ಬೆಂಗಳೂರು (ಡಿ.27): ಹೊಸ ವರ್ಷದ (New Year) ಆಚರಣೆಯ ಹಿನ್ನೆಲೆಯಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ವ್ಯಕ್ತಿ ಇಂದು ಎನ್ ಸಿ ಬಿ (NCB) ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಬೆಂಗಳೂರಿನಲ್ಲಿಂದು ದಾಳಿ ಮಾಡಿದ ಎನ್‌ಸಿಬಿ ಅಧಿಕಾರಿಗಳು ಆಟಿಕೆ ಬಾಕ್ಸ್ ಗಳಲ್ಲಿ ಮಾದಕ ವಸ್ತು ಸಾಗಿಸುತ್ತಾ ಇದ್ದ ಸೌತ್ ಆಫ್ರಿಕಾದ ಬೆಂಜಮೀನ್ ಸಂಡೆ ಅಲಿಯಾಸ್ ಅಂಥೋನಿ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿಯಿಂದ ಲಕ್ಷಾಂತರ ಮೌಲ್ಯದ ಮಾದಕ ವಸ್ತುಗಳನ್ನು (Drugs) ವಶಕ್ಕೆ ಪಡೆದುಕೊಳ್ಳಲಾಗಿದೆ. ಈತನ ಮೇಲೆ ಚೆನ್ನೈನಲ್ಲಿಯೂ ಎರಡು ಪ್ರಕರಣ (Case) ದಾಖಲಾಗಿದ್ದು ಅಲ್ಲಿಯೂ ಪೊಲೀಸರು ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ದೊಡ್ಡ ಡ್ರಗ್ ಪೆಡ್ಲರ್ ಆಗಿದ್ದ ಈತ ಭಾರತದಲ್ಲಿಯೇ ಉಳಿದುಕೊಳ್ಳು ಸಲುವಾಗಿ ತಮಿಳುನಾಡು ಮೂಲದ ಮಹಿಳೆಯನ್ನು ಮದುವೆಯಾಗಿದ್ದ. ಆಕೆಯ ಸಹಾಯದಿಂದಲೂ ಡ್ರಗ್ಸ್ ಮಾರಾಟ ಮಾಡುತ್ತಿದ್ದ.
undefined
ಬಂಧಿತ ಬೆಂಜಮಿನ್‌ನಿಂದ 968 ಗ್ರಾಂ ಅಪ್ತೇಮೇನ್ , 2kg 900 ಗ್ರಾಂ ಎಪೆದ್ರೇನ್ ವಶ ಪಡಿಸಿಕೊಳ್ಳಲಾಗಿದೆ. ಲಕ್ಷಾಂತರ ಮೌಲ್ಯದ ಮಾದಕವಸ್ತುಗಳು ಈತನ ಬಳಿ ಇದ್ದು ಈ ಹಿಂದೆ ಕೂಡ 130 ಗ್ರಾಂ ಕೊಕೇನ್ ಮಾರುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದ. ಬಳಿಕ ಜಾಮೀನು ಪಡೆದು ಎಸ್ಕೇಪ್ ಆಗಿದ್ದ. ಎರಡು ಡ್ರಗ್ಸ್ ಪ್ರಕರಣದಲ್ಲಿ ಬೇಕಾಗಿದ್ದ.
ಮುಂಬೈನಲ್ಲಿ ಡ್ರಗ್ಸ್ ಸಾಗಣೆ -ಅರೆಸ್ಟ್ : ಹೊಸ ವರ್ಷಾಚರಣೆ(New Year) ಹಿನ್ನೆಲೆಯಲ್ಲಿ ನಗರದಿಂದ ಬಸ್ಸಿನಲ್ಲಿ ಮುಂಬೈಗೆ(Mumbai) 1.5 ಕೋಟಿ ಮೌಲ್ಯದ ಡ್ರಗ್ಸ್(Drugs) ಪೂರೈಸುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (NCB)ದ ಬೆಂಗಳೂರು ವಲಯ ಅಧಿಕಾರಿಗಳು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾ(South Africa) ಪ್ರಜೆ ಬೆಂಜಮಿನ್ ಸಂಡೆ ಅಲಿಯಾಸ್ ಆಂಟೋನಿ ಬಂಧಿತನಾಗಿದ್ದು(Arrest), ಆರೋಪಿಯಿಂದ ಒಂದೂವರೆ ಕೋಟಿ ಮೌಲ್ಯದ 968 ಗ್ರಾಂ ಆಂಫೆತ್‌ಮೈನ್ ಹಾಗೂ 2.9 ಕೆ.ಜಿ. ಎಫೆಡ್ರಿನ್ ಜಪ್ತಿ ಮಾಡಲಾಗಿದೆ. ನಗರದಿಂದ ಬಸ್‌ನಲ್ಲಿ ಗುರುವಾರ ರಾತ್ರಿ ಮಾದಕ ವಸ್ತು ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಪಡೆದು ಎಸ್‌ಸಿಬಿ ದಾಳಿ ನಡೆಸಿದೆ.
