ಹಾಸನದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಕೇಸ್‌ಗೆ ಸಂಬಂಧಿಸಿದಂತೆ ಆಗಿಂದಾಗ್ಗೆ ಸುದ್ದಿಗೋಷ್ಠಿ ನಡೆಸುತ್ತಿದ್ದ ವಕೀಲ ದೇವರಾಜೇಗೌಡ ಅವರು ಈಗ ನಾಪತ್ತೆಯಾಗಿದ್ದಾರೆ ಎಂದು ಕೇಳಿಬರುತ್ತಿದೆ.
ಹಾಸನ (ಮೇ 10): ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಮಾಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಹಾಗೂ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಎಫ್‌ಐಆರ್ ದಾಖಲಾದ ಬೆನ್ನಲ್ಲಿಯೇ ಬಿಜೆಪಿ ಮುಖಂಡರೂ ಆಗಿರುವ ವಕೀಲ ದೇವರಾಜೇಗೌಡ ನಾಪತ್ತೆ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ದೇಶಾದ್ಯಂತ ಕಳೆದ 15 ದಿನಗಳಿಂದ ಭಾರಿ ಚರ್ಚೆಯಲ್ಲಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಕೇಸ್‌ಗೆ ಭಾರಿ ತಿರುವು ಸಿಕ್ಕಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೇ ನಾಲ್ಕು ಎಫ್‌ಐಆರ್ ದಾಖಲಾಗಿದ್ದರೂ, ಯಾರ ಕೈಗೂ ಸಿಗದೇ ವಿದೇಶದಲ್ಲಿ ಉಳಿದುಕೊಂಡಿದ್ದಾನೆ. ಆದರೆ, ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಹಂಚಿಕೆ ಮಾಡಿದ್ದಾರೆಂಬ ಆರೋಪ ಹೊತ್ತಿದ್ದ ವಕೀಲ ದೇವರಾಜೇಗೌಡ ಪತ್ರಿಕಾಗೋಷ್ಠಿ ನಡೆಸಿ ತಾವು ಪೆನ್‌ಡ್ರೈವ್ ಹಂಚಿಕೆ ಮಾಡಿಲ್ಲವೆಂದು ಸರ್ಕಾರದ ವಿರುದ್ಧವೇ ಆರೋಪ ಮಾಡಿದ್ದರು. ಈಗ ವಕೀಲ ದೇವರಾಜೇಗೌಡ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ದಾಖಲಾಗುತ್ತಿದ್ದಂತೆಯೇ ಅವರೂ ಕೂಡ ನಾಪತ್ತೆಯಾಗಿದ್ದಾರೆ.
ಪಾಪ ಪ್ರಜ್ವಲ್, ಎಲ್ರೂ ನೋಡ್ಲಿ ಅಂತ ಅಶ್ಲೀಲ ವಿಡಿಯೋ ಹಂಚಿಕೊಂಡ; ಪೊಲೀಸರು ಬಂದ್ರು, ಎತ್ತಾಕೊಂಡ್ ಹೋದ್ರು!
ಹೌದು, ಹಾಸನ ಪೆನ್ ಡ್ರೈವ್ ಪ್ರಕರಣ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪೆನ್‌ಡ್ರೈವ್ ಹಂಚಿಕೆ ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾದ ಬೆನ್ನಲ್ಲಿಯೇ, ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಬಿಜೆಪಿ ಮುಖಂಡರೂ ಆಗಿದ್ದ ವಕೀಲ ದೇವರಾಜೇಗೌಡ ಹೇಳಿದ್ದರು. ಜೊತೆಗೆ, ಕಕ್ಷಿದಾರ ಕಾರ್ತಿಕ್ ನನಗೆ ಪೆನ್‌ಡ್ರೈವ್ ಕೊಟ್ಟು ಅಶ್ಲೀಲ ವಿಡಿಯೋ ಹಂಚಿಕೆಗೆ ತಂದಿದ್ದ ಸ್ಥಗಿತ ಆದೇಶವನ್ನು ತೆರೆವುಗೊಳಿಸಲು ಮನವಿ ಮಾಡಿದ್ದರು. ಇದರ ಬೆನ್ನಲ್ಲಿಯೇ ದೇವರಾಜೇಗೌಡ ಅವರ ವಿರುದ್ಧ ಕಕ್ಷಿದಾರರು ಕೊಟ್ಟ ಸಾಕ್ಷಿಗಳನ್ನು ಸಾರ್ವಜನಿಕವಾಗಿ ತೋರಿಸಿ ವಕೀಲ ವೃತ್ತಿಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಅವರ ವಿರುದ್ಧ ವಕೀಲರ ಪರಿಷತ್‌ನಿಂದ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿತ್ತು.
