ಮಧ್ಯ ಪ್ರದೇಶದಲ್ಲಿ ವೈಫ್ ಸ್ವಾಪಿಂಗ್ ಪ್ರಕರಣವೊಂದು ದಾಖಲಾಗಿದೆ. ಪತಿ ತನಗೆ ಈ ಆಟದಲ್ಲಿ ಭಾಗಿಯಾಗಲು ಒತ್ತಾಯಿಸುತ್ತಿದ್ದಾರೆ ಹಾಗೂ ಅವರು ಹಾಗೂ ಅವರ ಮನೆಯವರು ವರದಕ್ಷಿಣೆ ಕಿರುಕುಳ ಮಾಡುತ್ತಿದ್ದಾರೆ ಎಂದೂ ಪತ್ನಿ ಆರೋಪಿಸಿದ್ದಾರೆ.
ಈಗಿನ ಕಾಲದ ಯುವತಿಯರು ಅಥವಾ ಮಹಿಳೆಯರು ಹೆಚ್ಚು ಮಾರ್ಡನ್ ಆಗಿದ್ದಾರೆಂಬುದು ಬಹುತೇಕರ ದೂರು. ಆದರೆ, ನಾವು ಹೇಳಲು ಹೊರಟಿರುವ ಈ ಸ್ಟೋರಿ ವಿಭಿನ್ನವಾಗಿದೆ. ಮಹಿಳೆ ಹೆಚ್ಚು ಮಾಡರ್ನ್ ಆಗಿಲ್ಲವೆಂದು ಅವರ ಪತಿ ಹಾಗೂ ಅವರ ಮನೆಯವರು ಆಕೆಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ತನ್ನ ಪತಿ ಹಾಗೂ ಆತನ ತಾಯಿ ಹಾಗೂ ಅಕ್ಕ 50 ಲಕ್ಷ ರೂ. ವರದಕ್ಷಿಣೆ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ತನ್ನ ದೂರುಗಳಿಗೆ ಅವರು ಕ್ಯಾರೇ ಎನ್ನುವುದಿಲ್ಲ ಎಂದೂ ಹೇಳಿದ್ದಾರೆಂದು ದೂರು ನೀಡಲಾಗಿದೆ. ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಇಷ್ಟೇ ಅಲ್ಲ, 'wife swap' ಅಂದರೆ ಪತ್ನಿಯನ್ನು ಅದಲು ಬದಲು ಮಾಡಿಕೊಳ್ಳುವ ಗೇಮ್ ಆಡಲು ಒಪ್ಪದಿದ್ದಕ್ಕೆ ಪತ್ನಿಗೆ ಪತಿ ಕಿರುಕುಳ ನೀಡಿದ್ದಾರೆ ಎಂದೂ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಾಜಸ್ಥಾನದ ಬಿಕನೇರ್‌ನ ಹೋಟೆಲ್ ರೂಮೊಂದರಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಮಧ್ಯ ಪ್ರದೇಶದ ಭೋಪಾಲ್‌ನಲ್ಲಿ ಕೇಸ್ ದಾಖಲಾಗಿದೆ. ಇನ್ನು, ಬಿಕನೇರ್‌ನ 5 ಸ್ಟಾರ್ ಹೋಟೆಲ್‌ವೊಂದರಲ್ಲಿ ಪತಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಎಂದೂ ದೂರಿನಲ್ಲಿ ತಿಳಿಸಲಾಗಿದೆ.
