
ಭುವನೇಶ್ವರ್: ಗಂಡ ಹೆಂಡತಿ ಮಧ್ಯೆ ಯಾವಾಗಲೂ ಸಮರಸವಿರುವುದಿಲ್ಲ. ಎಲ್ಲರ ದಾಂಪತ್ಯದಲ್ಲಿ ಸಣ್ಣಪುಟ್ಟ ಗೊಂದಲಗಳು ಮನಸ್ತಾಪಗಳು, ಮುನಿಸು ತಪ್ಪು ಗ್ರಹಿಕೆಗಳು ಸಾಮಾನ್ಯವಾಗಿ ಇರುತ್ತವೆ. ಇಂತಹ ಸಂದರ್ಭದ ಬಂದಾಗ ಕೆಲ ಶಿಕ್ಷಿತರು ವಿಚ್ಛೇದನದ ಮೊರೆ ಹೋಗುತ್ತಾರೆ. ಆದರೆ ಇಲ್ಲೊಬ್ಬ ತಾನೆ ಕೊಲೆಯಾಗಿರುವಂತೆ ಕತೆ ಕಟ್ಟಿ ಪೊಲೀಸರ ಅತಿಥಿಯಾಗಿದ್ದಾನೆ.
ಹೆಂಡತಿ ಕಾಟದಿಂದ ಬೇಸತ್ತ ಗಂಡನೋರ್ವ ಆಕೆಯಿಂದ ಶಾಶ್ವತವಾಗಿ ಮುಕ್ತಿ ಪಡೆಯುವ ಸಲುವಾಗಿ ತಾನೇ ಕೊಲೆಯಾಗಿರುವ ರೀತಿ ಕತೆ ಕಟ್ಟಿದ ಘಟನೆ ಒಡಿಶಾದಲ್ಲಿ ನಡೆದಿದ್ದು, ಹೀಗೆ 'ಕೊಲೆಯಾದ' ಗಂಡನನ್ನು ಒಡಿಶಾ ಪೊಲೀಸರು ಮುಂಬೈನಿಂದ ಹಿಡಿದು ತಂದಿದ್ದಾರೆ. ಒಡಿಶಾದ ಗಜಪತಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತನ್ನದೇ ಕೊಲೆ ಕತೆ ಹೆಣೆದು ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಆತನ ಮೊಬೈಲ್ ಟ್ರ್ಯಾಕಿಂಗ್ ಮಾಡಿ ಬಂಧಿಸಿದ್ದಾರೆ.
ಒಡಿಶಾದ ದಕ್ಷಿಣ ಗಜಪತಿ ಜಿಲ್ಲೆಯಿಂದ ಮುಂಬೈಗೆ ವಲಸೆ ಬಂದಿದ್ದ ಶರತ್ ಪರಿಚ್ಛ (Sarat Parichha) ಎಂಬ ವಲಸೆ ಕಾರ್ಮಿಕನೇ ಹೀಗೆ ಹೆಂಡತಿಯಿಂದ ದೂರವಿರುವುದಕ್ಕಾಗಿ ತಾನೇ ಕೊಲೆಯಾದಂತೆ ಕತೆ ಕಟ್ಟಿದಾತ. ಬರಿಪಡ (Bariapada) ಗ್ರಾಮದವನಾದ ಈತ ಹೆಂಡತಿ ಕಾಟದಿಂದ ಪಾರಾಗಲೂ ಈ ರೀತಿ ದೊಡ್ಡ ಡ್ರಾಮಾವನ್ನೇ ಮಾಡಿದ್ದ. ಇದು ಬಯಲಾಗುತ್ತಿದ್ದಂತೆ ಅದವಾ ಪೊಲೀಸ್ ಠಾಣೆಯ ಪೊಲೀಸರು ಈತನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
100 ಬಾರಿ ಇರಿದು 20 ವರ್ಷದ ಯುವಕನ ಕೊಲೆ: ತಿಂಗಳ ಹಿಂದೆ ಮದ್ವೆಯಾಗಿದ್ದ ಯುವಕ
ವರದಿ ಪ್ರಕಾರ, ಶರತ್ ಮಾರ್ಚ್ 6 ರಂದು ಶರತ್ ತನ್ನ ಕುಟುಂಬ ಸದಸ್ಯರಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಈ ವೇಳೆ ಆತ ತಮಿಳುನಾಡಿನಲ್ಲಿರುವುದಾಗಿ ಹೇಳಿಕೊಂಡಿದ್ದು, ವಿಡಿಯೋ ಕಾಲ್‌ನಲ್ಲಿ ಆತನಿಗೆ ಥಳಿಸುತ್ತಿರುವುದು ಆತನ ಕುಟುಂಬದವರಿಗೆ ಕಂಡು ಬಂದಿದೆ. ಇದರ ಜೊತೆಗೆ ಆತನ ಮೊಬೈಲ್‌ನಿಂದ ಕುಟುಂಬದವರಿಗೆ ಮೃತದೇಹವೊಂದರ ಫೋಟೋ ಹೋಗಿದೆ.
