ಜಮೀನಿಗಾಗಿ ಮಾರಾಮಾರಿ, ಅಣ್ತಮ್ಮಂದಿರ ನಡುವೆ ಹುಳಿ ಹಿಂಡಿದ್ರಾ ರಾಜಕೀಯ ಮುಖಂಡರು, ಪೊಲೀಸ್ರು?

By Suvarna News  |  First Published Apr 2, 2022, 5:34 PM IST

* ಜಮೀನಿನ ಇಬ್ಬಾಗ ವಿಚಾರಕ್ಕೆ  ನಡೆದ ಗಲಾಟೆಯ ವಿಡಿಯೋ ಎಲ್ಲೆಡೆ ವೈರಲ್.
* ಅಣ್ಣ ತಮ್ಮಂದಿರ ಮಧ್ಯೆಯೇ ನಡೆದ ಮಾರಾಮಾರಿ
* ಪೊಲೀಸರ ಕುಮ್ಮಕ್ಕಿನಿಂದಲೇ ಗಲಾಟೆ ಶುರುವಾಗಿದೆ ಎಂದು ಆರೋಪ


ವರದಿ : ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ, (ಏ.02): ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಎಂಬಂತೆ,  ಜಮೀನಿನ ಪಾಲು ವಿಭಾಗ ವಿಚಾರಕ್ಕೆ ಅಣ್ಣ ತಮ್ಮಂದಿರಲ್ಲೇ ಮಾರಾಮಾರಿ ಗಲಾಟೆ ನಡೆದಿರೋ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಮೊದ ಮೊದಲು ತಾಯಿ ಗರ್ಭದಿಂದ ಹುಟ್ಟಿದಾಗ ಅಣ್ಣ ತಮ್ಮಂದಿರು ಎಲ್ಲರೂ ಒಟ್ಟಿಗೆ ರಕ್ತ ಹಂಚಿಕೊಂಡು ಭೂಮಿಗೆ ಆಗಮಿಸ್ತಾರೆ. ಆದ್ರೆ ಜಮೀನು, ಆಸ್ತಿ, ಹೀಗೆ ಅನೇಕ ಆಸೆಗಳಿಗೆ ಬಲಿಯಾಗಿ ತಮ್ಮ ಸ್ವಾರ್ಥಕ್ಕಾಗಿ ಸಂಬಂಧಗಳಿಗೆ ಕೊಳ್ಳಿ ಇಟ್ಕೊಳ್ತಾರೆ. ಹೌದು ಇದಕ್ಕೆಲ್ಲಾ ನಿದರ್ಶನವೆಂಬಂತೆ ಜಮೀನಿನ ಇಬ್ಬಾಗದ ವಿಚಾರಕ್ಕೆ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿದೆ. ಅಲ್ಲದೇ ಪೊಲೀಸರ ಎದುರಲ್ಲೇ ಅಟ್ಟಾಡಿಸಿಕೊಂಡು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರೊ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.   ಇದು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ದುಗ್ಗಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ.