ದೇವರಾಜೇಗೌಡ ಮೇಲೆ ಲೈಂಗಿಕ ಕಿರುಕುಳ ದೂರು: ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಪೆನ್ ಡ್ರೈವ್ ಬ್ಲಾಕ್ ಮೇಲರ್ ಎಂದು ಈಗಾಗಲೇ ಕುಖ್ಯಾತಿಯನ್ನ ಗಳಿಸಿದ್ದಾರೆ. ಇವರ ವಿರುದ್ಧ ಈಗ ಮಹಿಳೆ 01/04/2024ರಂದು ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ದೂರು ನೀಡಿರುವುದು ಬಹಿರಂಗವಾಗಿದೆ. ಆ ಹಿನ್ನೆಲೆಯಲ್ಲಿ ಅನವಶ್ಯಕವಾಗಿ ಪೆನ್ ಡ್ರೈವ್ ಪ್ರಕರಣವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ.
ಮಹಿಳೆಯನ್ನ ಒತ್ತಾಯಪೂರ್ವಕವಾಗಿ ಲೈಂಗಿಕ ಕ್ರಿಯೆಗೆ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಂಡು, ಬಂಧಿಸಿ ರಾಜ್ಯದ ಜನತೆಗೆ ಅವರ ನೈಜ ಚಿತ್ರಣವನ್ನು ಹಾಗೂ ಹಿನ್ನಲೆಯನ್ನ ಬಹಿರಂಗಪಡಿಸಬೇಕು. ದೇವರಾಜೇ ಗೌಡರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಿಂದ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್: ಸುಳ್ಳು ದೂರು ನೀಡುವಂತೆ ಒತ್ತಡ, ಮೂವರ ವಿರುದ್ಧ ದೂರು
ಇದರ ಬೆನ್ನಲ್ಲಿಯೇ ವಕೀಲ ದೇವರಾಜೇಗೌಡ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ತಾವು ಪತ್ರಿಕಾಗೋಷ್ಟಿ ನಡೆಸುವುದಾಗಿ ಹೇಳುತ್ತಿದ್ದ ದೇವರಾಜೇಗೌಡ ಅವರು ಈಗ ದಿಢೀರ್ ನಾಪತ್ತೆಯಾಗುದ್ದಾರೆ. ಇನ್ನು ದೇವರಾಜೇಗೌಡ ಅವರು, ಬಂಧನ ಭೀತಿಯಿಂದ ನಾಪತ್ತೆಯಾದ್ದರು. ಹೊಳೆನರಸೀಪುರ ಟೌನ್ ಠಾಣೆ ಪೊಲೀಸರಿಂದ ದೇವರಾಜೇಗೌಡ ಅವರಿಗಾಗಿ ಹುಡುಕಾಟ ಮಾಡಲಾಗಿದೆ. ಈ ಹಿನ್ನೆಲೆ ಮಧ್ಯಾಹ್ನದಿಂದ ಯಾರ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾರೆ. ಏಪ್ರಿಲ್ ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ದೇವರಾಜೇಗೌಡ ಬಂಧನ ಸಾಧ್ಯತೆಯಿದೆ. ಇದೇ ಕಾರಣಕ್ಕೆ ದೇವರಾಜೇಗೌಡ ನಾಪತ್ತೆಯಾಗಿರುವ ಸಾಧ್ಯತೆಯಿದೆ ಎಂದು ಕೇಳಿಬಂದಿದೆ.