ಚಿತ್ರದುರ್ಗ ಖಾಸಗಿ ಶಾಲಾ ಆವರಣದಲ್ಲಿ ನವಜಾತ ಶಿಶುವಿನ ಅರ್ಧ ಮೃತದೇಹ ಪತ್ತೆ!

By Ravi Janekal  |  First Published Dec 26, 2024, 10:45 AM IST

ಚಿತ್ರದುರ್ಗದಲ್ಲಿ ಬೀದಿನಾಯಿಗಳು ಕಚ್ಚಿ ಎಳೆದಾಡಿರುವ ನವಜಾತ ಶಿಶುವಿನ ಅರ್ಧ ದೇಹ ಪತ್ತೆಯಾಗಿದೆ. ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ನಾಯಿಗಳು ಶವವನ್ನು ಎಳೆದು ತಂದಿರುವ ಶಂಕೆ ವ್ಯಕ್ತವಾಗಿದೆ. ಶಿಶುವಿನ ಮೃತದೇಹವನ್ನು ಸೂಕ್ತವಾಗಿ ವಿಲೇವಾರಿ ಮಾಡದಿರುವ ಬಗ್ಗೆ ಆರೋಪ ಕೇಳಿಬಂದಿದೆ.


ಚಿತ್ರದುರ್ಗ (ಡಿ.26): ಬೀದಿನಾಯಿಗಳು ಕಚ್ಚಿ ಎಳೆದಾಡಿರುವ ನವಜಾತ ಶಿಶುವೊಂದರ ಅರ್ಧ ದೇಹ ಪತ್ತೆಯಾಗಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ವೆಂಕಟೇಶ್ವರ ಶಾಲೆ ಆವರಣದಲ್ಲಿ ನಡೆದಿದೆ.

ಶಿಶುವಿನ ಅರ್ಧಭಾಗ ಮಾತ್ರ ಪತ್ತೆಯಾಗಿದೆ. ಬೀದಿನಾಯಿಗಳು ಎಳೆದಾಡಿರುವ ಶಿಶು ಶವ ಭಯಾನಕವಾಗಿ ಕಾಣುತ್ತಿದೆ. ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಆವರಣದಿಂದ ನಾಯಿಗಳು ಎಳೆದು ತಂದಿರುವ ಶಂಕೆ ವ್ಯಕ್ತವಾಗಿದೆ. ಮೃತ ಶಿಶು ಸೂಕ್ತ ಡಿಸ್ಪೋಸ್ ಮಾಡದ ನಿರ್ಲಕ್ಷ್ಯ ಮಾಡಿರುವ ಆರೋಪ ಕೇಳಿಬಂದಿದೆ. ಬೇಕಾಬಿಟ್ಟಿಯಾಗಿ ಶಿಶು ಮೃತದೇಹ ಆವರಣದಲ್ಲಿ ಬಿಸಾಡಿರುವ ಹಿನ್ನೆಲೆ ಬೀದಿನಾಯಿಗಳು ಎಳೆದು ತಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಚಿತ್ರದುರ್ಗ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರಕರಣ.

Tap to resize

Latest Videos

undefined

ಮಗು ಕಳೆದುಕೊಂಡ ನೋವಿನಲ್ಲೂ ಮಹಾನ್ ಕೆಲಸ, 2 ದಿನದ ಶಿಶು ದೇಹ ದಾನ ಮಾಡಿದ ಪಾಲಕರು

ಆತಂಕ ಹುಟ್ಟಿಸುತ್ತೆ ಶಿಶುಗಳ ಮರಣ ಪ್ರಮಾಣ!

ರಾಜಧಾನಿ ಬೆಂಗಳೂರಿನಲ್ಲಿ 2024-25ನೇ ಸಾಲಿನ ಮೊದಲಾರ್ಧದಲ್ಲಿ 5 ವರ್ಷದೊಳಗಿನ 535 ಶಿಶುಗಳು ಕಿಡ್ನಿ ವೈಫಲ್ಯ, ಕ್ಯಾನ್ಸರ್‌, ಹೃದ್ರೋಗ ಸೇರಿ ಮೊದಲಾದ ಕಾರಣಕ್ಕೆ ಮೃತಪಟ್ಟಿವೆ.

ಕಳೆದ ಏಪ್ರಿಲ್‌ನಿಂದ ಸೆಪ್ಟಂಬರ್‌ ಅವಧಿಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ 23ಕ್ಕೂ ಅಧಿಕ ತಾಯಿ ಮರಣ ಪ್ರಕರಣ ಸಂಭವಿಸಿದ್ದು, ಇನ್ನೂಇದೇ ಅವಧಿಯಲ್ಲಿ 535 ಶಿಶು ಮರಣ ಪ್ರಕರಣ ದಾಖಲಾಗಿದೆ. ನಗರದ ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಲ್ಲೆಯ ವ್ಯಾಪ್ತಿಯಲ್ಲಿನ ತಾಯಿ ಮರಣ ಹಾಗೂ ಶಿಶು ಮರಣವನ್ನು ಪ್ರತಿ ಮೂರು ಹಾಗೂ ಆರು ತಿಂಗಳಿಗೆ ಒಂದು ಬಾರಿ ಡೆತ್ ಆಡಿಟ್‌ ನಡೆಸಲಾಗುತ್ತಿದೆ.

