* ಕಾಲೇಜು ಅವ್ಯವಸ್ಥೆ ಮತ್ತು ಕಿರುಕುಳದ ವಿರುದ್ಧ ಮೆಸೇಜ್ ಕಳುಹಿಸಿ ವಿದ್ಯಾರ್ಥಿ ಆತ್ಮಹತ್ಯೆ
* ಮಂಗಳೂರಿನ ಕರಾವಳಿ ಕಾಲೇಜ್ ನ ವಿದ್ಯಾರ್ಥಿ ಭರತ್ ಭಾಸ್ಕರ್(20) ಆತ್ಮಹತ್ಯೆ
* ಮಂಗಳೂರಿನ ಕೊಟ್ಟಾರ ಬಳಿಯ ಪಿಜಿಯಲ್ಲಿ ನೇಣಿಗೆ ಶರಣು
* ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿ ಭರತ್
ಮಂಗಳೂರು/ ಬೆಂಗಳೂರು(ಮಾ. 15) ಕಾಲೇಜು ಅವ್ಯವಸ್ಥೆ ಮತ್ತು ಕಿರುಕುಳದ ವಿರುದ್ದ ಮೆಸೇಜ್ ಕಳುಹಿಸಿ ವಿದ್ಯಾರ್ಥಿ (Student) ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಮಂಗಳೂರಿನ ಕರಾವಳಿ ಕಾಲೇಜ್ ನ ವಿದ್ಯಾರ್ಥಿ ಭರತ್ ಭಾಸ್ಕರ್(20) ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಾಲೇಜು ಅವ್ಯವಸ್ಥೆ ಮತ್ತು ಕಿರುಕುಳದ ವಿರುದ್ದ ವಿದ್ಯಾರ್ಥಿ ತನ್ನ ತಾಯಿಗೆ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರಿನ ಕರಾವಳಿ ಕಾಲೇಜ್ ನ ವಿದ್ಯಾರ್ಥಿ ಭರತ್ ಭಾಸ್ಕರ್(20) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮಂಗಳೂರಿನ ಕೊಟ್ಟಾರ ಬಳಿಯ ಪಿಜಿಯಲ್ಲಿ ನೇಣಿಗೆ ಶರಣಾಗಿದ್ದು, ಮೂಲತಃ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಿವಾಸಿ ಎಂದು ತಿಳಿದು ಬಂದಿದೆ. ಮೃತ ಭರತ್ ತನ್ನ ತಾಯಿ ಶೋಭಾರಾಣಿಗೆ ವಾಟ್ಸಪ್ ಮೆಸೇಜ್ ಕಳುಹಿಸಿದ್ದು, "ಕಾಲೇಜು ಸರಿ ಇಲ್ಲ, ಸರಿಯಾದ ಪ್ರಾಧ್ಯಾಪಕರಿಲ್ಲ, ಇಲ್ಲಿ ಬದುಕಲು ಸಾಧ್ಯವಿಲ್ಲ', ಪ್ರಾಜೆಕ್ಟ್ ರಿಪೋರ್ಟ್ ಸರಿ ಇಲ್ಲ ಅಂತ ಪ್ರಾಧ್ಯಾಪಕ ರಾಹುಲ್ ಪರೀಕ್ಷೆ ಕೂರಲು ಬಿಡಲ್ಲ ಅಂದಿದ್ದಾರೆ. ಡೊನೇಶನ್ ಪಡೆದರೂ ಸರಿಯಾದ ಊಟ ಇಲ್ಲ, ಹಾಸ್ಟೆಲ್ ಇಲ್ಲ. ನೀವು ಮತ್ತು ಅಪ್ಪ ಸಾಕಷ್ಟು ಡೊನೇಶನ್ ಕೊಟ್ಟಿದ್ದಾರೆ. ಆದರೆ ಕಾಲೇಜು ಕೇವಲ ಹಣ ಅಷ್ಟೇ ತೆಗೋತಿದೆ. ನೀವು ಸುಮ್ಮನೆ ಹಣ ಕೊಡೋದು ನನಗೆ ಇಷ್ಟವಿಲ್ಲ. ಹಾಗಾಗಿ ಸಾಯುತ್ತಿದ್ದೇನೆ. ನಾನು ಸತ್ತ ಮೇಲೆ ಪೊಲೀಸ್ ದೂರಿನಲ್ಲಿ ಇದನ್ನ ಉಲ್ಲೇಖಿಸಿ ಎಂದು ತಾಯಿಗೆ ಕಳುಹಿಸಿದ ಮೆಸೇಜ್ ನಲ್ಲಿ ತಿಳಿಸಿದ್ದಾನೆ. ಕರಾವಳಿ ಕಾಲೇಜ್ ನಲ್ಲಿ ಭರತ್ ಹೊಟೇಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯಾಗಿದ್ದ.
