ಶಿವಮೊಗ್ಗ :  ಆರೈಕೆ ಇಲ್ಲ.. ಅನ್ಯ ಕೋಮಿನ ಯುವಕನ ಮದುವೆ... ಮಗುವಿಗೆ ಜನ್ಮ ನೀಡಿ ಸಾವು

Published : Mar 17, 2022, 01:55 AM ISTUpdated : Mar 17, 2022, 01:57 AM IST
ಶಿವಮೊಗ್ಗ :  ಆರೈಕೆ ಇಲ್ಲ.. ಅನ್ಯ ಕೋಮಿನ ಯುವಕನ ಮದುವೆ... ಮಗುವಿಗೆ ಜನ್ಮ ನೀಡಿ ಸಾವು

ಸಾರಾಂಶ

* ಅನ್ಯ ಧರ್ಮೀಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಯುವತಿ ಹೆರಿಗೆ ನಂತರ ಸಾವು *  ಹೆರಿಗೆಗೆ ಬಂದ ಯುವತಿಯನ್ನ ಚೆನ್ನಾಗಿ ನೋಡಿಕೊಳ್ಳದ ಹಿನ್ನಲೆ  * ಐದು ದಿನದ ಮಗುವಿಗೆ ಜನ್ಮ ನೀಡಿದ ವಿವಾಹಿತ ಮಹಿಳೆ ಸಾವು * ಯುವತಿಯ ಕುಟುಂಬ ಸೊರಬ ಠಾಣೆಗೆ ದೂರು ನೀಡಿದೆ

ಶಿವಮೊಗ್ಗ(ಮಾ. 17)  ಅನ್ಯ ಕೋಮಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದವಳು ದುರಂತ ಅಂತ್ಯ ಕಂಡಿದ್ದಾಳೆ. ಹೆರಿಗೆಯಾದ ಐದೇ ದಿನಕ್ಕೆ ಸಾವಿನ ಮನೆ  (Death) ಸೇರಿದ್ದಾಳೆ. 

ಪರಸ್ಪರ ಪ್ರೀತಿಸಿ (Love) ಅಂತರ್ ಧರ್ಮೀಯ ವಿವಾಹವಾಗಿದ್ದ ಗೃಹಿಣಿಯೋರ್ವಳು ಶಿವಮೊಗ್ಗ ಸೊರಬದಲ್ಲಿ ಹೆರಿಗೆಯಾದ ಐದೇ ದಿನದಲ್ಲಿ ಮೃತಪಟ್ಟಿದ್ದಾಳೆ.  ಭೂಮಿಕಾ ಅಲಿಯಾಸ್ ಮುಸ್ಕಾನ್  ಭಾನು(19)  ದುರಂತ ಅಂತ್ಯ ಕಂಡಿದ್ದಾಳೆ. ಭೂಮಿಕಾ ಸಾವಿಗೆ ಲವ್ ಜಿಹಾದ್ (Love Jihad)ಕಾರಣ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. 

2 ವರ್ಷದ ಹಿಂದೆ ಆಯನೂರಿನಿಂದ ಸೊರಬದಲ್ಲಿರುವ (Soraba) ಅಜ್ಜಿ ಮನೆಗೆ ಯುವತಿ ತೆರಳಿದ್ದಳು.  ದ್ವಿತೀಯ ಪಿಯುಸಿ ಓದುತ್ತಿದ್ದ ವೇಳೆ ಸಮೀರ್ ಜತೆ ಪ್ರೀತಿಗೆ ಬಿದ್ದಿದ್ದಾಳೆ. ಇಬ್ಬರು ಮದುವೆಯಾಗಿದ್ದು  ಭೂಮಿಕಾಳ ಹೆಸರನ್ನು ಮುಸ್ಕಾನ್ ಭಾನು ಎಂದು ಬದಲಾಯಿಸಲಾಗಿದೆ.

Love Jihad: ಹೆಣ್ಣು ಮಕ್ಕಳನ್ನು ಗರ್ಭದಲ್ಲೇ ಕೊಂದು ಹಾಕಿ: ನೂತನ ನಾಯಕನ ಪ್ರಚೋದನಕಾರಿ ಭಾಷಣ!

