* ಹೋಂಸ್ಟೇನಲ್ಲಿ ತಂಗಿದ್ದ ಯುವತಿ ಅನುಮಾನಾಸ್ಪದ ಸಾವು
* ಬಳ್ಳಾರಿ ಮೂಲದ ವಿಘ್ನೇಶ್ವರಿ ಈಶ್ವರ್ (24) ಸಾವು
* ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಘಟನೆ
* ಎರಡು ದಿನಗಳಿಂದ ಹೋಂಸ್ಟೇನಲ್ಲಿ ತಂಗಿದ್ದ ಐವರು ಯುವತಿಯರು
ಕೊಡಗು (ಅ. 25) ಪ್ರವಾಸಕ್ಕೆಂದು (Travel) ಬಂದು ಹೋಂಸ್ಟೇನಲ್ಲಿ ತಂಗಿದ್ದ ಯುವತಿ(Woman) ಅನುಮಾನಾಸ್ಪದ ಸಾವು (Death) ಕಂಡಿರುವ ಪ್ರಕರಣ ವರದಿಯಾಗಿದೆ. ಬಳ್ಳಾರಿ(Ballari) ಮೂಲ್ ವಿಘ್ನೇಶ್ವರಿ ಈಶ್ವರ್ (24) ಅನುಮಾನಾಸ್ಪದ ರೀತಿ ಮೃತಪಟ್ಟಿದ್ದಾರೆ.
ಕೊಡಗು (Kodagu) ಜಿಲ್ಲೆ ಮಡಿಕೇರಿಯ ನ್ಯೂ ಕೂರ್ಗ್ ವ್ಯಾಲಿ ಹೋಂಸ್ಟೇನಲ್ಲಿ ಘಟನೆ ನಡೆದಿದೆ. ಎರಡು ದಿನಗಳಿಂದ ಹೋಂಸ್ಟೇನಲ್ಲಿ ಐವರು ಯುವತಿಯರು ತಂಗಿದ್ದರು. ಮುಂಬೈನಲ್ಲಿ ಉದ್ಯೋಗದಲ್ಲಿದ್ದ ಯುವತಿಯರು ಪ್ರವಾಸಕ್ಕೆಂದು ಬಂದಿದ್ದರು.
ವೈದ್ಯೆ ಬಲಿಪಡೆದಿದ್ದ ಗ್ಯಾಸ್ ಗೀಸರ್.. ಮುನ್ನೆಚ್ಚರಿಕೆ ಕ್ರಮ ಏನು?
ಭಾನುವಾರ ರಾತ್ರಿ ಸ್ನಾನಕ್ಕೆಂದು ಹೋಗಿದ್ದಾಗ ವಿಘ್ನೇಶ್ವರಿ ಮೃತಪಟ್ಟಿದ್ದಾರೆ. ಬಾತ್ ರೂಮಿನಲ್ಲೇ ಸಾವಿಗೆ ಗುರಿಯಾಗಿದ್ದು ಘಟನೆ ನಡೆಯುತ್ತಿದ್ದಂತೆ ಹೋಂಸ್ಟೇ ಮಾಲೀಕರಿಗೆ ಮಾಹಿತಿ ನೀಡಿದ್ದು ನಂತರ ಪೊಲೀಸರಿಗೆ ತಿಳಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಗ್ಯಾಸ್ ಗೀಸರ್ ಲೀಕ್ ಆಗಿರುವುದು ಕಾರಣ ಎನ್ನಲಾಗಿದೆ.
ಕ್ರಿಕೆಟ್ ಅಭಿಮಾನಿಗೆ ಹೃದಯಾಘಾತ; ಟಿ ಟ್ವೆಂಟಿ ವಿಶ್ವ ಕಪ್ (T20 WorldCup) ನಲ್ಲಿ ಭಾರತ (India) ಪಾಕಿಸ್ತಾನದ (Pakistan)ವಿರುದ್ಧ ಸೋಲು ಕಂಡಿದೆ. ಸಹಜವಾಗಿಯೇ ಕ್ರಿಕೆಟ್(Cricket) ಅಭಿಮಾನಿಗಳಿಗೆ ಈ ಸೋಲು ದೊಡ್ಡ ಆಘಾತವನ್ನೇ ನೀಡಿದೆ. ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಸೋಲುತ್ತಿರುವುದನ್ನು ಕಂಡ ಅಭಿಮಾನಿಗೆ ಹೃದಯಾಘಾತವಾಗಿದ್ದು (Heart Attack) ಮೃತಪಟ್ಟಿದ್ದಾರೆ.
ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಗ್ರಾಮದಲ್ಲಿ ಭಾನುವಾರ ರಾತ್ರಿ ಅಣ್ಣಯ್ಯಗೌಡ ಅವರ ಪುತ್ರ ಡಿ.ಎ.ಉದಯ(55) ಎಂಬುವರಿಗೆ ಹೃದಯಾಘಾತವಾಗಿದೆ. ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದಾಗ ಭಾರತ ಸೋತ ಹತ್ತು ನಿಮಿಷದಲ್ಲೇ ಹೃದಯಾಘಾತವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