ಉದ್ಯಮ ವೀಸಾದಡಿ(Business Visa) ಭಾರತಕ್ಕೆ(India) ಬಂದಿದ್ದ ಆರೋಪಿ, ಬಳಿಕ ತಮಿಳುನಾಡಿನ(Tamil Nadu) ಚೆನ್ನೈ(Chennai) ಮೂಲದ ಯುವತಿಯನ್ನು ಪ್ರೀತಿ ವಿವಾಹವಾಗಿದ್ದ. ನಂತರ ಹಣದಾಸೆಗೆ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದ ಆತ, ಚೆನ್ನೈ, ಬೆಂಗಳೂರು(Bengaluru) ಹಾಗೂ ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಮಾದಕ ವಸ್ತು ತಯಾರಿಕೆ ಮತ್ತು ಮಾರಾಟದಲ್ಲಿ ಸಕ್ರಿಯವಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಮೇಲೆ ಚೆನ್ನೈ ಹಾಗೂ ಆಸ್ಟ್ರೇಲಿಯಾ(Australia) ಪ್ರಕರಣ ದಾಖಲಾಗಿವೆ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದ್ದಾರೆ.
ಬೆಂಗ್ಳೂರಲ್ಲಿ ಡ್ರಗ್ಸ್ ಹಾವಳಿ, ಕೋಟಿ ಮೊತ್ತದ ಆಶಿಸ್ ಆಯಿಲ್ ವಶ!
ಬಾಕ್ಸ್‌ಗಳಲ್ಲಿ ಸಾಗಾಣಿಕೆ: ಮುಂಬೈನಲ್ಲಿ ನಡೆಯುವ ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಡ್ರಗ್ಸ್ ಪೂರೈಸಲು ಅಂಥೋನಿ ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿತು. ಅಂತೆಯೇ ಗುರುವಾರ ರಾತ್ರಿ ಬಸ್‌ನಲ್ಲಿ ತೆರಳುವಾಗ ಮಾರ್ಗ ಮಧ್ಯೆ ಆತನನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಆತನ ಬಳಿಯಿದ್ದ 3 ಬಾಕ್ಸ್‌ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಡ್ರಗ್ಸ್ ಇರುವುದು ಪತ್ತೆಯಾಗಿತ್ತು. ಒಂದು ಮರದ ಬಾಕ್ಸ್‌ನಲ್ಲಿ 1665 ಗ್ರಾಂ ಆಂಫೆತ್‌ಮೈನ್ ಹಾಗೂ ಎರಡು ಮೆಟಲ್ ಬಾಕ್ಸ್‌ಗಳಲ್ಲಿದ್ದ 2.811 ಕೆ.ಜಿ ಎಫೆಡ್ರಿನ್ ಜಪ್ತಿ ಮಾಡಲಾಗಿದೆ ಎಂದು ಎನ್‌ಸಿಬಿ ವಲಯ ನಿರ್ದೇಶಕ ಅಮಿತ್ ತಿಳಿಸಿದ್ದಾರೆ.
