Dharwad Gang Rape: ಬಾಲಕಿ ಮೇಲೆ ಅಟ್ಟಹಾಸ ಮೆರೆದ ಅಪ್ರಾಪ್ತ ಕಾಮುಕರ ಬಂಧನ

Kannadaprabha News   | Asianet News
Published : Dec 27, 2021, 06:43 AM IST
Dharwad Gang Rape: ಬಾಲಕಿ ಮೇಲೆ ಅಟ್ಟಹಾಸ ಮೆರೆದ ಅಪ್ರಾಪ್ತ ಕಾಮುಕರ ಬಂಧನ

ಸಾರಾಂಶ

*  ಪೊಲೀಸರ ಮಿಂಚಿನ ಕಾರ್ಯಾಚರಣೆ *  ಜೀವಬೆದರಿಕ ಒಡ್ಡಿ ನಿರಂತರವಾಗಿ ಬಾಲಕಿ ಮೇಲೆ ಅತ್ಯಾಚಾರ *  ಆರೋಪಿಗಳು ಬಾಲಕಿಗೆ ಪರಿಚಯಸ್ಥರೇ 

ಧಾರವಾಡ(ಡಿ.27): ಬಾಲಕಿ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ(Gang Rape) ಎಸಗಿರುವ ಅಮಾನವೀಯ ಘಟನೆ ಭಾನುವಾರ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲು ಆಗುವುದೇ ತಡವೇ ಪೊಲೀಸರು(Police) ಮಿಂಚಿನ ಕಾರ್ಯಾಚರಣೆ ನಡೆಸಿ ಆರು ಜನ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. 17 ವರ್ಷದ ಬಾಲಕಿ ಮೇಲೆ ಕಳೆದ ಮೂರು ತಿಂಗಳಿಂದ ನಿರಂತರವಾಗಿ ಐದಕ್ಕಿಂತ ಹೆಚ್ಚು ಬಾಲಕರು ಅತ್ಯಾಚಾರ ನಡೆಸಿರುವ ಬಗ್ಗೆ ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯ ಪಾಲಕರು ನಗರದ ಶಹರ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಪ್ರಕರಣ(Case) ದಾಖಲಿಸಿದ್ದಾರೆ.

ಆರೋಪಿಗಳು ಬಾಲಕಿಗೆ ಪರಿಚಯಸ್ಥರೇ ಇರುವ ಕಾರಣ ಅವರ ಮಾಹಿತಿ ಪಡೆದು ಕಾರ್ಯೋನ್ಮುಖರಾದ ಪೊಲೀಸರು 6 ಬಾಲಕರನ್ನು ವಶಕ್ಕೆ(Arrest) ಪಡೆದಿದ್ದು, ಭಾನುವಾರ ರಾತ್ರಿ ವೇಳೆಗೆ ನ್ಯಾಯಾಲಯಕ್ಕೆ(Court) ಹಾಜರುಪಡಿಸುವ ಸಾಧ್ಯತೆ ಇದೆ.

Sexual Harassment : ಸೆಕೆಂಡ್ ಪಿಯು ಬಾಲಕಿ ಗರ್ಭಿಣಿ,  ಸ್ನೇಹ ಸಂಪಾದಿಸಿ ಮಿನಿ ಬಸ್ ಚಾಲಕ ಮಾಡಿದ  ಹೀನ ಕೆಲಸ!

ಆರೋಪಿಗಳು ನಗರದ ಲಕ್ಷ್ಮಿಸಿಂಗನಕೇರಿಯ ನಿವಾಸಿಗಳಾಗಿದ್ದಾರೆ. ಬಾಲಕಿ ನಗರದ ಮೋರೆ ಪ್ಲಾಟ್‌ ಹತ್ತಿರದ ನಿವಾಸಿ ಎಂಬ ಮಾಹಿತಿ ಇದೆ. ಬಾಲಕಿಗೆ ಜೀವಬೆದರಿಕೆ(Life Threatening) ಒಡ್ಡಿ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ ಎನ್ನುವ ಮಾಹಿತಿ ಪೊಲೀಸ್‌ ವಿಚಾರಣೆಯಿಂದ ಹೊರಬಿದ್ದಿದೆ. ಎಲ್ಲರೂ ಅಪ್ರಾಪ್ತರಾಗಿರುವ ಕಾರಣದಿಂದ ಯಾವುದೇ ಮಾಹಿತಿಯನ್ನು ಪೊಲೀಸರು ಬಹಿರಂಗಗೊಳಿಸಿಲ್ಲ.

