ಗೋಲ್ಡ್‌ ಮೆಡಲಿಸ್ಟ್‌ ಡಾಕ್ಟರ್‌ಗೆ ಐಸಿಸ್‌ ನಂಟು! ಭಾಷಾ ನಿಪುಣ, 18 ಪುಸ್ತಕಗಳ ಲೇಖಕ ಅರೆಸ್ಟ್

Published : Jul 30, 2023, 07:37 PM IST
ಗೋಲ್ಡ್‌ ಮೆಡಲಿಸ್ಟ್‌ ಡಾಕ್ಟರ್‌ಗೆ ಐಸಿಸ್‌ ನಂಟು! ಭಾಷಾ ನಿಪುಣ, 18 ಪುಸ್ತಕಗಳ ಲೇಖಕ ಅರೆಸ್ಟ್

ಸಾರಾಂಶ

ಜುಲೈ 3 ರಂದು ಮುಂಬೈ, ಥಾಣೆ ಮತ್ತು ಪುಣೆಯಲ್ಲಿ ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ ಎನ್‌ಐಎ ನಾಲ್ವರು ಆರೋಪಿಗಳನ್ನು ಬಂಧಿಸಿತ್ತು. ಅದೇ ಪ್ರಕರಣದಲ್ಲಿ ವೈದ್ಯ ಅದ್ನಾನ್‌ನನ್ನು ಬಂಧಿಸಲಾಗಿದೆ.

ಪುಣೆ (ಜುಲೈ 30, 2023): ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಶಂಕಿತ ಭಯೋತ್ಪಾದಕರೊಂದಿಗೆ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಹಾಗೂ ಐಸಿಸ್‌ನ ಹಿಂಸಾತ್ಮಕ ಉಗ್ರ ಕೃತ್ಯಗಳನ್ನು ಉತ್ತೇಜಿಸುತ್ತಿದ್ದ ಆರೋಪದ ಮೇಲೆ ನಗರದ ಪ್ರಖ್ಯಾತ ಚಿನ್ನದ ಪದಕ ಪುರಸ್ಕೃತ ವೈದ್ಯನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ.

ವೃತ್ತಿಯಲ್ಲಿ ವೈದ್ಯನಾಗಿದ್ದ ಹಾಗೂ ತನ್ನ ವೃತ್ತಿಯೊಂದಿಗೆ ಹೆಸರಾಗಿದ್ದ ಅದ್ನಾನ್‌ ಅಲಿ ಸರ್ಕಾರ್‌ (43) ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರಣೆ ನೀಡಿದ್ದು ದೇಶಾದ್ಯಂತ ಅಚ್ಚರಿಗೆ ಕಾರಣವಾಗಿದೆ.

ಇದನ್ನು ಓದಿ: ಕಾಶ್ಮೀರಲ್ಲಿ ಉಗ್ರ ಚಟುವಟಿಕೆ ಆರಂಭಕ್ಕೆ ಅಲ್‌ ಖೈದಾ ಸಿದ್ಧತೆ; AL QAEDA ಜತೆ ವಿಲೀನಕ್ಕೆ ಪಾಕ್‌ ತಾಲಿಬಾನ್‌ ಸಜ್ಜು!

ಜುಲೈ 3 ರಂದು ಮುಂಬೈ, ಥಾಣೆ ಮತ್ತು ಪುಣೆಯಲ್ಲಿ ಏಕಕಾಲದಲ್ಲಿ ನಡೆಸಿದ ದಾಳಿಯಲ್ಲಿ ಎನ್‌ಐಎ ನಾಲ್ವರು ಆರೋಪಿಗಳನ್ನು ಬಂಧಿಸಿತ್ತು. ಅದೇ ಪ್ರಕರಣದಲ್ಲಿ ವೈದ್ಯ ಅದ್ನಾನ್‌ನನ್ನು ಬಂಧಿಸಲಾಗಿದೆ. ಈ ಎಲ್ಲ ಆರೋಪಿಗಳು ಐಸಿಸ್‌ನ ಭಯೋತ್ಪಾದಕ ಚಟುವಟಿಕೆಗೆ ಸಂಚು ರೂಪಿಸಿದ್ದರು ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ.

ಕೊಂಡ್ವಾದಲ್ಲಿರುವ ಬಂಧಿತ ವೈದ್ಯನ ಮನೆಯಲ್ಲಿ ಶೋಧ ನಡೆಸಿದಾಗ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳು, ಐಸಿಸ್‌ಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಹಲವಾರು ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ನಾಪತ್ತೆಯಾದ 25 ವರ್ಷದ ಯೋಧ: ಕಾರಿನಲ್ಲಿ ರಕ್ತದ ಕಲೆ ಪತ್ತೆ; ಉಗ್ರರಿಂದ ಕಿಡ್ನ್ಯಾಪ್‌?

