
ಚಿಕ್ಕಬಳ್ಳಾಪುರ(ಜು.30): ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಬಂದ ಆನ್ ಲೈನ್ ಲಿಂಕ್ ನಂಬಿದ ಶಿಕ್ಷಕಿಯೊಬ್ಬರು, ಹಣ ದ್ವಿಗುಣದ ಆಸೆಗೆ ಮರುಳಾಗಿ 3 ಲಕ್ಷ 21 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ಬ್ಲಾಕ್ ಚೈನ್ ಎಂಬ ಕಂಪನಿಯ ಲಿಂಕ್ ಅನ್ನು ನಂಬಿ ಹಣ ದ್ವಿಗುಣದ ಆಸೆಗೆ ಮರುಳಾದ ಶಿಕ್ಷಕಿ ಅವರು ಹೇಳಿದಂತೆ ಹಣ ನೀಡಿ ಕೊನೆಗೆ ಪಂಗನಾಮ ಹಾಕಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಮುಷ್ಟೂರು ಗ್ರಾಮದ ಖಾಸಗಿ ಶಾಲಾ ಶಿಕ್ಷಕಿ ಕೆ.ರಾಗಿಣಿ ಮೋಸ ಹೋಗಿರುವ ಮಹಿಳೆ.
ಇನ್‌ಸ್ಟಾಗ್ರಾಂನಲ್ಲಿ ಬ್ಲಾಕ್ ಚೈನ್ ಎಂಬ ಕಂಪನಿಯ ಲಿಂಕ್ ಬಂದಿದ್ದು, ಅದನ್ನು ಶಿಕ್ಷಕಿ ಓಪನ್ ಮಾಡಿದ್ದಾರೆ. ಆಗ ಆ್ಯಪ್‌ನಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಮಾಹಿತಿ ಬಂದಿದೆ. ಹೀಗಾಗಿ ಬಿಡುವಿನ ಸಮಯದಲ್ಲಿ ಹಣವನ್ನು ಹಾಕಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡೋಣವೆಂದು ಯೋಚನೆ ಮಾಡಿದ ಶಿಕ್ಷಕಿ, ಬ್ಯಾಂಕ್ ಖ್ಯಾತೆಗಳಿಂದ ವಿವಿಧ ದಿನಾಂಕಗಳಲ್ಲಿ ಒಟ್ಟು 3,21,000 ರು, ಹೂಡಿಕೆ ಮಾಡಿದ್ದಾರೆ.
ಕೊಡೆಕಲ್ ಬಸವೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಕದ್ದ ಖದೀಮರು!
ಇದಾದ ನಂತರ ಬ್ಲಾಕ್ ಚೈನ್ ಆ್ಯಪ್ ಅಕೌಂಟ್‌ನಲ್ಲಿ ರಾಗಿಣಿ ಹೆಸರಿನಲ್ಲಿ 10 ಲಕ್ಷ ಹಣ ಇರುವುದಾಗಿ ಕಾಣಿಸಿದೆಯಂತೆ. ಇದರಿಂದ ಸಂತಸಗೊಂಡ ಶಿಕ್ಷಕಿ ಕೊನೆಗೆ ಹಣ ಡ್ರಾ ಮಾಡಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ಇದರಿಂದ ಅನುಮಾನಗೊಂಡು ಕಂಪನಿಯವರನ್ನು ಸಂಪರ್ಕಿಸಲು ಯತ್ನಿಸಿದಾಗ ಯಾರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ಮೋಸ ಹೋಗಿರುವ ಬಗ್ಗೆ ಅವರಿಗೆ ಅರಿವಾಗಿದೆ. ಶಿಕ್ಷಕಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಚಿಕ್ಕಬಳ್ಳಾಪುರ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