ವೆಲ್ಡಿಂಗ್ ಕೆಲಸ ಮಾಡಿ ಕೊಂಡಿದ್ದ ಸಮೀರ್ ಗರ್ಭಿಣಿಯಾದ ಮುಸ್ಕಾನ್ ಭಾನುವನ್ನ ಚೆನ್ನಾಗಿ ನೋಡಿಕೊಂಡಿಲ್ಲದ ಕಾರಣ ಅಕೆ ಸಾವನ್ನಪ್ಪಿರುವುದಾಗಿ ಕುಟುಂಬ ಆರೋಪಿಸಿದೆ.  ಮುಸ್ಕಾನ್ ಬಾನು ಸಮೀರ್ ಜೊತೆಗಿನ ಮದುವೆ ರಿಜಿಸ್ಟಾರ್‌ ಮಾಡಿಸಲು ಮುಂದಾದ ಮುಸ್ಕಾನ್ ಬಾನು ಯಾನೆ ಭೂಮಿಕಳ  ಕುಟುಂಬ ಪ್ರಯತ್ನ ಮಾಡಿದರೂ ಅದು ಕೊನೆಗೂ ಸಾಧ್ಯವಾಗಿಲ್ಲ.

ಭೂಮಿಕಳನ್ನ ಡೆಲಿವರಿ ಮರುದಿನವೇ ಮಣಿಪಾಲಿಗೆ ಸೇರಿಸಲಾಗಿದ್ದು ಅಲ್ಲಿ ಅಸ್ವಸ್ಥಳಾಗಿದ್ದಾಳೆ. ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಭೂಮಿಕಾಳ ಮನೆಯವರಿಗೆ ಅಂತರ್ಜಾತಿಯ ಕಾರಣ ಮುಟ್ಟಲೂ ಬಿಟ್ಟಿಲ್ಲ ಎಂದು ಆಕೆಯ ಕುಟುಂಬ ಆರೊಪಿಸಿದೆ . ಭೂಮಿಕಾ ಮೃತಪಟ್ಟಿರುವ ವಿಷಯವನ್ನು ಸಮೀರ್ ಭೂಮಿಕಾ ಕುಟುಂಬಸ್ಥರಿಗೆ ತಿಳಿಸದೇ ಮುಚ್ಚಿಟ್ಟಿದ್ದ ಎಂಬ ಆರೋಪವೂ ಬಂದಿದೆ. 

ಗದಗದಿಂದ ವರದಿಯಾದ ಲವ್ ಜಿಹಾದ್ ಪ್ರಕರಣ:  ನನ್ನ ಮದುವೆ ಹಿಂದೆ ‘ಲವ್‌ ಜಿಹಾದ್‌’ ಉದ್ದೇಶ ಅಡಗಿತ್ತು. ಅತ್ಯಾಚಾರದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ ಮದುವೆಯಾದ. ಬುರ್ಕಾ, ಹಿಜಾಬ್‌ ಹಾಕಬೇಕು, ಮಾಂಸ ತಿನ್ನಬೇಕು, ನಮಾಜ್‌ ಮಾಡುವಂತೆ ಒತ್ತಾಯಿಸುತ್ತಿದ್ದ ಎಂದು ಪತಿ ಇಜಾಜ್‌ನಿಂದ 23 ಬಾರಿ ಮಚ್ಚಿನಿಂದ ಹಲ್ಲೆಗೆ ಒಳಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವ ಪುರಾಣಿಕ್‌ ಅಲಿಯಾಸ್‌ ಅರ್ಫಾಬಾನು ತನ್ನ ಗಂಡನ ವಿರುದ್ಧ  ಗಂಭೀರ ಆರೋಪ ಮಾಡಿದ್ದರು.

ಕಾಲೇಜಿಗೆ ಆಗಾಗ ಇಜಾಜ್‌ ಆಟೋದಲ್ಲಿ ಹೋಗುತ್ತಿದ್ದೆ. ಒಂದು ದಿನ ಆತ ನನ್ನ ಮೇಲೆ ಅತ್ಯಾಚಾರ ಎಸಗಿದ. ಅದನ್ನು ವಿಡಿಯೋ ಮಾಡಿಟ್ಟುಕೊಂಡು ತಾಯಿ, ಕುಟುಂಬಸ್ಥರಿಗೆ ವಿಡಿಯೋ ತೋರಿಸುವುದಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದ. ಅನಿವಾರ್ಯವಾಗಿ ಮದುವೆಯಾದೆ. ಆ ಬಳಿಕ ತನ್ನ ಮತ್ತೊಂದು ಮುಖ ತೋರಿಸಲು ಆರಂಭಿಸಿದ. ಮತಾಂತರ ಮಾಡಿಸಿದ, ಆತನ ಜನರಿರುವ ಓಣಿಗೆ ಕರೆದೊಯ್ದು ಅವರ ಸಂಸ್ಕೃತಿ ಪಾಲಿಸುವಂತೆ, ಮಾಂಸ ಸೇವಿಸುವಂತೆ, ಬುರ್ಕಾ, ಹಿಜಾಬ್‌ ಧರಿಸುವಂತೆ ಒತ್ತಾಯಿಸುತ್ತಿದ್ದ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