ಅತೀ ಬುದ್ಧಿವಂತ ವೈದ್ಯ ಬಂಧಿತ
ಐಸಿಸ್‌ ಜಾಲದಲ್ಲಿ ಸೆರೆಯಾಗಿರುವ ವ್ಯಕ್ತಿ ಸಾಮಾನ್ಯನಲ್ಲ. ತನ್ನ ತನ್ನ ವೈದ್ಯಕೀಯ ವಿದ್ಯಾಭ್ಯಾಸದಲ್ಲಿ ಚಿನ್ನದ ಪದಕ ಪಡೆದುಕೊಂಡಿರುವ ಖ್ಯಾತ ಎಂಬಿಬಿಎಸ್‌ ವೈದ್ಯ ಹಾಗೂ ವಿಶೇಷ ಅರವಳಿಕೆ ತಜ್ಞ. ಇಂಗ್ಲಿಷ್‌, ಮರಾಠಿ, ಹಿಂದಿ ಮತ್ತು ಜರ್ಮನ್‌ ಭಾಷೆಗಳನ್ನು ಮಾತನಾಡಬಲ್ಲ ನಿಪುಣ. ಮೇಲಾಗಿ ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದ ಸುಮಾರು 18 ಪುಸ್ತಕಗಳನ್ನು ಸಹ ಲೇಖಕನಾಗಿ ಬರೆದಿರುವ ತಜ್ಞ.

ಶಿಲುಬೆ ಆಕಾರ ಇದೆ ಎಂದು ಇದೀಗ ‘ಟೈ’ ವಿರುದ್ಧ ತಾಲಿಬಾನ್‌ ಉಗ್ರ ಸಮರ
ಇಸ್ಲಾಮಾಬಾದ್‌: ಹೆಣ್ಣುಮಕ್ಕಳ ಬ್ಯೂಟಿ ಪಾರ್ಲರ್‌, ಜಿಮ್‌ ಸೇರಿದಂತೆ ಅನೇಕ ವಿಷಯಗಳಿಗೆ ನಿಷೇಧ ಹೇರಿರುವ ಅಷ್ಘಾನಿಸ್ತಾನದ ತಾಲಿಬಾನ್‌ ಸರ್ಕಾರ ಇದೀಗ ಪುರುಷರು ಧರಿಸುವ ‘ಟೈ’ ಕ್ರಿಶ್ಚಿಯನ್ನರ ಶಿಲುಬೆಯ ಆಕಾರದಲ್ಲಿ ಕಾಣುತ್ತದೆ ಎಂದು ಅದರ ವಿರುದ್ಧವೂ ಸಮರ ಸಾರಿದೆ. ಈ ಬಗ್ಗೆ ಟೀವಿ ಚಾನಲ್‌ವೊಂದರಲ್ಲಿ ಮಾತನಾಡಿದ ತಾಲಿಬಾನ್‌ ಸರ್ಕಾರದ ಪ್ರಮುಖ ಮೊಹಮ್ಮದ್‌ ಹಾಶಿಮ್‌ ಶಹೀದ್‌ ವೋರ್‌ ‘ಆಸ್ಪತ್ರೆ ಮತ್ತು ಇತರ ಪ್ರದೇಶಗಳಲ್ಲಿ ಆಫ್ಘನ್ನಿನ ಮುಸ್ಲಿಂ ವೈದ್ಯರು ಮತ್ತು ಎಂಜಿನಿಯರ್‌ಗಳು ಕೊರಳಿಗೆ ಟೈ ಧರಿಸಿರುತ್ತಾರೆ. ಟೈ ಸಂಕೇತ ಇಸ್ಲಾಂನಲ್ಲಿ ಸ್ಪಷ್ಟವಾಗಿದೆ. ಟೈ ಎಂದರೆ ಅದು ಚಿಹ್ನೆಯಾಕಾರದಲ್ಲಿದೆ. ಅದನ್ನು ಮುರಿದು ಹಾಕಬೇಕು’ ಎಂದು ಶರಿಯಾದಲ್ಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಹಿಂಸೆ: 15 ತಾಸು ಗುಂಡಿನ ಚಕಮಕಿ; ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ, ಉಗ್ರರು ಪರಾರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!