ಕಾಲೇಜು ಆಡಳಿತದ ವಿರುದ್ದ ಎಫ್ ಐಆರ್!: ಸದ್ಯ ಪೋಷಕರ ದೂರಿನ ಹಿನ್ನೆಲೆಯಲ್ಲಿ ಕಾಲೇಜು ಆಡಳಿತದ ವಿರುದ್ದ ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕರಾವಳಿ ಕಾಲೇಜು ಚೇರ್ ಮೆನ್ ಗಣೇಶ್ ರಾವ್ ಮತ್ತು ಲೆಕ್ಚರರ್ ರಾಹುಲ್ ವಿರುದ್ದ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಸ್ಟೆಲ್ ನಲ್ಲಿ ಊಟೋಪಾಚಾರ ಸರಿ ಇಲ್ಲದೇ ಮಗ ಪಿಜಿಯಲ್ಲಿ ವಾಸವಾಗಿದ್ದ. ಮನೆಗೆ ಬಂದಾಗಲೆಲ್ಲಾ ಕಾಲೇಜು ಸರಿ ಇಲ್ಲ ಎನ್ನುತ್ತಿದ್ದ. ಅಲ್ಲಿನ ಲೆಕ್ಚರರ್ ರಾಹುಲ್ ಮನಸ್ಸಿಗೆ ನೋವಾಗುವಂತೆ ಅವಮಾನ ಮಾಡುವುದು ಹಾಗೂ ಪೋಷಕರು ಕರೆ ಮಾಡಿದಾಗಲೂ ದರ್ಪದಿಂದ ಮಾತನಾಡುತ್ತಿದ್ದ. ಹೀಗೆ ಕಾಲೇಜು ಕಿರುಕುಳದಿಂದ ಬೇಸತ್ತು ಮಗ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಸಾವಿಗೆ ಕಾರಣವಾದ ಪ್ರಾಧ್ಯಾಪಕ ರಾಹುಲ್ ಮತ್ತು ಸರಿಯಾದ ಶಿಕ್ಷಣ ನೀಡದೇ ಹಣವನ್ನು ಡೊನೇಶನ್ ರೂಪದಲ್ಲಿ ಪಡೆಯುವ ಕರಾವಳಿ ಕಾಲೇಜು ಚೇರ್ ಮ್ಯಾನ್ ಗಣೇಶ್ ರಾವ್ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮೃತ ವಿದ್ಯಾರ್ಥಿ ಭರತ್ ತಂದೆ ಭಾಸ್ಕರ್ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Man Commits Suicide ರಾಯಚೂರಿನಲ್ಲಿ ವಿಲಕ್ಷಣ ಘಟನೆ, ಮರ್ಮಾಂಗ ಕತ್ತರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ
ಅಪಮಾನ ತಾಳಲಾರದೆ ಆತ್ಮಹತ್ಯೆ: ಪರೀಕ್ಷೆಯಲ್ಲಿ ಕಾಪಿ ಹೊಡೆಯುವಾಗ ಸಿಕ್ಕಿ ಬಿದ್ದು ಕಾಲೇಜಿನಿಂದ ಡಿಬಾರ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಐದು ಅಂತಸ್ತಿನ ಪಿ.ಜಿ. ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಜೀವನ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಪ್ರಕರಣ ವರದಿಯಾಗಿತ್ತು.
ಮುರುಗೇಶ್‌ಪಾಳ್ಯದ ಭವ್ಯಾ(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಭವ್ಯಾ ಶುಕ್ರವಾರ ಪ್ರಥಮ ಸೆಮಿಸ್ಟರ್ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದರು. ಕಾಲೇಜಿನಿಂದ ವಾಪಸು ಬಂದ ಆಕೆ ಸಂಜೆ 4.30ರ ಸುಮಾರಿಗೆ ಅಮರಜ್ಯೋತಿ ಬಡಾವಣೆಯಲ್ಲಿ ಐದು ಅಂತಸ್ತಿನ ಪಿ.ಜಿ. ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಭವ್ಯಾ ಆತ್ಮಹತ್ಯೆಗೂ ಮುನ್ನ ಸಹೋದರಿ ದಿವ್ಯಾ ಹಾಗೂ ತಂದೆ ಮೊಬೈಲ್‌ಗೆ ಕರೆ ಮಾಡಿ, ಪರೀಕ್ಷೆ ಬರೆಯುವಾಗ ನಕಲು ಮಾಡಿ ಸಿಕ್ಕಿಬಿದ್ದಿದ್ದು ಕಾಲೇಜಿನಿಂದ ಡಿಬಾರ್ ಆಗಿದ್ದು ಮನಸಿಗೆ ನೋವಾಗಿದೆ. ನಾನು ಬದುಕುವುದಿಲ್ಲ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾಳೆ. ಬಳಿಕ ತಂದೆ ಹಾಗೂ ಸಹೋದರಿ ಹತ್ತಾರು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ನಂತರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರೈತ ಆತ್ಮಹತ್ಯೆ: ಸಾಲದ ಕಂತು ತುಂಬಲಾರದೆ ತಾಳಲಾರದೇ ತಾಲೂಕಿನ ಗಬ್ಬಳ್ಳಿ ಗ್ರಾಮದ ರೈತ ಸಂಜಯ್ (30) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಸಂಜಯ್ ಅವರು ಬ್ಯಾಂಕ್ ಹಾಗೂ ಕೈ ಸಾಲ ಮಾಡಿಕೊಂಡಿದ್ದರು. ಸಾಲಭಾದೆ ತಾಳಲಾರದೇ ಗಬ್ಬಳ್ಳಿ ಗ್ರಾಮದ ತನ್ನ ಮನೆಯಲ್ಲಿದ್ದ ಕೊಳೆನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದ ಕೂಡಲೇ ಮನೆಯವರು ಹಾಸನ ಆಸ್ಪತ್ರೆಯಲ್ಲಿ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ.