ನಗರ್ತಪೇಟೆಯ ಹನುಮಾನ್‌ ಚಾಲೀಸಾ ಪ್ರಕರಣ, ಹಲ್ಲೆಗೊಳಗಾದ ಅಂಗಡಿ ಮಾಲೀಕನ ವಿರುದ್ಧವೇ ಎಫ್‌ಐಆರ್‌!

By Suvarna NewsFirst Published Apr 5, 2024, 12:13 PM IST
Highlights

ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಹನುಮಾನ್‌ ಚಾಲೀಸಾ ಪ್ರಕರಣದಲ್ಲಿ ಈಗ ರೋಚಕ ತಿರುವು ಸಿಕ್ಕಿದೆ. ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾದ ಅಂಗಡಿ ಮಾಲೀಕ ಮುಖೇಶ್ ವಿರುದ್ಧವೇ ಈಗ  ಎಫ್ ಐ ಆರ್ ದಾಖಲಾಗಿದೆ. 

ಬೆಂಗಳೂರು (ಏ.5): ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಹನುಮಾನ್‌ ಚಾಲೀಸಾ ಪ್ರಕರಣದಲ್ಲಿ ಈಗ ರೋಚಕ ತಿರುವು ಸಿಕ್ಕಿದೆ. ಅನ್ಯಕೋಮಿನ ಯುವಕರಿಂದ ಹಲ್ಲೆಗೊಳಗಾದ ಅಂಗಡಿ ಮಾಲೀಕ ಮುಖೇಶ್ ವಿರುದ್ಧವೇ ಈಗ  ಎಫ್ ಐ ಆರ್ ದಾಖಲಾಗಿದೆ. 

ಘಟನೆ ಸಂಬಂಧ ಅಂದು ಸುಲೈಮನ್ ಎಂಬಾತನ ವಿರುದ್ಧ  ಎಫ್ ಐ ಆರ್ ದಾಖಲಾಗಿತ್ತು. ಈಗ ಮುಖೇಶ್ ಮೇಲೆ ಎಫ್ ಐ ಆರ್ ದಾಖಲು ಮಾಡಲಾಗಿದೆ. ರಂಜಾನ್ ಇದ್ದರೂ ಭಕ್ತಿ ಗೀತೆ ಹಾಕಿ ಕಿರಿಕ್ ಮಾಡ್ತಿದ್ದ ಎಂದು  ಸುಲೈಮನ್ ತಂದೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ನಿರ್ದೇಶನ ಮೇಲೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.

ಇವರೇ ನೋಡಿ ಈ ಬಾರಿ 2024ರ ಫೋರ್ಬ್ಸ್‌ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಟಾಪ್‌ 10 ಶ್ರೀಮಂತರು!

ನಮಾಜ್‌ ಮಾಡುವ ಸಮಯಕ್ಕೆ ಹನುಮಾನ್‌ ಚಾಲೀಸಾ ಹಾಕಿದ ಎಂಬ ಕಾರಣಕ್ಕೆ ಅನ್ಯಕೋಮಿನ ಕೆಲ ಯುವಕರು ಮೊಬೈಲ್‌ ಅಂಗಡಿ ಮಾಲೀಕ ಮುಖೇಶ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಇದಕ್ಕೆ ಹಿಂದೂ ಕಾರ್ಯಕರ್ತರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಸಂಸದರು ಸೇರಿ ಬಿಜೆಪಿ ಕಾರ್ಯಕರ್ತರು ಸೇರಿ ಸಾವಿರಾರು ಮಂದಿ ಪ್ರತಿಭಟನೆ ನಡೆಸಿದ್ದರು. 

ಅದು ಕೇವಲ ಒಂದು ಹಲ್ಲೆಗೆ ಇಡೀ ಏರಿಯಾನೇ ಬಂದ್ ಮಾಡಿದ್ದ ಕೇಸ್ ಆಗಿತ್ತು. ಸಾವಿರಾರು ಮಂದಿಯ ಪ್ರತಿಭಟನೆಗೆ  ಪೊಲೀಸ್ ಪಡೆ ದಂಗಾಗಿತ್ತು. ರಾತ್ರೋ ರಾತ್ರಿ ಆರೋಪಿಗಳ ಬಂಧನಕ್ಕಾಗಿ ಆ ಪ್ರತಿಭಟನೆ ನಡೆದಿತ್ತು.

ಯುಗಾದಿ ಹಬ್ಬಕ್ಕೆ ಕೆಲವೇ ದಿನ ಬಾಕಿ ಇರುವಾಗ ಮಾಂಸಹಾರಿಗಳಿಗೆ ಶಾಕಿಂಗ್ ನ್ಯೂಸ್!

ಇದೀಗ ನಗರತ್ ಪೇಟೆಯಲ್ಲಿ ಹನುಮಾ ಚಾಲಿಸ ಹಾಡು ಹಾಕಿದ್ದಕ್ಕೆ ಹಲ್ಲೆ ಕೇಸ್ ಗೆ ಇದೀಗ ಟ್ವಿಸ್ಟ್ ಸಿಕ್ಕಿದ್ದು, ಹಲ್ಲೆಗೊಳಗೊಳಗಾದ ಮುಖೇಶ್ ವಿರುದ್ದವೇ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. ಬಂಧಿತ ಆರೋಪಿ ಸುಲೇಮಾನ್ ತಂದೆ ನೀಡಿದ ದೂರಿನ ಅನ್ವಯ ನ್ಯಾಯಾಲಯದ ಸೂಚನೆ ಮೇರೆಗೆ  ಎಫ್‌ಐಆರ್‌ ದಾಖಲಾಗಿದೆ.

ರಂಜಾನ್ ಹಬ್ಬದ ಹಿನ್ನಲೆ ಪ್ರಾರ್ಥನೆ ಇದ್ದರೂ ಜೋರಾಗಿ ಮುಖೇಶ್ ಸ್ಪೀಕರ್‌ನಲ್ಲಿ ಹಾಡು ಹಾಕುತ್ತಿದ್ದ. ನಾಲ್ಕೈದು ದಿನದಂತೆ ಒಂದೇ ಸಮಯಕ್ಕೆ ಹಾಡುಗಳನ್ನು ಹಾಕಿ ಜೋರಾಗಿ ಸ್ಪೀಕರ್ ಇಟ್ಟಿದ್ದ. ಮಾರ್ಚ್ 17 ರಂದು ಸುಲೇಮಾನ್ ಸೇರಿ ಸ್ನೇಹಿತರು ಮುಖೇಶ್ ಗೆ ಈ ಬಗ್ಗೆ  ಪ್ರಶ್ನಿಸಿದ್ದು ಪವಿತ್ರ ರಂಜಾನ್ ಹಬ್ಬವಿದೆ, ಮೂರು ಸಾವಿರ ಮಂದಿ ಇದೇ ರಸ್ತೆಯಲ್ಲಿ ಪ್ರಾರ್ಥನೆಗೆ ಹೋಗ್ತಾರೆ. ಯಾಕಿಷ್ಟು ಸೌಂಡ್ ಇಟ್ಟು ಹಾಡುಗಳನ್ನ ಹಾಕ್ತೀಯಾ ಎಂದು ಪ್ರಶ್ನೆ ಮಾಡಿದ್ರಂತೆ, ಇದರ ಬೆನ್ನಲ್ಲೇ ಮುಖೇಶ್ ತನ್ನ ಮಗನ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

click me!