ಈತನ ಈ ಮಹಾ ಅವಾಂತರದಿಂದ ಅಲ್ಲಿ ಶರತ್ ಕುಟುಂಬದವರು ಗಾಬರಿ ಬಿದ್ದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಆತನನ್ನು ಪತ್ತೆ ಮಾಡುವಂತೆ ಕೋರಿದ್ದಾರೆ. ಇತ್ತ ಕುಟುಂಬದವರ ದೂರು ದಾಖಲಿಸಿಕೊಂಡ ಗಜಪತಿ ಠಾಣೆ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಆತನ ಮೊಬೈಲ್ ಫೋನ್ ಟ್ರ್ಯಾಕ್ ಮಾಡಿದ್ದಾರೆ. ಈ ವೇಳೆ ಈತ ಕುಟುಂಬದವರಿಗೆ ವಿಡಿಯೋ ಕಾಲ್‌ನಲ್ಲಿ ತೋರಿಸಿದ ಈ ಹಲ್ಲೆ ದೃಶ್ಯಾವಳಿ ಮುಂಬೈನಲ್ಲಿ ಚಿತ್ರೀಕರಿಸಲಾಗಿದ್ದು, ತಮಿಳುನಾಡಿನಲ್ಲಿ (Tamil Nadu) ಅಲ್ಲ ಎಂಬುದು ಪೊಲೀಸರಿಗೆ ತಿಳಿದಿದೆ.
ಇದಾದ ಬಳಿಕ ಗಜಪತಿ ಠಾಣೆ ಪೊಲೀಸರು, ಮುಂಬೈಗೆ ಬಂದಿಳಿದಿದ್ದು, ಶರತ್‌ನನ್ನು ಮುಂಬೈನಲ್ಲಿ (Mumbai) ಪತ್ತೆ ಮಾಡಿ ಒಡಿಶಾಗೆ ಕರೆ ತಂದಿದ್ದಾರೆ. ನಂತರ ಆತನನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಹೆಂಡತಿ ಕಾಟದಿಂದ ಬೇಸತ್ತು ಆಕೆಯಿಂದ ದೂರ ಉಳಿಯುವ ಸಲುವಾಗಿ ಹೀಗೆ ಮಾಡಿದ್ದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ.
ಒಕ್ಕಲಿಗ ಯುವಕನ ಮದುವೆಯಾದ ಐದೇ ದಿನಕ್ಕೆ ಮಸಣ ಸೇರಿದ ದಲಿತ ಯುವತಿ: ಕೊಡಗಿನಲ್ಲಿ ನಡೆಯಿತಾ ಮರ್ಯಾದ ಹತ್ಯೆ?
ತನ್ನದೇ ಕೊಲೆ ಕತೆ ಹೆಣೆದ ಆರೋಪಿಯನ್ನು ರಕ್ಷಿಸಲಾಗಿದೆ. ತನ್ನ ಕೊಲೆಯ ವದಂತಿಯನ್ನು ಹಬ್ಬಿಸುವ ಮೂಲಕ ಆತ ಕುಟುಂಬದ ಜೊತೆ ಆಡಳಿತವನ್ನೂ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದೀಗ ಆತನ ವಿಚಾರಣೆ ನಡೆಸಲಾಗುತ್ತಿದೆ. ಆತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಐಐಸಿ ಸುಭಂತ್ ಕುಮಾರ್ ಪಾಂಡ (IIC Subhant Kumar Panda) ಹೇಳಿದ್ದಾರೆ.
ವಿಮೆ ಮೊತ್ತ ಪಡೆಯಲು ಹತ್ಯೆ ನಾಟಕ ಪ್ಲಾನ್, 4 ಕೋಟಿ ರೂ ಆಸೆಗೆ ಬಿದ್ದ ಗೆಳೆಯರು ಕೊಂದೇ ಬಿಟ್ಟರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