ಈ ವೇಳೆ ಏಪ್ರಿಲ್‌ನಿಂದ ಸೆಪ್ಟಂಬರ್ ಅವಧಿಯಲ್ಲಿ 59 ಸಾವಿರ ಹೆರಿಗೆ ಆಗಿದ್ದು, ಈ ಪೈಕಿ 23 ಮಂದಿ ತಾಯಿ ಮರಣ ಪ್ರಕರಣ ಸಂಭವಿಸಿವೆ ಎಂದು ವರದಿ ನೀಡಿತ್ತು. ಇದೀಗ ಶಿಶು ಮರಣದ ಆಡಿಟ್‌ ನಡೆಸಲಾಗಿದ್ದು, ಇದರಲ್ಲಿ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಸರ್ಕಾರಿ, ಖಾಸಗಿ ಹಾಗೂ ಬಿಬಿಎಂಪಿ ಸೇರಿದಂತೆ ಎಲ್ಲಾ ಆಸ್ಪತ್ರೆಗಳಲ್ಲಿ 535 ಶಿಶು ಮರಣ ಪ್ರಕರಣ ವರದಿಯಾಗಿವೆ.

ಈ ಪೈಕಿ ಬೆಂಗಳೂರು ನಗರ ಜಿಲ್ಲೆಯ ತಾಲೂಕುಗಳನ್ನು ಹೊರತು ಪಡಿಸಿ ಬಿಬಿಎಂಪಿಯ 225 ವಾರ್ಡ್‌ ವ್ಯಾಪ್ತಿಯಲ್ಲಿರುವ ಸರ್ಕಾರಿ, ಖಾಸಗಿ ಮತ್ತು ಬಿಬಿಎಂಪಿಯ ಆಸ್ಪತ್ರೆಗಳಲ್ಲಿ 258 ಶಿಶು ಮರಣ ಪ್ರಕರಣ ದಾಖಲಾಗಿವೆ.

ಶಿಶುಗಳಲ್ಲಿ ಕಿಡ್ನಿ,ಹೃದ್ರೋಗ, ಕ್ಯಾನ್ಸರ್‌ ಸಮಸ್ಯೆ:

ಮೃತಪಟ್ಟ ಮಕ್ಕಳು 5 ವರ್ಷದೊಳಗಿನವರಾಗಿದ್ದಾರೆ. ಆದರೆ, ಸಾವಿಗೆ ಹಲವು ಕಾರಣಗಳಿವೆ. ಸಾಮಾನ್ಯವಾಗಿ ನವಜಾತ ಶಿಶುಗಳ ಮರಣಕ್ಕೆ ಕಡಿಮೆ ತೂಕ, ಅವಧಿಗೆ ಮುನ್ನ ಜನನ, ಉಸಿರಾಟ ಸಮಸ್ಯೆ ಸೇರಿದಂತೆ ಮೊದಲಾದ ಕಾರಣಕ್ಕೆ ಮೃತಪಟ್ಟ ವರದಿಯಾಗಿದೆ. ಆದರೆ, ಮತ್ತೆ ಕೆಲವು ಮಕ್ಕಳು ಕಿಡ್ನಿ ವೈಫಲ್ಯ, ಹೃದ್ರೋಗ, ಕ್ಯಾನ್ಸರ್‌ ನಂತಹ ಭಯಂಕರ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಇನ್ನಷ್ಟು ಮೃತ ಪ್ರಕರಣಗಳು ಅಪಘಾತದಿಂದ ಸಂಭವಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯನಗರ ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ: ಜಮೀನಿನಲ್ಲಿ ಹಸುಗೂಸು ಬಿಟ್ಟು ಹೋದ ಹೆತ್ತಮ್ಮ!

ಹೊರ ಜಿಲ್ಲೆ, ಹೊರ ರಾಜ್ಯ ಪ್ರಕರಣ ಹೆಚ್ಚು

ಬೆಂಗಳೂರು ನಗರದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ಇರುವುದರಿಂದ ಹೊರ ಜಿಲ್ಲೆಗಳಾದ ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೋಗಿಗಳು ಆಗಮಿಸಲಿದ್ದಾರೆ. ಅಲ್ಲದೇ ನೆರೆಯ ಆಂಧ್ರಪ್ರದೇಶ, ತಮಿಳುನಾಡಿ, ಬಿಹಾರ್‌, ಪಶ್ಚಿಮ ಬಂಗಾಳದ ರೋಗಿಗಳು ಆಗಮಿಸುತ್ತಾರೆ. ದಾಖಲಾಗಿರುವ ಶಿಶು ಮರಣ ಪ್ರಕರಣ ಪೈಕಿ ಬಹುತೇಕ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಮಕ್ಕಳು ಇವೆ ಎಂದು ತಿಳಿಸಿದ್ದಾರೆ.
 

click me!