* ಶಿವಮೊಗ್ಗ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಕೇಸ್
* ಶಿವಮೊಗ್ಗ ಹರ್ಷ ಕೊಲೆ ಹಿಂದಿನ ಕಾರಣ ಬಹಿರಂಗ
* NIA ವರದಿಯಲ್ಲಿವೆ ಸ್ಫೋಟಕ ಅಂಶಗಳು
ವರದಿ: ಪ್ರದೀಪ್ ಕಗ್ಗೆ
ಶಿವಮೊಗ್ಗ, (ಏ.02): ಕರ್ನಾಟಕದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಕೇಸ್ (Harsha Murder Case) ಇದೀಗ ರಾಷ್ಟ್ರೀಯ ತನಿಖಾ ದಳದ ಕೈ ಸೇರಿದ್ದು, ಎಫ್ ಐ ಆರ್ ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸಿದೆ. NIA ದಾಖಲಿಸಿಕೊಂಡ ಎಫ್‌ಐಆರ್‌ನಲ್ಲಿ ಸ್ಪೋಟಕ ಅಂಶಗಳು ದಾಖಲಾಗಿದೆ. .
ಈ ನಡುವೆ ಯುವತಿಯೊಬ್ಬಳ ವಿಚಾರಕ್ಕೂ ಕೊಲೆಯಾಗಿದೆ ಅಂತಾ ಕೂಡ ಗಾಸಿಪ್ ಎದ್ದಿದ್ವು.. ಆದ್ರೆ ಎನ್ಐಎ ದಾಖಲಿಸಿರೋ ಎಫ್ಐಆರ್ ನಲ್ಲಿ ಇದ್ಯಾವ ಅಂಶವೂ ಉಲ್ಲೇಖ ಆಗಿಲ್ಲ.. ಬದಲಾಗಿ ಶಾಕಿಂಗ್ ವಿಚಾರವೊಂದು ರಾಷ್ಟ್ರೀಯ ತನಿಖಾದಳ ಫಸ್ಟ್ ಇನ್ವೆಷ್ಟಿಗೇಷನ್ ರಿಪೋರ್ಟ್‌ನಲ್ಲಿ ಉಲ್ಲೇಖಿಸಿದೆ.
ಶಿವಮೊಗ್ಗದಲ್ಲಿ ಇತ್ತೀಚೆಗೆ ಬಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ -NIA) ತನ್ನ ಪ್ರಾಥಮಿಕ ವರದಿಯಲ್ಲಿ ಹರ್ಷ ಕೊಲೆ ಹಿಂದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ಅಡಗಿತ್ತು. ಕೋಮುಗಲಭೆ (Communal Violence) ಎಬ್ಬಿಸುವ ಉದ್ದೇಶವಿತ್ತು ಎಂಬ ಆತಂಕಕಾರಿ ಅಂಶ ಬಹಿರಂಗವಾಗಿದೆ.
ಹತ್ಯೆಯಾದ ಹರ್ಷ ಮನೆಗೆ ಬಿಎಸ್ವೈ ಭೇಟಿ: 25 ಲಕ್ಷ ರೂ. ಪರಿಹಾರ ವಿತರಣೆ
ಹರ್ಷ ಕೊಲೆ ಪ್ರಕರಣದಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸಮಾಜಯದಲ್ಲಿ ಭಯ ಹುಟ್ಟಿಸುವ ಉದ್ದೇಶವಿತ್ತು. ಸಮಾಜದ ಸ್ವಾಸ್ಥ್ಯ ಹಾಳು ಮಾಡಿ, ಕೋಮುಗಲಭೆ ಸೃಷ್ಟಿಸುವುದು, ಮಾರಕಾಸ್ತ್ರವನ್ನು ಝಳಪಿಸಿ ಜನರಲ್ಲಿ ಭಯ ಹುಟ್ಟಿಸುವ ಉದ್ದೇಶವಿತ್ತು ಎಂಬ ಆಘಾತಕಾರಿ ಅಂಶಗಳು ಎನ್‌ಐಎ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಗೊಂಡಿದೆ . NIA ದಾಖಲಿಸಿರುವ ಎಫ್ಐಆರ್ ಮತ್ತು ದೂರುದಾರರ ದೂರಿನ ಪ್ರತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ರಾಷ್ಟ್ರೀಯ ತನಿಖಾ ದಳದ ಎಫ್ಐಆರ್ ನಲ್ಲಿ ಈ ಮಹತ್ವದ ಅಂಶಗಳೆಲ್ಲಾ ಅಡಕವಾಗಿವೆ.
ಈ ಹಿಂದೆ ಹರ್ಷನ ಕೊಲೆಗೆ ಹಲವು ಕಾರಣಗಳು ಕೇಳಿ ಬಂದಿದ್ವು.. ಆದ್ರೆ ಎನ್ಐಎ ಎಫ್ಐ ಆರ್ ನಲ್ಲಿ ಉಲ್ಲೇಖ ಮಾಡಿರೋ ಅಂಶಗಳು ಮಾತ್ರ ಬೇರೆಯೇ ಹೇಳುತ್ವೆ.. ಫೆಬ್ರುವರಿ 20ರಂದು ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೊಲೆ ಆರೋಪಿಗಳನ್ನ ಬಂಧಿಸಿದ್ದ ಶಿವಮೊಗ್ಗ ಪೊಲೀಸರಿಂದ ಹಲವು ಮಾಹಿತಿಗಳು ಹೊರ ಬಿದ್ದಿದ್ವು.. ಆರೋಪಿಗಳ ಮತ್ತು ಹರ್ಷನ ಜಗಳದಿಂದ ಕೊಲೆಯಾಯ್ತು ಅಂತಾ ಕೆಲವರು ಅಂದಿದ್ರೆ ಸಾಮಾಜಿಕ ಜಾಲತಾಣದ ಪೋಸ್ಟ್ ನಿಂದ ಕೊಲೆಯಾಗಿದೆ ಅಂತಾ ಮತ್ತೆ ಕೆಲವರು ನುಡಿದಿದ್ರು.