ನ್ಯೂ ಇಯರ್ ಪಾರ್ಟಿಗೆ ಡ್ರಗ್ಸ್ ಪೂರೈಕೆ ಸಜ್ಜಾಗಿದ್ದ ಇಬ್ಬರ ಸೆರೆ
ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾದಕ ವಸ್ತು ದಂಧೆ ವಿರುದ್ಧ ಪೊಲೀಸರ(Police) ಕಾರ್ಯಾಚರಣೆ ಮತ್ತಷ್ಟು ಬಿರುಸುಗೊಂಡಿದ್ದು, ಮತ್ತೆ 6 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆಂಧ್ರಪ್ರದೇಶದಿಂದ(Andhra Pradesh) ನಗರಕ್ಕೆ .6 ಕೋಟಿ ಮೌಲ್ಯದ ಡ್ರಗ್ಸ್ ತಂದು ಮಾರಾಟಕ್ಕೆ ಯತ್ನಿಸಿದ್ದಾಗ ಆಂಧ್ರಪ್ರದೇಶ ಮೂಲದ ಇಬ್ಬರು ಪೆಡ್ಲರ್‌ಗಳು ಮೈಕೋಲೇಔಟ್ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಶಾಖಪಟ್ಟಣದ ಉಲ್ಲಂಗಿ ಪ್ರಕಾಶ್ ರಾವ್ ಹಾಗೂ ಧಾಮ್‌ರಾಜ್ ಬಂಧಿತರಾಗಿದ್ದು, ಆರೋಪಿಗಳಿಂದ 5 ಲೀಟರ್ ಹ್ಯಾಶಿಶ್ ಆಯಿಲ್ ಜಪ್ತಿ ಮಾಡಲಾಗಿದೆ. ಬಿಟಿಎಂ ಲೇಔಟ್‌ನ ಎಸ್‌ಎಲ್‌ಎನ್ ಲೇಕ್ ವ್ಯೂ ಅಪಾರ್ಟ್‌ಮೆಂಟ್ ಬಳಿ ಗ್ರಾಹಕರಿಗೆ ಡ್ರಗ್ಸ್ ಪೂರೈಸುವ ವೇಳೆ ಈ ಇಬ್ಬರು ಪೆಡ್ಲರ್‌ಗಳ ಬಂಧನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಹಲವು ವರ್ಷಗಳಿಂದ ಡ್ರಗ್ಸ್ ದಂಧೆಯಲ್ಲಿ ಈ ಇಬ್ಬರು ತೊಡಗಿದ್ದು, ಒಡಿಶಾ ಹಾಗೂ ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಡ್ರಗ್ಸ್ ಖರೀದಿಸಿ ಬಳಿಕ ಬೆಂಗಳೂರಿನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ನಗರಕ್ಕೆ ಆಗಾಗ್ಗೆ ಡ್ರಗ್ಸ್ ತಂದು ಮಾರಾಟ ಮಾಡಿ ಮರಳುತ್ತಿದ್ದರು. ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯುವ ಪಾರ್ಟಿಗಳಿಗೆ ಹ್ಯಾಶಿಶ್ ಆಯಿಲ್ ಸರಬರಾಜು ಮಾಡಲು ಸಿದ್ಧತೆ ನಡೆಸಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಮೂವರು ಪೆಡ್ಲರ್‌ಗಳ ಸೆರೆ
ಎಚ್‌ಎಎಲ್ ಠಾಣೆ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಮೂವರು ಗಾಂಜಾ ಪೆಡ್ಲರ್‌ಗಳು ಗಾಳಕ್ಕೆ ಬಿದ್ದಿದ್ದಾರೆ. ಇಮ್ರಾನ್ ಅಲಿಯಾಸ್ ಕುಳ್ಳ, ಮುಬಾರಕ್ ಪಾಷ ಹಾಗೂ ಅಫೆರೕಜ್ ಅಲಿಯಾಸ್ ಅಪ್ಪು ಬಂಧಿತರಾಗಿದ್ದು, ಆರೋಪಿಗಳಿಂದ 9 ಕೆ.ಜಿ. ಗಾಂಜಾ ಹಾಗೂ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ವಿಭೂತಿಪುರ ಕೆರೆ ಸಮೀಪ ಗಾಂಜಾ ಮಾರಾಟಕ್ಕೆ ಸೋಮವಾರ ಆರೋಪಿ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸಬ್‌ಇನ್ಸ್‌ಪೆಕ್ಟರ್ ಎಚ್. ರಂಗನಾಥ್ ತಂಡ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