ಕಾರವಾರ: 10,000 ಹಣಕ್ಕೆ ವೃದ್ಧೆಯ ಕತ್ತು ಹಿಸುಕಿ ಹತ್ಯೆಗೈದ ದುಷ್ಕರ್ಮಿಗಳು

By Girish Goudar  |  First Published Dec 25, 2024, 10:00 PM IST

ರಾತ್ರಿ ಹೊತ್ತು ಸ್ನಾನದ ಕೋಣೆಯ ಮೇಲ್ಛಾವಣಿಯಿಂದ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧೆ ಗೀತಾಳ ಕತ್ತು ಹಿಸುಕಿ ಕೊಲೆ ಮಾಡಿ ಹಣ ಎಗರಿಸಿ ಪರಾರಿಯಾಗಿದ್ದಾರೆ. ಪಿಗ್ಮಿ ಸಂಗ್ರಹ ಮಾಡುತ್ತಿದ್ದ ಬ್ಯಾಗ್‌ನಲ್ಲಿದ್ದ ಹಣವನ್ನೆಲ್ಲಾ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 


ಕಾರವಾರ(ಡಿ.25):  ಹತ್ತು ಸಾವಿರ ರೂಪಾಯಿ ಹಣಕ್ಕಾಗಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧೆಯನ್ನ ಕೊಲೆಗೈದು ಪರಾರಿಯಾದ ಘಟನೆ ಉತ್ತರಕನ್ನಡ ಜಿಲ್ಲೆಯ ಸಿದ್ಧಾಪುರ ಪಟ್ಟಣದ ಬಸವನಗಲ್ಲಿಯಲ್ಲಿ ಇಂದು(ಬುಧವಾರ) ನಡೆದಿದೆ. ಮೂರು ದಿನಗಳ ಬಳಿಕ ವೃದ್ಧೆಯ ಕೊಲೆಯ ಸುದ್ದಿ ಬೆಳಕಿಗೆ ಬಂದಿದೆ. 

ಸಿದ್ಧಾಪುರ ಶಹರದ ಬಸವನಗಲ್ಲಿ ನಿವಾಸಿ ಗೀತಾ ಹೂಂಡೆಕರ್ (72) ಕೊಲೆಯಾದ ದುರ್ದೈವಿ. ಕೊಲೆಯಾದ ಗೀತಾ ಹೂಂಡೆಕರ್ ಸಹಕಾರಿ ಬ್ಯಾಂಕಿನ ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ನಿತ್ಯ ಐದರಿಂದ ಹತ್ತು ಸಾವಿರ ರೂಪಾಯಿ ಪಿಗ್ಮಿ ಕಲೆಕ್ಟ್ ಮಾಡುತ್ತಿದ್ದರು. 

Tap to resize

Latest Videos

undefined

ಕ್ರಿಸ್ಮಸ್ ಹಬ್ಬದಂದೇ ಹರಿದ ನೆತ್ತರು: ಚರ್ಚ್‌ಗೆ ಹೋಗಬೇಕಿದ್ದ ಪತ್ನಿಯನ್ನ ಕೊಂದ ಕುಡುಕ ಗಂಡ!

ವೃದ್ಧೆ ಗೀತಾಗೆ ಇಬ್ಬರು ಹೆಣ್ಮಕ್ಕಳಿದ್ದು, ಇಬ್ಬರದ್ದೂ ಮದುವೆ ಆಗಿದೆ. ಪತಿ ಸಾವನಪ್ಪಿರುವ ಹಿನ್ನೆಲೆಯಲ್ಲಿ ಗೀತಾ ಹೂಂಡೆಕರ್ ಕೆಲವು ವರ್ಷಗಳಿಂದ ಮನೆಯಲ್ಲಿ ಒಬ್ಳಳೇ ವಾಸಿಸುತ್ತಿದ್ದರು. ಸೋಮವಾರ ರಾತ್ರಿ ಮನೆಯ ಒಳಗೆ ಹೋದವಳು ಹೊರಗೆ ಬಂದಿರಲಿಲ್ಲ. ಇಂದು ಅಕ್ಕ ಪಕ್ಕದ ಮನೆಯವರಿಗೆ ಅನುಮಾನ ಬಂದು ಮಗಳಿಗೆ ತಿಳಿಸಿದ್ದರು. ಮಗಳು ಮತ್ತು ಅಳಿಯ ಬಂದು ಮನೆ ಬಾಗಿಲು ಒಡೆದು ನೋಡಿದಾಗ ಕೊಲೆಯ ವಿಚಾರ ಬೆಳಕಿಗೆ ಬಂದಿದೆ. 

ರಾತ್ರಿ ಹೊತ್ತು ಸ್ನಾನದ ಕೋಣೆಯ ಮೇಲ್ಛಾವಣಿಯಿಂದ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧೆ ಗೀತಾಳ ಕತ್ತು ಹಿಸುಕಿ ಕೊಲೆ ಮಾಡಿ ಹಣ ಎಗರಿಸಿ ಪರಾರಿಯಾಗಿದ್ದಾರೆ. ಪಿಗ್ಮಿ ಸಂಗ್ರಹ ಮಾಡುತ್ತಿದ್ದ ಬ್ಯಾಗ್‌ನಲ್ಲಿದ್ದ ಹಣವನ್ನೆಲ್ಲಾ ಕದ್ದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!