ಇನ್ನೂ ಈ ತನಿಖೆಯ ಮುಂದಿನ ಹಂತದಲ್ಲಿ ಈ ಕೇಸ್ ಸಂಬಂಧ ಏನೆಲ್ಲಾ ವಿಚಾರಗಳು ಹೊರ ಬೀಳುತ್ವೆ ಅನ್ನೋದನ್ನ ಕಾದು ನೋಡಬೇಕಿದೆ..
ಈ ಬಗ್ಗೆ ಶಿವಮೊಗ್ಗ ಎಸ್ಪಿ ಪ್ರತಿಕ್ರಿಯೆ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಪ್ರತಿಕ್ರಿಯಿಸಿದ್ದು, ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಕೊಲೆ ಪ್ರಕರಣದ ತನಿಖೆ ಈಗ ಎನ್‌ಐಎ ನಡೆಸುತ್ತಿದೆ. ಹರ್ಷ ಕೊಲೆ ಪ್ರಕರಣದ ತನಿಖೆಯ ದಾಖಲೆಗಳ ಹಸ್ತಾಂತರವಾಗಿದೆ. ನ್ಯಾಯಾಲಯದ ಮೂಲಕ ಎನ್ಐಎಗೆ ದಾಖಲೆ ಹಸ್ತಾಂತರ ಮಾಡಲಾಗಿದೆ. ಹರ್ಷ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಹರ್ಷ ಕೊಲೆಯ ಮುಂದಿನ ತನಿಖೆ ಎನ್‌ಐಎ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.
ಸಿ.ಟಿ.ರವಿ ಹೇಳಿದ್ದೇನು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿಟಿ ರವಿ ಮಾತನಾಡಿದ್ದು, ಶಿವಮೊಗ್ಗ ಹರ್ಷ ಕೊಲೆ ಹಿಂದೆ ಕೋಮುದಳ್ಳುರಿ ಉದ್ದೇಶವಿದೆ. ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿಲ್ಲ ಎಂದು NIA ಹೇಳಿದೆ. ಕೋಮುಗಲಭೆ ಸೃಷ್ಟಿಸಬೇಕೆಂಬ ಉದ್ದೇಶದಿಂದ ಹತ್ಯೆಗೈದಿದ್ದಾರೆ. ವೈಯಕ್ತಿಕವಾಗಿ ತೆಗೆದುಕೊಂಡ ತೀರ್ಮಾನ ಅಲ್ಲ ಅನಿಸುತ್ತದೆ. ಇದರ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆಯಿದೆ. ಫೈನಾನ್ಸ್ ಮಾಡುವವರು, ಪ್ರಚೋದನೆ ಕೊಟ್ಟವರು ಯಾರು? ಹಣದ ವ್ಯವಸ್ಥೆ ಮಾಡುವವರು ಯಾರೆಂದು ತನಿಖೆ ಆಗಲಿ. ಬೆಂಬಲ ಕೊಡುವವರು ಯಾರೆಂದು ಸಮಗ್ರ ತನಿಖೆಯಾಗಬೇಕು ಎಂದರು.
ಹರ್ಷನಿಗಾಗಲಿ-ಆಪಾದಿತರಿಗಾಗಲಿ ವ್ಯಕ್ತಿಗತ ಜಗಳ ಇಲ್ಲವೆಂದು ಮೇಲ್ನೋಟಕ್ಕೆ ಕಂಡಿತ್ತು. ವೈಯಕ್ತಿಕ ಕಾರಣಗಳಿಂದ ಹರ್ಷ ಕೊಲೆಯಾಗಿಲ್ಲ ಎಂದು ಎನ್.ಐ.ಎ. ದೃಢೀಕರಿಸಿದೆ. ಹಾಗಾಗಿ ನ್ಯಾಯಾಲಯದಲ್ಲಿ ಬೆಂಬಲ ಕೊಡುವವರು ಯಾರು ಎಂಬುದೆಲ್ಲಾ ಸಮಗ್ರ ತನಿಖೆಯಾಗಬೇಕು. ನಿನ್ನೆ ಪರೇಶ್ ಮೇಸ್ತಾ, ಇಂದು ಹರ್ಷ, ನಾಳೆ ಮತ್ತೊಬ್ಬರು ಎಂಬ ಪರಿಸ್ಥಿತಿ ಬರಬಾರದು. ಈ ಹಿನ್ನೆಲೆಯಲ್ಲೇ ಎನ್.ಐ.ಎಗೆ ಕೇಸ್ ವಹಿಸಿರುವುದು, ಸಮಗ್ರ ತನಿಖೆಯಾಗಲಿ. ಇದರ ನೆಟ್ವರ್ಕ್ ನೋಡೋಣ, ರಾಜ್ಯದಲ್ಲೇ ಇದ್ದಾರೋ, ಹೊರರಾಜ್ಯದಲ್ಲಿ ಇದ್ದಾರೋ ಗೊತ್ತಾಗಲಿ ಎಂದು ಎಂದು ಹೇಳಿದರು.