ಇದನ್ನು ಓದಿ: ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು: ನೇಣಿಗೆ ಶರಣಾದ ತಾಯಿ ಜೈಲು ಸೇರಿದ ಅಪ್ಪ
ಘಟನೆಯ ವಿವರ:
ಅಮ್ಮರ್ (ಪತಿ) ತನ್ನನ್ನು ಹೋಟೆಲ್ ರೂಮಿನಲ್ಲಿ ಲಾಕ್ ಮಾಡಿದ್ದರು ಹಾಗೂ ತನ್ನ ಫೋನನ್ನು ಕಿತ್ತುಕೊಂಡಿದ್ದರು. ಹಾಗೂ 2 ದಿನಗಳ ಬಳಿಕ ಅಮ್ಮರ್ ಅಮಲಿನ ಸ್ಥಿತಿಯಲ್ಲಿ ಬಿಕನೇರ್ ರೂಮಿಗೆ ಬಂದರು. ಮದ್ಯಪಾನ ಸೇವಿಸುವುದು, ಡ್ರಗ್ಸ್ ತೆಗೆದುಕೊಳ್ಳುವುದು, ಇತರೆ ಯುವತಿಯರೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಹಾಗೂ ಯುವಕರೊಂದಿಗೆ ಲೈಂಗಿಕ ಸಂಬಂಧ ಹೊಂದುವುದು ಸಹ ಆತನಿಗೆ ಸಾಮನ್ಯವಾಗಿತ್ತು ಎಂದೂ ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಅಲ್ಲದೆ, ವೈಫ್ ಸ್ವಾಪ್ ಅಥವಾ ಪತ್ನಿ ಅದಲು ಬದಲು ಗೇಮ್‌ನಲ್ಲಿ ಭಾಗವಹಿಸಲು ಪತಿ ತನ್ನನ್ನು ಕೇಳುತ್ತಿದ್ದರು. ಈ ಆಟದಲ್ಲಿ ಭಾಗವಹಿಸಲು ನಾನು ನಿರಾಕರಿಸಿದ್ದಕ್ಕೆ ಆತ ನನ್ನ ಮೇಲೆ ಕಿರುಕುಳ ನೀಡಿದ. ನನಗೆ ಸಂಸ್ಕೃತಿ ಇಲ್ಲ ಎಂದು ಹೇಳಿದ ಹಾಗೂ ತನ್ನೊಂದಿಗೆ ಅಸ್ವಾಭಾವಿಕ ಲೈಂಗಿಕತೆ ನಡೆಸಿದ ಎಂದೂ ಕಿರುಕುಳಕ್ಕೊಳಗಾದ ಮಹಿಳೆ ತಿಳಿಸಿದ್ದಾರೆ. ಹಾಗೂ, ತನ್ನ ಮೇಲೆ ಪತಿ ಹಲ್ಲೆ ನಡೆಸಿದ್ದು ಈ ವೇಳೆ ಗಾಯಗಳಾದರೂ ನಾನು ಪತ್ನಿ ಅದಲು ಬದಲು ಆಟದಲ್ಲಿ ಭಾಗಿಯಾಗಲಿಲ್ಲ ಎಂದೂ ದೂರಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಇವಳನ್ನ ಮನೆಗ್ ಕರ್ಕೊಂಡ್ ಹೋಗಿ: 8 ತಿಂಗಳ ಗರ್ಭಿಣಿ ಕೊಂದು ಅತ್ತೆಗೆ ಪತಿ ಫೋನ್
ಇನ್ನು, ತನ್ನ ಪತಿ, ಆತನ ತಾಯಿ ಹಾಗೂ ಅಕ್ಕ 50 ಲಕ್ಷ ರೂ. ವರದಕ್ಷಿಣೆಗಾಗಿ ಒತ್ತಾಯಿಸಿದರು ಎಂದೂ ಸಂತ್ರಸ್ಥೆ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ತನ್ನ ದೂರುಗಳಿಗೆ ಪತಿಯ ಮನೆಯವರು ಕ್ಯಾರೇ ಎನ್ನುತ್ತಿರಲಿಲ್ಲ ಹಾಗೂ ತಾನು ಮಾಡರ್ನ್ ಆಗಿಲ್ಲ ಎಂದು ತನ್ನನ್ನೇ ಬೈಯ್ಯುತ್ತಿದ್ದರು ಎಂದೂ ತಿಳಿಸಿದ್ದಾರೆ. ಹಲವು ತಿಂಗಳುಗಳಿಂದ ತನ್ನ ಮೇಲೆ ಕಿರುಕುಳ ನಡೆಯುತ್ತಿದ್ದು, ಇದರಿಂದ ತನ್ನ ಆರೋಗ್ಯದ ಸ್ಥಿತಿಯೂ ಹದಗೆಟ್ಟಿದೆ ಎಂದೂ ಹೇಳಿದ್ದಾರೆ.
ಮಹಿಳೆಯ ಸಂಬಂಧಿಕರು ಆಕೆಯನ್ನು ತವರು ಮನೆಗೆ ಕರೆದುಕೊಂಡು ಹೋದ ಬಳಿಕ ಆಕೆ ದೂರು ನೀಡಿದ್ದಾರೆ ಎಂದೂ ತಿಳಿದುಬಂದಿದೆ. ಈ ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಮಹಿಳಾ ಪೊಲೀಸ್ ಠಾಣೆಯ ಇನ್ಚಾರ್ಜ್ ಅಂಜನಾ ಧುರ್ವೆ, ಆಕೆಯ ಪತಿ, ತಾಯಿ ಹಾಗೂ ಅಕ್ಕನ ವಿರುದ್ಧ ಹಲವು ಸೆಕ್ಷನ್‌ಗಳಡಿ ದೂರು ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದೂ ಮಾದ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ವರದಕ್ಷಿಣೆಗಾಗಿ ವಿಕೃತಿ, ಪತ್ನಿಯ ತಲೆಮೇಲೆ ಮೂತ್ರ ವಿಸರ್ಜಿಸಿ ಕಿರುಕುಳ!