ಹಾಡ ಹಗಲೇ ದುಷ್ಕರ್ಮಿಗಳಿಬ್ಬರು ಮನೆಯನ್ನು ಹೊಕ್ಕು ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಂದು ಬೆಳಗ್ಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ.
ಹಾಸನ (ಡಿ.24): ಹಾಡ ಹಗಲೇ ದುಷ್ಕರ್ಮಿಗಳಿಬ್ಬರು ಮನೆಯನ್ನು ಹೊಕ್ಕು ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಇಂದು ಬೆಳಗ್ಗೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿದೆ. ಇನ್ನು ಪತಿ ಮನೆಯಿಂದ ಹೊರ ಹೋಗಿದ್ದಾಗ ಮನೆಯನ್ನು ಸೇರಿದ ಕೊಲೆಪಾತಕರು ಮಹಿಳೆಯನ್ನು ಕತ್ತು ಸೀಳಿದ್ದಾರೆ.
ಇನ್ನು ವೈಷಮ್ಯಕ್ಕಾಗಿ ಕೊಲೆಗಳನ್ನು ಮಾಡಿ ತಾವೂ ಕೂಡ ಜೀವನ ಹಾಳು ಮಾಡಿಕೊಂಡು ಜೈಲು ಸೇರಿದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇನ್ನು ಕೋಪದ ಕೈಯಲ್ಲಿ ಬುದ್ಧಿಯನ್ನು ಕೊಟ್ಟು ಕೊಲೆಗಳನ್ನು ಮಾಡಿ ಜೈಲು ಶಿಕ್ಷೆ ಅನುಭವಿಸಿದವರು ಸಮಾಜದಲ್ಲಿ ನೆಮ್ಮದಿಯಾಗಿ ಜೀವನ ಮಾಡಲಾಗದ ಪರಿಸ್ಥಿತಿಯನ್ನು ಕೂಡ ನೋಡಿರಬಹುದು. ಆದರೂ ಕೂಡ ವೈಷಮ್ಯದ ಹಿನ್ನೆಲೆಯಲ್ಲಿ ಅಥವಾ ಹಣದಾಸೆಗೆ ಕೊಲೆ ಮಾಡುವ ಘಟನೆಗಳು ಹೆಚ್ಚಾಗುತ್ತಲೇ ಇವೆ. ಇದೂ ಕೂಡ ಇಂತಹದ್ದೇ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ಕಂಡುಬರುತ್ತಿದೆ. ಆದರೆ, ಪೊಲೀಸ್ ತನಿಖೆಯ ನಂತರವೇ ನೈಜವೇನೆಂಬುದು ಬಯಲಾಗಲಿದೆ.
undefined
Hassan: ಹಾವು ಕಡಿತ, ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದೆ ಬಾಲಕ ಸಾವು
ಗಂಡ ಇಲ್ಲಿದಿರುವಾಗ ಮನೆಗೆ ಹೊಕ್ಕು ಕೊಲೆ: ಇನ್ನು ಬರ್ಬರವಾಗಿ ಕೊಲೆಯಾದ ಮಹಿಳೆಯನ್ನು ಪಾರ್ವತಮ್ಮ (58) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ 10 ಗಂಟೆ ಸಮಯದಲ್ಲಿ ಕೊಲೆ ಮಾಡಿರುವ ಶಂಕೆಯಿದೆ. ಪಾರ್ವತಮ್ಮನ ಪತಿ ರಾಜೇಗೌಡ ಮನೆಯಿಂದ ಹೊರಗೆ ಹೋಗಿದ್ದಾಗ ದುಷ್ಕರ್ಮಿಗಳು ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮನೆಯಲ್ಲಿ ಪಾರ್ವತಮ್ಮ ಒಬ್ಬರೇ ಇರುವುದನ್ನು ಕಾಯ್ದುಕೊಂಡಿದ್ದು ನೋಡಿರುವ ಹಂತಕರು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾರೆ. ಆದರೆ, ಕೊಲೆ ಮಾಡಿದವರು ಯಾರೆಂಬ ಬಗ್ಗೆ ಈವರೆಗೆ ಸುಳಿವು ಸಿಕ್ಕಿಲ್ಲ.
ಮಾಸ್ಕ್ ಧರಿಸಿದ್ದವರೇ ಕೊಲೆ ಮಾಡಿದ ಶಂಕೆ: ಇನ್ನು ಗ್ರಾಮದಲ್ಲಿ ಇಬ್ಬರು ಬೈಕ್‌ನಲ್ಲಿ ಹೋಗುವವರು ಮುಖಕ್ಕೆ ಮಾಸ್ಕ್ ಧರಿಸಿದ್ದರು. ಕೊಲೆಯಾದ ಸ್ಥಳದಿಂದ ಇವರು ಬಂದಿರುವುದನ್ನು ನೋಡಿರುವ ಗ್ರಾಮಸ್ಥರು ಇವರೇ ಕೊಲೆ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ದುರ್ಘಟನೆ ನಡೆದಿರುವ ಮನೆಯ ಕಡೆಯಿಂದ ಮಾಸ್ಕ್ ಧರಿಸಿದ್ದ ಇಬ್ಬರು ಬೈಕ್‌ನಲ್ಲಿ ಹೋಗುವುದನ್ನು ಗ್ರಾಮಸ್ಥರು ನೋಡಿದ್ದಾರೆ. ಇನ್ನು ಸ್ಥಳಕ್ಕೆ ಪೊಲೀಸರು, ಶ್ವಾನದಳ ಬಂದಿದ್ದು ಪರಿಶೀಲನೆ ಮಾಡಲಾಗುತ್ತಿದೆ. ಈ ಘಟನೆಯ ಕುರಿತು ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Hassan: ವಸತಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಾಂಶುಪಾಲನ ಬಂಧನ
ಎರಡು ವಾರದ ಹಿಂದೆ ತಾಲೂಕಿನಲ್ಲಿ ಕೊಲೆಯಾಗಿತ್ತು: ಇದೇ ತಿಂಗಳ ಮೊದಲ ವಾರದಲ್ಲಿ ಸೊಸೆ ಮೇಲೆ ಕಣ್ಣು ಹಾಕಿದ್ದ ಮಾವನನ್ನ ಸುಪಾರಿ ಕೊಟ್ಟು, ಬೀಗರು ಕೊಲೆ ಮಾಡಿಸಿದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಇನ್ನು ಕೊಲೆಯಾದ ವ್ಯಕ್ತಿಯನ್ನು ತಮ್ಮಣ್ಣಗೌಡ (54) ಎಂದು ಗುರುತಿಸಲಾಗಿತ್ತು. ನ.13 ರಂದು ರಾಗಿಕಾವಲು ಗ್ರಾಮದ ಹೊಸಕೆರೆಯಲ್ಲಿ ತಮ್ಮಣ್ಣ ಗೌಡನ ಶವ ಪತ್ತೆಯಾಗಿತ್ತು. ಮುಖವನ್ನು ಪ್ಲಾಸ್ಟಿಕ್ ಚೀಲದಿಂದ ಮುಚ್ಚಿ ಶವವನ್ನ ಕೆರೆಗೆ ಎಸೆಯಲಾಗಿತ್ತು. ಮೃತನ ಮಗ ಕುಮಾರ್ ನೀಡಿದ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ವೇಳೆ ಕೊಲೆಯ ರಹಸ್ಯ ಬಯಲಾಗಿತ್ತು.