ವಿವಾಹಿತ ಮಹಿಳೆ ಕೊಂದು ಶವ ತಬ್ಬಿ ಮಲಗಿದ್ದ ಪಾಗಲ್ ಪ್ರೇಮಿ!

By Suvarna News  |  First Published Oct 26, 2021, 7:52 PM IST

* ವಿವಾಹಿತ ಮಹಿಳೆ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿ
* ಮನೆಗೆ ನುಗ್ಗಿ ತನ್ನನ್ನು ಲವ್ ಮಾಡು ಎಂದ
* ಒಪ್ಪದ ಮಹಿಳೆಯನ್ನು ತುಂಡು ತುಂಡಾಗಿ ಕತ್ತರಿಸಿದ
* ಪೊಲೀಸರು ಬರುವವರೆಗೆ ಮಹಿಳೆ ಶವ ತಬ್ಬಿಕೊಂಡಿದ್ದ


ಜೈಪುರ(ಅ. 26) ವಿವಾಹಿತ ಮಹಿಳೆಯನ್ನು ಪ್ರೀತಿ ಮಾಡುತ್ತಿದ್ದವ ಕೊನೆಗೆ ಆಕೆಯನ್ನು ಹತ್ಯೆ ಮಾಡಿದ್ದು ಅಲ್ಲದೇ  ಆಕೆಯ ಶವವನ್ನೇ ತಬ್ಬಿ ಮಲಗಿದ್ದ. ಈ ದೃಶವ್ಯವನ್ಜು ಕಂಡ ಜನ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ರಾಜಸ್ಥಾನ ಅಹೋರ್ ಪ್ರದೇಶದಲ್ಲಿ ಘಟನೆ ನಡೆದಿದ್ದು.  ಇಲ್ಲಿನ ಶಾಂತಿ ದೇವಿ ಎಂಬ ಮಹಿಳೆಗೆ ಇಬ್ಬರು  ಗಂಡು ಮಕ್ಕಳು ಇದ್ದಾರೆ. ಮಹಿಳೆಯ ಪತಿ ಶಾಂತಿಲಾಲ್ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದರು.    ಶಾಂತಿ ಗಂಡ ಮನೆಯಲ್ಲಿ ಇಲ್ಲದೆ ವೇಳೆ ಅಲ್ಲಿಗೆ ಬಂದ 21 ವರ್ಷದ  ಗಣೇಶ್ ಮೀನಾ ಎಂಬಾತ ನಿನ್ನನ್ನು ಪ್ರೀತಿ ಮಾಡುತ್ತೇನೆ  ಎಂದು ಹೇಳಿದ್ದಾನೆ.

Tap to resize

Latest Videos

ವಿಜಯಪುರ;  ರವೀ ಲವ್ಸ್ ಅಮೀನಾ ಬೇಂಗಂ.. ಮುಸ್ಲಿಂ ಯುವತಿ ಪ್ರೀತಿಸಿದವನ ಹತ್ಯೆ!

ಈ ಹಿಂದೆಯೂ ಗಣೇಶ್ ಇಂಥದ್ದೇ ಕೆಲಸ ಮಾಡಿಕೊಂಡು ಬಂದಿದ್ದ.  ಸಿಟ್ಟುಗೊಂಡಿದ್ದ ಶಾಂತಿ ದೇವಿ ನಿನ್ನನ್ನು ಪ್ರೀತಿ ಮಾಡಲು ಸಾಧ್ಯವಿಲ್ಲ ನನಗೆ ಈಗಾಗಲೇ ಮದುವೆ ಆಗಿ ಮಕ್ಕಳಿವೆ ಎಂದಿದ್ದಾರೆ.   ಇದರಿಂದ ಕೋಪಗೊಂಡ ಗಣೇಶ್ ಕೊಡಲಿಯಿಂದ ಮಲಹಿಳೆ ಮೇಲೆ ಮನಸಿಗೆ ಬಂದ ಹಾಗೆ ಹಲ್ಲೆ ನಡೆಸಿದ್ದಾನೆ.  ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಸುತ್ತಮುತ್ತಲಿನವರೂ ಮಹಿಳೆಯ ಕಿರುಚಾಟ  ಕೇಳಿ ಅಲ್ಲಿಗೆ ಬರುವ ವೇಳೆಗೆ ಆಕೆ ಪ್ರಾಣ ಬಿಟ್ಟಿದ್ದಳು.  ಕೆಲವರು ಈತನನನ್ನು ತಡೆಯಲು ಬಂದಾಗ ನಿಮ್ಮನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ. ಪೊಲೀಸರು ಬರುವವರೆಗೂ ಮಹಿಳೆಯ ಶವ ತಬ್ಬಿಕೊಂಡೇ ಮಲಗಿದ್ದ. ಶಾಂತಿ ದೇವಿ ಸಹೋದರ ದೂರು ದಾಖಲಿಸಿದ್ದು ಪೊಲೀಸರು ಆರೋಇಯನ್ನು ಬಂಧಿಸಿದ್ದಾರೆ.

ಪಾಗಲ್ ಪ್ರೇಮಿ ಟೆಕ್ಕಿ; ಪ್ರೀತ್ಸೆ ಪ್ರೀತ್ಸೆ ಅಂತ ನಟಿ ಹಿಂದೆ ಬಿದ್ದ ಟೆಕ್ಕಿಯನ್ನು ಬಂಧಿಸಲಾಗಿದೆ.  ಪಾಗಲ್ ಪ್ರೇಮಿ ಚಂದನ್ ಬಂಧನವಾಗಿದೆ.  ನಟಿಗೆ ತನ್ನನ್ನು ಪ್ರೀತಿಸು ಎಂದು ಬೆನ್ನ ಹಿಂದೆ ಬಿದ್ದಿದ್ದ.  ಇಷ್ಟ ಇಲ್ಲದೇ ಇದ್ದರೂ ನಟಿಯ ಹಿಂದೆ ಬಿದ್ದು ಒತ್ತಡ ಹಾಕುತ್ತಿದ್ದ. ಕಾಲೇಜು ಓದುತ್ತಾ ಇದ್ದಾಗಿನಿಂದ ಪ್ರೀತಿಸುವಂತೆ ಪೀಡಿಸುತ್ತಾ ಇದ್ದ.

ಕಾಲೇಜು ದಿನಗಳಿಂದ ಪರಿಚಯ ಆಗಿದ್ದ ಇಬ್ಬರು  ಎರಡು ಮೂರು ತಿಂಗಳು ಇಬ್ಬರೂ ಒಟ್ಟಿಗೆ ಓಡಾಡಿದ್ದರು ನಂತರ ಲವ್ ಮಾಡಲು ಇಷ್ಟವಿಲ್ಲದೆ ಬ್ರೇಕ್ ಅಪ್ ಆಗಿತ್ತು. ಇದರಿಂದ ಚಂದನ್ ಕೋಪಗೊಂಡಿದ್ದ. ಪ್ರಿಯಕರನ ಕಾಟ ತಾಳಲಾರದೆ ನಟಿ ಮನೆ ಬದಲಾಯಿಸಿದ್ದರು.

 

 

click me!