ಬಾಲಕಿ(Victim Girl) ಹೆದರಿ ಯಾರಿಗೂ ಈ ವಿಷಯ ತಿಳಿಸಿದೆ ಸುಮ್ಮನೆ ಇದ್ದಳು. ಆದರೆ, ನಿರಂತರ ಅತ್ಯಾಚಾರಕ್ಕೆ ಒಳಗಾಗುತ್ತಿರುವುದರಿಂದ ಬೇಸತ್ತು ಭಾನುವಾರ ಕುಟುಂಬಸ್ಥರಿಗೆ ಈ ಮಾಹಿತಿ ನೀಡಿದ್ದಾಳೆ. ಆಗ ಪಾಲಕರು ಬಾಲಕಿಯೊಂದಿಗೆ ಪೊಲೀಸ್‌ ಠಾಣೆಗೆ(Police Station) ಆಗಮಿಸಿ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬಾಲಕಿಯು ಆರೋಪಿಗಳ ಪೈಕಿ ಒಬ್ಬಾತನನ್ನು ಪ್ರೀತಿ(Love) ಮಾಡುತ್ತಿದ್ದು, ಆತನೊಂದಿಗಿನ ಖಾಸಗಿ ದೃಶ್ಯಗಳ ವಿಡಿಯೋವನ್ನು ಉಳಿದ ಬಾಲಕರು ಮಾಡಿದ್ದಾರೆ. ಆ ವಿಡಿಯೋದಿಂದ ಬಾಲಕಿಗೆ ಹೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಲಾಗಿದೆ ಎಂದು ತಿಳಿದು ಬಂದಿದೆ.

ಸದ್ಯ ಬಾಲಕಿಯನ್ನು ನಗರದ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆಗೆ ಒಳಪಡಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿ ಹಾಗೂ ಕೃತ್ಯ ಎಸಗಿರುವ ಬಾಲಕರು ಅಪ್ರಾಪ್ತರಾಗಿರುವ ಕಾರಣ ಕಾನೂನು ನಿಯಮದಲ್ಲಿ ಯಾವುದನ್ನು ಬಹಿರಂಗಗೊಳಿಸಲು ಬರುವುದಿಲ್ಲ ಎಂದು ಶಹರ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

Sexual Harassment : ಕೆಲಸ ಕೊಡಿಸುವ ನೆಪದಲ್ಲಿ ವಿವಾಹಿತೆಯನ್ನು ಹೋಟೆಲ್‌ಗೆ ಕರೆದ!

ಅಕ್ರಮ ಸಂಬಂಧದ ಗುಟ್ಟು ಇಟ್ಟುಕೊಂಡು ಬ್ಲಾಕ್ ಮೇಲ್, ಗ್ಯಾಂಗ್ ರೇಪ್

ತೆಲಂಗಾಣದ ಹೈದರಾಬಾದ್‌ನ (Hyderabad) ಎಸ್‌ಆರ್ ನಗರದಲ್ಲಿ ಡಿಸೆಂಬರ್ 13 ರಂದು ಇಬ್ಬರು ವ್ಯಕ್ತಿಗಳು ವಿವಾಹಿತ(Woman) ಮಹಿಳೆಯ ಮೇಲೆ ಸಾಮೂಹಿಕ (Rape) ಅತ್ಯಾಚಾರವೆಸಗಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ಬೇರೆ ಒಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದಳು.. ನಿನ್ನ ಅಕ್ರಮ ಸಂಬಂಧ ವಿಚಾರವನ್ನು ಕುಟುಂಬಕ್ಕೆ ತಿಳಿಸುತ್ತೇವೆ ಎಂದು ಬೆದರಿಕೆ ಹಾಕಿ ಕೃತ್ಯ ಎಸಗಿದ್ದಾರೆ.

ಈ ಘಟನೆ ಒಂದು ದಿನದ ನಂತರ ಮಹಿಳೆ ಮತ್ತು ಆಕೆಯ ಪ್ರಿಯಕರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಶುಕ್ರವಾರ ಮಹಿಳೆ ದೂರು ದಾಖಲಿಸಿದ ನಂತರ ಇಡೀ ಪ್ರಕರಣದ ಅಂಶಗಳು ಬಹಿರಂಗವಾಗಿದೆ.

ಮಹಿಳೆ ಬಿಲ್ಡಿಂಗ್ ನಿರ್ಮಾಣ ಕಾರ್ಯದಲ್ಲಿ ಕೂಲಿಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಕೆಲಸ ಮಾಡುವ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ (Illicit Relationship) ಹೊಂದಿದ್ದಳು. ಡಿ. 13  ರಂದು ತನ್ನ ಗೆಳೆಯನ ಭೇಟಿಗೆ ಮನೆಯಿಂದ ಹೊರಟಿದ್ದಳು. ಈ ವೇಳೆ ಆಕೆಯನ್ನು ಅಡ್ಡಗಟ್ಟಿದ ಇಬ್ಬರು ಬೆದರಿಕೆ ಹಾಕಿದ್ದಾರೆ. ನಿನ್ನ ಅಕ್ರಮ ಸಂಬಂಧ ಬಹಿರಂಗ ಮಾಡುತ್ತೇವೆ ಎಂದು ಹೆದರಿಸಿ ತಮಗೆ ಸಹಕರಿಬೇಕು ಎಂದಿದ್ದಾರೆ. ಅಡ್ಡಿಪಡಿಸಿದಕ್ಕೆ ಆಕೆಯ ಮೇಲೆ ಎರಗಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!
ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