈಶಾಚಿಕ ಘಟನೆ ಹಾಸನದಲ್ಲಿ ನಡೆದಿದೆ.


ಹಾಸನ (ಏ.06): ಕಾಮಕ್ಕೆ ಕಣ್ಣಿಲ್ಲ ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಇಲ್ಲೊಬ್ಬ ಕಾಮ ಪಿಶಾಚಿ ತನ್ನ ಕಾಮದಾಹವನ್ನು ತೀರಿಸಿಕೊಳ್ಳಲಿಕ್ಕಾಗಿ 85 ವರ್ಷದ ಅಜ್ಜಿಯನ್ನೇ ಕೊಂದು ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಅಮಾನವೀಯ ಪೈಶಾಚಿಕ ಘಟನೆ ಹಾಸನದಲ್ಲಿ ನಡೆದಿದೆ.

ನಮ್ಮ ನಡುವೆ ಆಗುತ್ತಿರುವ ಅತ್ಯಾಚಾರ ಹಾಗೂ ಅನೈತಿಕ ಸಂಬಂಧದ ಘಟನೆಗಳನ್ನು ನೋಡಿ ಕೆಲವರು ಕಾಮಕ್ಕೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಆದರೆ, ಮಾನವನಾದ ಪ್ರತಿಯೊಬ್ಬ ವ್ಯಕ್ತಿಗೂ ಒಪಂಚೇದ್ರಿಗಳಾದ ಕಣ್ಣು ಸೇರಿದಂತೆ ಎಲ್ಲರನ್ನೂ ಮಾನವೀಯತೆಯಿಂದ ನೋಡುವ ಮನಸ್ಸಂತೂ ಇದ್ದೇ ಇರುತ್ತದೆ. ಸುಮಾರು 85 ವರ್ಷ ಜೀವನವನ್ನು ಮಾಡಿ, ಊರು ಹೋಗು -ಕಾಡು ಬಾ ಎನ್ನುವ ವಯಸ್ಸಿನ 85 ವರ್ಷದ ಹಣ್ಣು ಹಣ್ಣಾದ ವೃದ್ಧೆಯ ಮೇಲೆ ಯಾರಿಗಾದರೂ ಕಾಮದ ಮನೋಭಾವನೆ ಬರುತ್ತದೆಯೇ? ಇಲ್ಲವೇ ಇಲ್ಲ. ಆದರೆ, ಇಲ್ಲೊಬ್ಬ ಕಾಮ ಪಿಶಾಸಿ ಜೀವನದ ಕೊನೆಯ ದಿನಗಳನ್ನು ಎಣಿಸುತ್ತಿದ್ದ ನದೇಹವೇ ನಿಸ್ತೇಜಗೊಂಡ ವೃದ್ಧೆಯ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ಆಕೆಯನ್ನು ಕೊಲೆ ಮಾಡಿ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ.

Tap to resize

Latest Videos

ವಿಧವೆಗೆ ಬಾಳು ಕೊಡುವುದಾಗಿ ಪೊಲೀಸಪ್ಪನಿಂದ ಮಹಾ ಮೋಸ: ಮೂರು ಬಾರಿ ಗರ್ಭಪಾತ.!

ಮನುಕುಲವೇ ತಲೆತಗ್ಗಿಸೋ ಘಟನೆ: ಮಾನವ ಕುಲವೇ ತಲೆ ತಗ್ಗಿಸುವಂತಹ ಪೈಶಾಚಿಕ ಕೃತ್ಯಕ್ಕೆ ಸಾಕ್ಷಿಯಾಗಿರುವುದು ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಯರೇಹಳ್ಳಿ ಗ್ರಾಮವಾಗಿದೆ. ಇನ್ನು ಘಟನೆ ಏ.1ರಂದು ನಡೆದಿದ್ದು ನಾಲ್ಕೈದು ದಿನ ತಡವಾಗಿ ಬೆಳಕಿಗೆ ಬಂದಿದೆ. ಅರಸೀಕೆರೆ ತಾಲ್ಲೂಕಿನ ಯರೆಹಳ್ಳಿ ಗ್ರಾಮದ ಮಿಥುನ್ (32) ಅಜ್ಜಿಯನ್ನು ಕೊಲೆ ಮಾಡಿ ಅತ್ಯಾಚಾರ ಎಸಗಿದ್ದ ನೀಚನಾಗಿದ್ದಾನೆ. ತನ್ನ ಮಾಡಬಾರದ ಪಾಪ ಕೃತ್ಯದಿಂದ ಒಂದಿನಿತೂ ಅಳುಕದೇ ಗ್ರಾಮದಲ್ಲಿ ಎದೆಯುಬ್ಬಿಸಿಕೊಮಡು ನಡೆಯುತ್ತಿದ್ದ ಇವನ್ನು ಅತ್ಯಾಚಾರದ ಸುಳಿವು ಸಿಗುತ್ತಿದ್ದಂತೆಯೇ ಪೊಲೀಸರು ಹೆಡೆಮುರಿ ಕಟ್ಟಿ ಜೈಲು ಕಂಬಿಹಿಂದೆ ಹಾಕಿದ್ದಾರೆ.