Latest Videos

undefined

ಪ್ರೇಮಿಗಳ ಜಗಳದ ಮಧ್ಯೆ ಬಂದು ಯುವತಿಗೆ ಸರಿಯಾಗಿ ಬಾರಿಸಿದ ಸ್ವಿಗ್ಗಿ ಬಾಯ್

ಸೋದರ ಸಂಬಂಧಿಗಳಾಗಿರೋ  ಚಿತ್ತಣ್ಣ ಹಾಗೂ ಕುಂಟಪ್ಪನ ನಡುವೆ ಜಮೀನಿನ ವಿವಾದ ಸೃಷ್ಟಿಯಾಗಿದ್ದೂ, ಸರ್ವೆ ಮಾಡಿಸಿ, ಇಬ್ಬರ ಮಕ್ಕಳಿಗೂ ಸಮವಾಗಿ ಹಂಚುವಂತೆ ತಿಳಿಸಿದ್ರು. ಆದ್ರೆ ಇಂದು ಏಕಾಏಕಿ ದೌರ್ಜನ್ಯದಿಂದ ಜಮೀನಿನಲ್ಲಿ ಉಳುಮೆ ಮಾಡಲು ತೆರಳಿರೋ ಚಿತ್ತಣ್ಣ ಹಾಗು ಬೆಂಬಲಿಗರಾದ ಬಸವರಾಜ್, ಬೆಲ್ಲಣ್ಣ ಜಯ್ಯಣ್ಣ ಮತ್ತು ರೇವಣ್ಣ ಅವರನ್ನು ಜಮೀನು ಸರ್ವೆಯಾಗಿ,ಇಬ್ಬಾಗವಾಗುವವರೆಗೆ ಉಳುಮೆ‌ಮಾಡದಂತೆ ತಡೆದ ಪರಿಣಾಮ ಗಲಬೆ ಶುರುವಾಗಿದೆ‌. ಆಗ ಉಳುಮೆ ಮಾಡಿದಂತೆ ತಡೆದ   ಕವಿತ, ಚಿತ್ರಲಿಂಗಪ್ಪ,ಕುಂಟಪ್ಪನ ಮೇಲೆ  ಚಿತ್ತಣ್ಣ ಮತ್ತು ಆರನ ಬೆಂಬಲಿಗರು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಹಿರಿಯೂರು ಸಿಪಿಐ ರಾಘವೇಂದ್ರ ಜಗಳ ಬಿಡಿಸಲು ಹರಸಾಹಸ ಪಟ್ಟರು ಕೂಡ ಭರ್ಜರಿ ಫೈಟಿಂಗ್ ನಡೆದು ನಾಲ್ವರು ಗಂಭೀರವಾಗಿ ಗಾಯಗೊಂಡು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ‌

ಇನ್ನು ಈ ಜಮೀನಿನ ಇಬ್ಬಾಗ ವಿಚಾರ ನ್ಯಾಯಾಲಯದಲ್ಲಿದ್ದರು ಸಹ ರಾಜಕೀಯ ಪ್ರಭಾವ ಹಾಗೂ ಸ್ಥಳಿಯ ಪೊಲೀಸರ ಕುಮ್ಮಕ್ಕು ಪಡೆದ ಚಿತ್ತಣ್ಣ ಹಾಗು ಆತನ ಬೆಂಬಲಿಗರು, ಮಹಿಳೆಯರು ಹಾಗೂ ವೃದ್ಧರೆನ್ನದೇ‌ ಮನಸೋಇಚ್ಛೆ ನಮ್ಮ‌ ಮೇಲೆ ಹಲ್ಲೆ‌ ನಡೆಸಿದ್ದಾರೆ. ಪೊಲೀಸರು ಕೂಡ ಈ ಹಲ್ಲೆಗೆ ಸಾಥ್ ನೀಡಿದ್ದಾರೆಂದು ಆರೋಪಿಸಿದ್ದು, ಮಾರಾಕಾಸ್ತ್ರಗಳಿಂದ ಬಡಿದಾಡುವ ಗಲಾಟೆ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ‌. 

ಒಟ್ಟಾರೆ ಉಗುರಲ್ಲಿ‌ ಹೋಗುವ ವಿಚಾರಕ್ಕೆ ಕೊಡಲಿ ತೆಗೆದುಕೊಂಡರು ಎಂಬಂತೆ ಕೋರ್ಟ್ ತೀರ್ಪು ಬರುವ ಮುನ್ನವೇ ಜಮೀನಿನಲ್ಲಿ  ಮಾರಾಮಾರಿ‌ ನಡೆಸಿ ಆಸ್ಪತ್ರೆ ಸೇರಿದ್ದಾರೆ. ಇನ್ನಾದ್ರು ಅವಸರದ ಕೈಗೆ ಬುದ್ದಿ ಕೊಟ್ಟು  ಜೀವಹಾನಿಯಾಗುವ ಮುನ್ನ, ಎಚ್ಚೆತ್ತು ನ್ಯಾಯಾಲಯದ ತೀರ್ಪು ಬರುವವರೆಗೆ ತಾಳ್ಮೆಯಿಂದ ಬದುಕಲಿ ಅನ್ನೋದು‌ ಪ್ರಜ್ಞಾವಂತರ ಆಶಯ.

click me!