* ಸ್ನೇಹಿತರಿಂದಲೇ ನಟಿಗೆ ಮಹಾಮೋಸ
* ಮಾದಕ ವಸ್ತು ಸೇವನೆ ಆರೋಪ
* ಪಾರ್ಟಿ ಮೇಲೆ ದಾಳಿ ಮಾಡಿದ ನಕಲಿ ಅಧಿಕಾರಿಗಳು
* ಖಿನ್ನತೆಗೆ ಒಳಗಾದ ನಟಿ ಆತ್ಮಹತ್ಯೆಗೆ ಶರಣು
ಮುಂಬೈ(ಡಿ. 27) ಮುಂಬೈನಲ್ಲಿ 28 ವರ್ಷದ ನಟಿಯೊಬ್ಬರು(Actress) ತಮ್ಮ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ(suicide) ಮಾಡಿಕೊಂಡಿದ್ದಾರೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಧಿಕಾರಿಗಳಂತೆ ನಟಿಸಿದ ಕೆಲವರು ನಟಿಯಿಂದ ಹಣ ದೋಚಲು ಮುಂದಾಗಿದ್ದರು. ಇದೇ ಕಾರಣಕ್ಕೆ ನಟಿ ಸುಸೈಡ್ ಮಾಡಿಕೊಂಡಿದ್ದಾರೆ.
ಮೃತ ನಟಿ ಭೋಜ್‌ಪುರಿ ಚಿತ್ರಗಳಲ್ಲಿ ಅಭಿನಯಿಸಿದ್ದರು. ಡಿಸೆಂಬರ್ 23 ರಂದು ಜೋಗೇಶ್ವರಿ (ಪಶ್ಚಿಮ) ಪ್ರದೇಶದ ತನ್ನ ನಿವಾಸದಲ್ಲಿ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ಸಾವಿನ ನಂತರ, ಆಕೆಯ ಸ್ನೇಹಿತರೊಬ್ಬರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮೃತ ಭೋಜ್‌ಪುರಿ ನಟಿ ಮತ್ತು ಆಕೆಯ ಮೂವರು ಸ್ನೇಹಿತರು ಸಾಂತಾಕ್ರೂಜ್ (ಪಶ್ಚಿಮ) ಪ್ರದೇಶದ ಹೋಟೆಲ್‌ಗೆ ಪಾರ್ಟಿಗೆ ಹೋಗಿದ್ದು ಅಂಬೋಲಿ ಪೊಲೀಸರಿಗೆ ತಿಳಿದು ಬಂದಿದೆ. ಎನ್ ಸಿಬಿ ಅಧಿಕಾರಿಗಳಂತೆ ಆಗಮಿಸಿದ ಇಬ್ಬರು ಪಾರ್ಟಿಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ನಟಿ ಮತ್ತು ಆಕೆಯ ಸ್ನೇಹಿತರನ್ನು ಮಾದಕ ವಸ್ತು(Drugs) ಸೇವನೆ ಆರೋಪದ ಮೇಲೆ ನಿಮ್ಮನ್ನು ಬಂಧಿಸುತ್ತಿದ್ದೇವೆ ಎಂದಿದ್ದಾರೆ. ಇದರಿಂದ ಭಯಗೊಂಡವರು ಪರಿಹಾರ ಏನು ಎಂದು ಕೇಳಿದಾಗ ನಕಲಿ ಅಧಿಕಾರಿಗಳು 40 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಅಂತಿಮವಾಗಿ 20 ಲಕ್ಷ ರೂ. ನೀಡುವ ಮಾತುಕತೆ ಆಗಿದೆ.
Bank Fraud: ಯುನಿಯನ್ ಬ್ಯಾಂಕ್‌ಗೆ 53 ಕೋಟಿ ವಂಚಿಸಿದ್ದ 'ಮರಿಮಲ್ಯ' ಸೆರೆ!
