Bengaluru: ಹೊಸ ವರ್ಷಕ್ಕೆ ಉಗ್ರರ ಕರಿನೆರಳು: ರಾಜಧಾನಿಯಲ್ಲಿ ಪೊಲೀಸರ ಕಟ್ಟೆಚ್ಚರ

By Sathish Kumar KH  |  First Published Dec 24, 2022, 6:24 PM IST

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳು ಹಾಗೂ ನಗರದಲ್ಲಿ ಶಂಕಿತರ ಬಂಧನದ ಹಿನ್ನೆಲೆಯಲ್ಲಿ ಕೆಲವು ಸಮಾಜಘಾತುಕ ಚಟುವಟಿಕೆಗಳು ಹೊಸ ವರ್ಷದ ದಿನಾಚರಣೆ ವೇಳೆ ಶಾಂತಿಭಂಗ ಉಂಟುಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.


ವರದಿ- ಕಿರಣ್. ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು (ಡಿ.24): ಕೊರೋನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸಿಲಿಕಾನ್​ ಸಿಟಿಯಲ್ಲಿ ಹೊಸ ವರ್ಷದ ಸೆಲಬ್ರೇಷನ್​ಗೆ ಬ್ರೇಕ್​ ಬಿದ್ದಿತ್ತು. ಈ ಹಿನ್ನಲೆಯಲ್ಲಿ ಈ ಸಲ ಅದ್ಧೂರಿಯಾಗಿ ನ್ಯೂ ಇಯರ್ ಸ್ವಾಗತಿಸಲು ನಾಗರೀಕರು ಕಾತರದಿಂದ ಕಾಯುತ್ತಿದ್ದಾರೆ. 

Tap to resize

Latest Videos

ಹೀಗಿರುವಾಗಲೇ ರಾಜ್ಯ ಗುಪ್ತಚರ ಇಲಾಖೆ ಎಚ್ಚರಿಕೆಯ ಕರೆಗಂಟೆಯನ್ನ ನೀಡಿದೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಭಯೋತ್ಪಾದಕ ಚಟುವಟಿಕೆಗಳು ಹಾಗೂ ನಗರದಲ್ಲಿ ಶಂಕಿತರ ಬಂಧನದ ಹಿನ್ನೆಲೆಯಲ್ಲಿ ಕೆಲವು ಸಮಾಜಘಾತುಕ ಚಟುವಟಿಕೆಗಳು ಶಾಂತಿಭಂಗ ಉಂಟುಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಕಟ್ಟೇಚ್ಚರ ವಹಿಸಲು ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ.

New Year party: ಹೊಸ ವರ್ಷಾಚರಣೆ ಮೇಲೆ ಉಗ್ರರ ಕಣ್ಣು: ಹದ್ದಿನ ಕಣ್ಣಿಟ್ಟ ಖಾಕಿ ಪಡೆ

ಪೊಲೀಸ್‌ ಕಮಿಷನರ್‌ ಕಟ್ಟೆಚ್ಚರ: ನಗರದಲ್ಲಿ ಅನುಮಾನಾಸ್ಪದವಾಗಿ ಕಾಣಿಸಿಕೊಳ್ಳುವವರ ಮೇಲೆ  ನಿಗಾವಹಿಸುವುದು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ಕಮೀಷನರ್ ಕಚೇರಿಯಿಂದ ಸೂಚನೆ ಸಿಕ್ಕಿದೆ. ಆಯಾ ಠಾಣೆಯ ಎಲ್ಲ ಹೊಯ್ಸಳ ಮತ್ತು ಚೀತಾಗಳು ಠಾಣಾ ವ್ಯಾಪ್ತಿಯಲ್ಲಿ ಚುರುಕಾದ ಗಸ್ತು ಕರ್ತವ್ಯ ಮಾಡಬೇಕು ಹಾಗೂ ಗಸ್ತು ಮತ್ತು ಪಾಯಿಂಟ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ತಮ್ಮ ಸ್ಥಳದಲ್ಲಿ ಏನಾದರೂ ಅಸಹಜವಾದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರಬೇಕೆಂದು ಸೂಚಿಸಲಾಗಿದೆ.

ಬ್ರಿಗೇಡ್ ರಸ್ತೆ, ಎಂಜಿ ರಸ್ತೆಯೇ ಸವಾಲು: ಪ್ರತಿವರ್ಷವೂ ಕೂಡ ಹೊಸವರ್ಷ ಆಚರಣೆಯ ದಿನ ಒಂದಿಲ್ಲೊಂದು ಪ್ರಕರಣಗಳು ಕಬ್ಬನ್ ಪಾರ್ಕ್, ಅಶೋಕನಗರ ಠಾಣೆಯಲ್ಲಿ ದಾಖಲಾಗ್ತಾನೇ ಇರುತ್ತೆ. ಕೇಂದ್ರ ವಿಭಾಗದ ವ್ಯಾಪ್ತಿಯಲ್ಲಿರುವ ಪಬ್ ಹಾಗೂ ಲೇಡಿಸ್ ಬಾರ್ ಗಳ ಬಗ್ಗೆ ನಿಗಾ ಇಡೋದಕ್ಕೆ ಶುರು ಮಾಡಿದ್ದಾರೆ. ಅದೇ ರೀತಿ ಪೊಲೀಸರು ಪ್ರತಿ ಏರಿಯಾದ ಲಾಡ್ಜ್ ಗಳಲ್ಲಿ ಬಂದು ನೆಲೆಸಿರೋ ವ್ಯಕ್ತಿಗಳ ಬಗೆಗೆ ಮಾಹಿತಿಯನ್ನ ಕಲೆಹಾಕೋದಕ್ಕೆ ಮುಂದಾಗಿದ್ದಾರೆ.

ಹೊಸ ವರ್ಷದಲ್ಲಿ ಸಾಲಮುಕ್ತರಾಗಲು ಬಯಸಿದ್ದೀರಾ? ಹಾಗಾದ್ರೆ ಈ 5 ಟಿಪ್ಸ್ ಪಾಲಿಸಿ

ಬೆಂಗಳೂರಿನ ಎಲ್ಲಾ ವಿಭಾಗದ ಪೊಲೀಸರಿಗಿಂತ ಕೇಂದ್ರ ವಿಭಾಗದ ಪೊಲೀಸರು ಹೆಚ್ಚಿನ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ. ನಗರದಲ್ಲಿ ಯಾವುದೇ ಅಡ್ಡಿ ಆತಂಕ ಇಲ್ಲದಂತೆ  ನ್ಯೂ ಇಯರ್ ಆಚರಣೆಗೆ ಪೊಲೀಸ್​ ಇಲಾಖೆ ಸಜ್ಜಾಗಿದೆ.

click me!