ಗ್ರಾ.ಪಂ. ಸದಸ್ಯನ ಕಿಡ್ನ್ಯಾಪ್ ಕೇಸ್ :ಅಮೃತೂರು ಪೊಲೀಸರಿಂದ ಮೂವರ ಬಂಧನ

By Anusha Kb  |  First Published Oct 18, 2022, 7:32 PM IST

ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮತ ಚಲಾಯಿಸಲು ಮುಂದಾಗಿದ್ದ  ಸದಸ್ಯನನ್ನು ಅಪಹರಣ ಮಾಡಿದ್ದ ಮೂವರು ಖದೀಮರನ್ನು ಅಮೃತೂರು ಪೊಲೀಸರು ಬಂಧಿಸಿದ್ದಾರೆ.


ವರದಿ:ಮಹಂತೇಶ್ ಕುಮಾರ್,ಏಷ್ಯಾನೆಟ್ ಸುವರ್ಣ ನ್ಯೂಸ್

ತುಮಕೂರು : ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮತ ಚಲಾಯಿಸಲು ಮುಂದಾಗಿದ್ದ  ಸದಸ್ಯನನ್ನು ಅಪಹರಣ ಮಾಡಿದ್ದ ಮೂವರು ಖದೀಮರನ್ನು ಅಮೃತೂರು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಹುಲಿಯೂರು ದುರ್ಗ ಸಮೀಪದ ಚಲಮಸಂದ್ರ ಗ್ರಾಮದ ನಿವಾಸಿಗಳಾದ ಕುಮಾರ್‌, ಮಧು, ಸುದೀಪ್‌ ಬಂಧಿತರು. 

Tap to resize

Latest Videos

ಈ ಮೂವರು ನಿಡಸಾಲೆ ಪಂಚಾಯ್ತಿ ಸದಸ್ಯ ಮಂಜುನಾಥ್‌ (Manjunath) ಅವರನ್ನು ಕಾರಿನಲ್ಲಿ ಹೊತ್ತೊಯ್ದಿದ್ದರು. ಸಿನಿಮೀಯ ರೀತಿಯ ಕಿಡ್ನ್ಯಾಪ್‌ ಪ್ರಸಂಗ  ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ (CCTV) ಸೆರೆಯಾಗಿತ್ತು. ಜೊತೆಗೆ ಅಮೃತೂರು ಪೊಲೀಸ್‌ ಠಾಣೆಯಲ್ಲಿ (Amrittur police station) ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಖದೀಮರಿಗಾಗಿ ಬಲೆ ಬೀಸಿದ್ದು, ಈಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

Tumakuru; ಗ್ರಾಮ ಪಂಚಾಯ್ತಿ ಅಧ್ಯಕ್ಷ ಪಟ್ಟಕ್ಕಾಗಿ ಸದಸ್ಯನ ಕಿಡ್ನ್ಯಾಪ್!

ಪ್ರಕರಣದ ಹಿನ್ನೆಲೆ

ತುಮಕೂರು (Tumkur) ಜಿಲ್ಲೆ ಕುಣಿಗಲ್‌ (Kunigal) ತಾಲೂಕಿನ ನಿಡಸಾಲೆ ಗ್ರಾಮ ಪಂಚಾಯ್ತಿಯ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕೆಲ ಸದಸ್ಯರು ಮುಂದಾಗಿದ್ದರು. 14 ಜನ ಸದಸ್ಯರ ಬಲವುಳ್ಳ ಪಂಚಾಯ್ತಿಯಲ್ಲಿ 10 ಸದಸ್ಯರು ಅಧ್ಯಕ್ಷರ ವಿರುದ್ಧ ಮತ ಚಲಾಯಿಸಲು ನಿರ್ಣಯ ಕೈಗೊಂಡಿದ್ದರು. ಈ ಸಂಬಂಧ ಸದಸ್ಯರೆಲ್ಲರೂ ಪ್ರವಾಸಕ್ಕೆ ತೆರಳಿ, ಅ.11ರಂದು ವಾಪಸ್‌ ಗ್ರಾಮಕ್ಕೆ ಮರಳುತ್ತಿದ್ದರು. ಪ್ರವಾಸಕ್ಕೆ ಹೋಗಿದ್ದ ಎಲ್ಲಾ ಸದಸ್ಯರು ಯಡಿಯೂರು (Yadiyuru) ಸಮೀಪದ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದರು, ಈ ವೇಳೆ ಕೆಂಪು ಕಾರಿನಲ್ಲಿ ಬಂದ ಖದೀಮರು ಸದಸ್ಯ ಮಂಜುನಾಥ್‌ ಅವರನ್ನು ಬಲವಂತವಾಗಿ ಅಪಹರಿಸಿದ್ದರು. ಅವರ ಈ ಅಪಹರಣ ಕೃತ್ಯ ಸಿಸಿಟಿವಿಯಲ್ಲಿ (CCTV) ಸೆರೆಯಾಗಿತ್ತು. ಬಳಿಕ ಅಮೃತೂರು ಪೊಲೀಸರು ಕಿಡ್ನ್ಯಾಪ್‌ ಪ್ರಕರಣ ದಾಲಿಸಿಕೊಂಡು ಇದೀಗ ಮೂವರನ್ನು‌ ಬಂಧಿಸಿದ್ದಾರೆ.
Bengaluru: ಫಿಲ್ಮ್‌ ಸ್ಟೈಲಲ್ಲಿ ಬಾಲಕನ ಅಪಹರಿಸಿ ಹಣ ಸುಲಿದ ವಿದ್ಯಾರ್ಥಿ!

click me!