ಈ ಘಟನೆಯ ನಂತರ ನಟಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಹಣ ಹೇಗೆ ಹೊಂದಾಣಿಕೆ ಮಾಡಬೇಕು ಎಂಬ ಚಿಂತೆ ಕಾಡಲು ಆರಂಭಿಸಿದೆ. ಸಮಸ್ಯೆ ಆಗುತ್ತಿರುವ ವಿಚಾರವನ್ನು ನಟಿ ಸ್ನೇಹಿತನೊಬ್ಬ ಪೊಲೀಸರಿಗೆ ತಿಳಿಸಿದ್ದಾನೆ. ನಟಿಯ ಸ್ನೇಹಿತ ಅಸಿರ್ ಕಾಜಿ ಹಣ ಸುಲಿಗೆಯಲ್ಲಿ ಪಾಲ್ಗೊಂಡಿದ್ದ ಎನ್ನುವ ವಿಚಾರವೂ ತನಿಖೆ ವೇಳೆ ಗೊತ್ತಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಪ್ರವೀಣ್ ವಾಲಿಂಬೆ (28) ಮತ್ತು ಸೂರಜ್ ಪರದೇಸಿ (32) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಜಿ ಮತ್ತು ಇನ್ನೊಬ್ಬ ಶಂಕಿತನನ್ನು ಇನ್ನೂ ಪತ್ತಗೆ ಪೊಲೀಸರು ಬಲೆ ಬೀಸಿದ್ದಾರೆ. ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ), 170 (ಸಾರ್ವಜನಿಕ ನೌಕರನನ್ನು ವ್ಯತಿರಿಕ್ತಗೊಳಿಸುವುದು), 420 (ವಂಚನೆ), 384 (ಸುಲಿಗೆ), 388 (ಮರಣ, ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧದ ಆರೋಪದ ಬೆದರಿಕೆಯಿಂದ ಸುಲಿಗೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಹೊಸ ವರ್ಷದ ಆರಂಭಕ್ಕೂ ಮುನ್ನ ಬೆಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮಾದಕ ವಸ್ತು ಸಾಗಾಟಗಾರರನ್ನು ವಶಕ್ಕೆ ಪಡೆದಿದ್ದಾರೆ. ಆಂಧ್ರ ಪ್ರದೇಶ, ನೇಪಾಳದಿಂದ ಮಾದಕ ವಸ್ತುಗಳನ್ನು ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಮಾಡಿದ್ದರು.
ಎಲ್ಲಿಂದ ಶುರು: ಮುಂಬೈನಲ್ಲಿ ಬಾಲಿವುಡ್ ನಾಯಕ ಸುಶಾಂತ್ ಸಿಂಗ್ ನಿಗೂಢ ಸಾವಿನ ನಂತರ ಡ್ರಗ್ಸ್ ಸುಳಿ ತಲೆ ಎತ್ತಿತ್ತು. ಬಾಲಿವುಟ್ ನಟಿ ರಿಯಾ ಚಕ್ರವರ್ತಿ ಸೇರಿ ಅನೇಕ ನಟಿ ಮಣಿಗಳ ವಿಚಾರಣೆ ನಡೆಯಿತು. ಸ್ಯಾಂಡಲ್ ವುಡ್ ನಲ್ಲಿ ರಾಗಿಣಿ ಮತ್ತು ಸಂಜನಾ ಗರ್ಲಾನಿ ಜೈಲು ವಾಸ ಅನುಭವಿಸಬೇಕಾಗಿ ಬಂದಿತ್ತು.
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಸಹ ವಿಚಾರಣೆಯ ಹಂತದಲ್ಲಿಯೇ ಇದೆ. ನಟಿಯರ ತಲೆಕೂದಲು ಪರೀಕ್ಷೆ ವರದಿಯಲ್ಲಿ ಡ್ರಗ್ಸ್ ಸೇವಿಸಿದ್ದರ ಬಗ್ಗೆ ಸಾಕ್ಷ್ಯ ಸಿಕ್ಕಿದೆ. ಒಟ್ಟಿನಲ್ಲಿ ಎಲ್ಲಿಂದಲೋ ಹುಟ್ಟಿಕೊಂಡ ಡ್ರಗ್ಸ್ ಜಾಲಕ್ಕೆ ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಲೇ ಇವೆ.