ಘಟನೆಯ ವಿವರ ಇಲ್ಲಿದೆ ನೋಡಿ.! 
ಏಪ್ರಿಲ್ 1 ರಂದು ಬೆಳಗ್ಗೆ ತನ್ನ ಜಮೀನನ ಬಳಿ ತೆರಳಿದ್ದ 85 ವರ್ಷದ ವೃದ್ದೆ ದಾರಿ ಗೊತ್ತಿಲ್ಲದೆ ಬೇರೆ ಕಡೆ ಹೋಗಿದ್ದಳು. ಅದೇ ಗ್ರಾಮದ ಮಿಥುನ್ ಅಜ್ಜಿಯನ್ನು ಪುಸಲಾಯಿಸಿ ನಿಮ್ಮ ಜಮೀನಿನ ಬಳಿ ಬಿಡೋದಾಗಿ ಬೈಕ್ ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಅತ್ಯಾಚಾರ ಯತ್ನಕ್ಕೆ ಪ್ರತಿರೋಧ ತೋರಿದ ಅಜ್ಜಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾನೆ. ನಂತರ, ರಕ್ತದ ಮಡುವಿನಲ್ಲಿ ವೃದ್ಧೆ ಒದ್ದಾಡಿ ಸಾವನ್ನಪ್ಪಿದ ನಂತರವೂ ಮೃತದೇಹದೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ತನ್ನ ಕಾಮವನ್ನು ತಣಿಸಿಕೊಂಡಿದ್ದಾನೆ. ಇನ್ನು ತನ್ನ ಕಾಮತೃಷೆ ತೀರಿಸಿಕೊಂಡ ನಂತರ ಅಜ್ಜಿಯ ಬೆತ್ತಲೆ ಮೃತದೇಹವನ್ನು ಹೊಲದೊಳಗೆ ಬೀಸಾಡಿ ಬಂದಿದ್ದಾನೆ.

ಮನೆಯವರಿಂದ ಅಜ್ಜಿಯ ಹುಡುಕಾಟ: ಇನ್ನು ರಾತ್ರಿಯಾದರೂ ಜಮೀನಿನ ಕಡೆಗೆ ಹೋಗಿದ್ದ ಅಜ್ಜಿ ಮನೆಗೆ ಬಾರದಿದ್ದಾಗ ಅವರ ಮಗ ಜಮೀನಿಗೆ ಹೋಗಿ ನೋಡಿಕೊಮಡು ಬಂದಿದ್ದಾನೆ. ಎಲ್ಲಿಯಾದರೂ ಇಬಹುದು ಎಂದು ಕೂಗಿದರೂ ಧ್ವನಿ ಕೇಳದಿದ್ದಾಗ ಮರಳಿ ವಾಪಸ್‌ ಬಂದಿದ್ದಾನೆ. ನಂತರ ಅವರ ನೆಂಟರಿಷ್ಟರ ಮನೆಗೆ ಕರೆ ಮಾಡಿ ಕೇಳಿದ್ದಾರೆ. ಗ್ರಾಮದಲ್ಲಿ ಅಜ್ಜಿ ಹೋಗುತ್ತಿದ್ದ ಮನೆಗಳಲ್ಲಿಯೂ ಹುಡುಕಿದ್ದಾರೆ. ಎಲ್ಲಿಯೂ ಸಿಗದಿದ್ದಾಗ ಏ.2 ರಂದು ಮೃತೆ ವೃದ್ಧೆಯ ಮಗ ಹಾಗೂ ಅವರ ಕುಟುಂಬ ಸದಸ್ಯರು ಏಪ್ರಿಲ್ 2 ಬೆಳಗ್ಗೆ ಮತ್ತೆ ವೃದ್ದೆಯನ್ನು ಹುಡುಕಿಕೊಂಡು ಹೊಲದ ಬಳಿ ಹೋಗಿದ್ದಾರೆ. ಈ ವೇಳೆ ಯರೆಹಳ್ಳಿ ಗ್ರಾಮದ ಜಮೀನಿನಲ್ಲಿ ಸಂಪೂರ್ಣ ಬೆತ್ತಲು ಸ್ಥಿತಿಯಲ್ಲಿ ಪತ್ತೆಯಾಗಿದ್ದ ವೃದ್ದೆ ಮೃತದೇಹ ಕಂಡುಬಂದಿದೆ. 

ಪ್ರೀತಿಸಿ ಮದುವೆಯಾದರೂ ವರದಕ್ಷಿಣೆ ಕಿರುಕುಳ ಕೊಟ್ಟ: ನಿನ್ನ ಪ್ರೀತಿ ಸಾಕೆಂದು ಕೊಂದೇಬಿಟ್ಟ.!

ಪೊಲೀಸರಿಂದ ಕೇಸ್‌ ದಾಖಲು:  ಇನ್ನು ಅಜ್ಜಿಯ ಅನುಮಾನಸ್ಪದ ಸಾವು ನೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕುರಿತು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಅಮಾನುಷ ಘಟನೆ ನಡೆದಿರುವುದು ಬಯಲಾಗಿದೆ. ಇನ್ನು ಈ ಕ್ರೂರಿ ಮಿಥುನ್‌ 5 ವರ್ಷಗಳ ಹಿಂದೆಯೂ ಇದೇ ರೀತಿಯಲ್ಲಿ ವೃದ್ದೆ ಮೇಲೆ ಅತ್ಯಾಚಾರ ಯತ್ನ ಮಾಡಿದ್ದನು. ಅದೇ ಸುಳಿವು ಹಿಡಿದು ವಿಚಾರಣೆ ನಡೆಸಿದಾಗ ತನ್ನ ಕ್ರೂರ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಈ ಘಟನೆ ಬಾಣಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಬಂಧಿಸಿದ್ದಾರೆ.

click me!